ನಟಿ ನುಸ್ರತ್ ಮಗುವಿನ ತಂದೆ ಯಾರು ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ
Team Udayavani, Sep 16, 2021, 4:07 PM IST
ಕೋಲ್ಕತಾ : ಟಿಎಂಸಿ ಸಂಸದೆ ಹಾಗೂ ಚಿತ್ರನಟಿ ನುಸ್ರತ್ ಜಹಾನ್ ಅವರ ಮಗನಿಗೆ ತಂದೆ ಯಾರು ಎನ್ನುವ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಂತಾಗಿದೆ.
ಆಗಸ್ಟ್ 26 ರಂದು ನುಸ್ರತ್ ಅವರು ಗಂಡು ಮಗುವಿಗೆ ಜನ್ಮ ನೀಡಿದರು. ತನ್ನ ಕಂದನಿಗೆ ಇಶಾನ್ ಎಂದು ನಾಮಕರಣ ಮಾಡಿದರು. ಇತ್ತೀಚಿಗೆ ಈ ಮಗುವಿಗೆ ತಂದೆ ಯಾರು ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಗರಂ ಆಗಿದ್ದ ಈ ನಟಿ, ತಂದೆಯಾದವನಿಗೆ ಅದು ಗೊತ್ತು ಎಂದು ಹೇಳಿದ್ದರು.
ಅಂದಹಾಗೆ ಪತಿ ನಿಖಿಲ್ ಜೈನ್ ಅವರಿಂದ ದೂರವಾದ ಬಳಿಕ ನುಸ್ರತ್ ಅವರು ಗರ್ಭವತಿಯಾಗಿದ್ದರು. ಆ ಮಗುವಿಗೆ ನನಗೆ ಸಂಬಂಧ ಇಲ್ಲ ಎಂದು ಜೈನ್ ಕೂಡ ಹೇಳಿದ್ದರು. ಅದರಂತೆ ನುಸ್ರತ್ ಕೂಡ ನಮ್ಮಿಬ್ಬರ ಮದುವೆ ಭಾರತದಲ್ಲಿ ಮಾನ್ಯವೇ ಅಲ್ಲ ಎಂದು ತಿರುಗೇಟು ನೀಡಿದ್ದರು.
ನುಸ್ರತ್ ಅವರು ಪತಿಯಿಂದ ದೂರವಾದ ಬಳಿಕ ಬಂಗಾಳಿ ನಟ ದೇಬಶಿಸು ದಾಸಗುಪ್ತನ ಜೊತೆ ಡೇಟಿಂಗ್ ನಲ್ಲಿದ್ದಾರೆ. ಈ ನಡುವೆ ಅವರು ಮಗುವಿಗೆ ತಾಯಿ ಆಗಿದ್ದು, ಅದಕ್ಕೆ ತಂದೆ ಯಾರು ಎನ್ನುವ ಪ್ರಶ್ನೆ ಜನರಲ್ಲಿ ಕಾಡಿತ್ತು. ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ಕೋಲ್ಕತ್ತಾ ಮಹಾನಗರ ಪಾಲಿಕೆಯ ವೆಬ್ ಸೈಟ್‍ನಲ್ಲಿ ಪ್ರಕಟಗೊಂಡಿರುವ ಇಶಾನ್‍ನ ಜನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರು ನಮೂದಿಸಲಾಗಿದೆ. ತಂದೆಯ ಹೆಸರಿನ ಜಾಗದಲ್ಲಿ ದೇಬಶಿಸಿ ದಾಸಗುಪ್ತ ಎಂದು ಬರೆಯಲಾಗಿದೆ.
ಗರ್ಭಿಣಿಯಾಗಿದ್ದ ವೇಳೆ ನುಸ್ರತ್ ಜೊತೆ ದಾಸಗುಪ್ತಾ ಸಹ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಕಳೆದ ವಾರ ಮಗನ ಜೊತೆ ನುಸ್ರತ್ ಮಹಾನಗರ ಪಾಲಿಕೆಗೆ ತೆರಳಿ ಮಗುವಿನ ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರು. ಬುಧವಾರ ಸಂಜೆ ಪಾಲಿಕೆಯ ವೆಬ್‍ಸೈಟ್‍ನಲ್ಲಿ ಪ್ರಮಾಣಪತ್ರ ಪ್ರಕಟವಾಗಿದ್ದು, ಅದರಲ್ಲಿ ತಂದೆಯ ಹೆಸರು ಕೂಡ ಬಹಿರಂಗವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.