ಸ್ಪೇಸ್ ಟೂರ್ ಶುರು; ಏನಿದು ಸ್ಪೇಸ್ ಟೂರಿಸಂ?
ನಾಲ್ವರು ಪ್ರಯಾಣಿಕರಿಗೆ ಸ್ಪೇಸ್ ಎಕ್ಸ್ 5 ತಿಂಗಳು ಕಠಿನ ತರಬೇತಿ ನೀಡಿತ್ತು.
Team Udayavani, Sep 17, 2021, 1:30 PM IST
ಸ್ಪೇಸ್ ಎಕ್ಸ್ ದಿಗ್ಗಜ ಎಲನ್ ಮಸ್ಕ್ “ಬಾಹ್ಯಾಕಾಶ ಪ್ರವಾಸೋದ್ಯಮ’ಕ್ಕೆ ಚಾಲನೆ ನೀಡುವ ಮೂಲಕ ಮತ್ತೂಂದು ಮೈಲುಗಲ್ಲು ನೆಟ್ಟಿದ್ದಾರೆ. ನಾಗರಿಕ ಬಾಹ್ಯಾಕಾಶ ನೌಕೆ ಮೂಲಕ ವೃತ್ತಿಪರರಲ್ಲದ ನಾಲ್ವರನ್ನು ಗಗನಯಾತ್ರೆಗೆ ಕಳುಹಿಸಿದ್ದಾರೆ…
ಏನಿದು ಸ್ಪೇಸ್ ಟೂರಿಸಂ? :
ನಾಗರಿಕರನ್ನು ಭೂ ಕಕ್ಷೆಯ ಸುತ್ತಾಟಕ್ಕೆ ಕಳುಹಿಸುವ ಯೋಜನೆ. ಸ್ಪೇಸ್ ಎಕ್ಸ್ ತನ್ನ ಪುನರ್ಬಳಕೆಯ “ಫಾಲ್ಕನ್ 9′ ರಾಕೆಟ್‌ನ “ಇನ್‌ಸ್ಪಿರೇಷನ್ 4 ಮಿಷನ್’ ನೌಕೆಯಲ್ಲಿ ನಾಲ್ವರನ್ನು ಕೂರಿಸಿ, ಬುಧವಾರ ರಾತ್ರಿ ಈ ಯಾತ್ರೆಗೆ ಚಾಲನೆ ನೀಡಿದೆ.
ಎಲ್ಲಿಯವರೆಗೆ ಪ್ರಯಾಣ?: ಸ್ಪೇಸ್ ಎಕ್ಸ್ ಹಾರಿಬಿಟ್ಟ ಇನ್‌ಸ್ಪಿರೇಶನ್ 4 ನೌಕೆಯು ಭೂಮೇಲ್ಮೆ„ನಿಂದ 675 ಕಿ.ಮೀ. ದೂರದಲ್ಲಿ ಹಾರಾಟ ನಡೆಸಲಿದೆ. ಅಂತಾ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಿಂತಲೂ ಎತ್ತರದಲ್ಲಿ ಹಾರಾಡಲಿದೆ.
ನಾಲ್ವರು ನಭಕ್ಕೆ!:
ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ವೃತ್ತಿಪರರಲ್ಲದ ನಾಲ್ವರು ಬಾಹ್ಯಾಕಾಶ ಪ್ರಯಾಣ ಬೆಳೆಸಿದ್ದಾರೆ. ಸ್ಪೇಸ್ ಎಕ್ಸ್‌ನ ಉದ್ಯಮದ ಜತೆ ಕೈಜೋಡಿಸಿರುವ ಬಿಲಿಯನೇರ್ ಜಾರೆಡ್ ಐಸಾಕ್‌ಮನ್ ಜತೆಗೆ ಹ್ಯಾಲೆ ಆರ್ಸೆನಿಯಾಕ್ಸ್, ಸಿಯಾನ್ ಪ್ರೊಕ್ಟರ್, ಕ್ರಿಸ್ ಸೆಂಬ್ರೊಸ್ಕಿ ನೌಕೆಯಲ್ಲಿದ್ದಾರೆ.
ಕ್ಯಾನ್ಸರ್ ಗೆದ್ದಾಕೆ ಮೊದಲ ಪ್ಯಾಸೆಂಜರ್ :
ಕ್ಯಾನ್ಸರ್‌ನಿಂದ ಬದುಕುಳಿದ, 29 ವರ್ಷದ ಹ್ಯಾಲೆ ಆರ್ಸೆನಿಯಾಕ್ಸ್‌ಗೆ ಸ್ಪೇಸ್ ಎಕ್ಸ್ ತನ್ನ “ಮೊದಲ ನಾಗರಿಕ ಪ್ರಯಾಣಿಕ’ ಗೌರವ ನೀಡಿದೆ. ಮೂಳೆ ಕ್ಯಾನ್ಸರ್ ಚಿಕಿತ್ಸೆ ಕಾರಣ ಈಕೆಯ ಎಡಗಾಲಿಗೆ ರಾಡ್ ಅಳವಡಿಸಲಾಗಿದೆ.
5 ತಿಂಗಳ ತಾಲೀಮು : ನಾಲ್ವರು ಪ್ರಯಾಣಿಕರಿಗೆ ಸ್ಪೇಸ್ ಎಕ್ಸ್ 5 ತಿಂಗಳು ಕಠಿನ ತರಬೇತಿ ನೀಡಿತ್ತು. ಬಾಹ್ಯಾಕಾಶದ ಫಿಟ್ನೆಸ್, ಕೇಂದ್ರಾಪಗಾಮಿ, ಮೈಕ್ರೋ ಗ್ರಾವಿಟಿ ಬ್ಯಾಲೆನ್ಸ್, ಎಮರ್ಜೆನ್ಸಿ ಡ್ರಿಲ್, ನಿರಂತರ ವೈದ್ಯಕೀಯ ಪರೀಕ್ಷೆ ಕೈಗೊಂಡಿತ್ತು.
90 ನಿಮಿಷದಲ್ಲಿ ಭೂಮಿಗೆ ಸುತ್ತು! : ನೌಕೆಯ ವೇಗವು ಶಬ್ದದ ವೇಗಕ್ಕಿಂತ 22 ಪಟ್ಟು ಅಧಿಕ, ಗಂಟೆಗೆ 27,600 ಕಿ.ಮೀ. ಕ್ರಮಿಸಲಿದೆ. ಭೂಮಿಗೆ ಒಂದು ಸುತ್ತು ಬರಲು ಈ ನೌಕೆಗೆ ಕೇವಲ 90 ನಿಮಿಷ ಸಾಕು!
ಟಿಕೆಟ್ ದರವೆಷ್ಟು? : 200 ಮಿಲಿಯನ್ ಡಾಲರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.