ರಾಜಕೀಯ ಅದೃಷ್ಟದ ಊರಲ್ಲಿ ಬಿಜೆಪಿ ಕಾರ್ಯಕಾರಿಣಿ
Team Udayavani, Sep 17, 2021, 10:36 AM IST
ದಾವಣಗೆರೆ: “ರಾಜಕೀಯ ಪಕ್ಷಗಳ ಅದೃಷ್ಟ ತಾಣ’ಎಂದೇ ಖ್ಯಾತಿ ಪಡೆದಿರುವ ದಾವಣಗೆರೆಯಲ್ಲಿ 14ವರ್ಷಗಳ ನಂತರ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸೆ. 18ಮತ್ತು 19 ರಂದು ನಡೆಯಲಿದೆ.
ಬಿಜೆಪಿ ಭದ್ರಕೋಟೆಯಾಗಿರುವದಾವಣಗೆರೆ ಜಿಲ್ಲೆಯಲ್ಲಿ ಮೂರನೇಬಾರಿಗೆ ರಾಜ್ಯ ಬಿಜೆಪಿ ಕಾರ್ಯಕಾರಿಣಿಆಯೋಜನೆಗೊಂಡಿದೆ. 2007ರಲ್ಲಿದಾವಣಗೆರೆಯ ಹದಡಿ ರಸ್ತೆಯಶಾಮನೂರು ಶಿವಶಂಕರಪ್ಪ ಪಾರ್ವತಮ್ಮಕಲ್ಯಾಣ ಮಂಟಪದಲ್ಲಿ ಎರಡನೇ ಬಾರಿ ರಾಜ್ಯಕಾರ್ಯಕಾರಿಣಿ ನಡೆದಿತ್ತು.
ರಾಜ್ಯ ಕಾರ್ಯಕಾರಿಣಿಯನ್ನುಕೇಂದ್ರದ ಅಂದಿನ ಹಣಕಾಸು ಸಚಿವ ಯಶವಂತ ಸಿನ್ಹಾಉದ್ಘಾಟಿಸಿದ್ದರು.ಮರು ವರ್ಷ ನಡೆದ ವಿಧಾನಸಭಾಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಪಡೆದಿದ್ದ ಬಿಜೆಪಿ,ರಾಜ್ಯ ರಾಜಕೀಯದಲ್ಲಿನ ಬದಲಾವಣೆಯ ಪರಿಣಾಮಮೊದಲ ಬಾರಿ ಅಧಿಕಾರದ ಗದ್ದುಗೆಗೇರಿತ್ತು.ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆಬಂದಿತ್ತು.
ಅಂದಿನಿಂದ ದಾವಣಗೆರೆ ಬಿಜೆಪಿಗೆಅದೃಷ್ಟತಾಣವಾಗಿದೆ.ಸೆ.2ರಂದು ವಿವಿಧ ಅಭಿವೃದ್ಧಿಕಾಮಗಾರಿಗಳ ಉದ್ಘಾಟನೆಗೆದಾವಣಗೆರೆಗೆ ಆಗಮಿಸಿದ್ದಕೇಂದ್ರದ ಗೃಹ ಸಚಿವ ಅಮಿತ್‌ಶಾ, ಮುಂದಿನ ವಿಧಾನಸಭಾಚುನಾವಣೆಯನ್ನು ಸಿಎಂಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇಎದುರಿಸಲಾಗುವುದು.
ಬಿಜೆಪಿ ಸಂಪೂರ್ಣಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆಎಂದು ತಮಗೆ ಸಂಪೂರ್ಣ ವಿಶ್ವಾಸ ಇದೆ ಎಂದುನೀಡಿರುವ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಭಾರೀಸಂಚಲನ ಸೃಷ್ಟಿಸಿದೆ.
ದಿಕ್ಸೂಚಿಯಾದೀತೇ?: “ರಾಜಕೀಯ ಚಾಣಕ್ಯ’ ಎಂದೇಗುರುತಿಸಲ್ಪಡುವ ಅಮಿತ್ ಶಾ ಹೇಳಿಕೆ ನೀಡಿದ16 ದಿನಗಳ ಅಂತರದಲ್ಲಿ ಅದೇ ದಾವಣಗೆರೆಯಲ್ಲಿನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ವಿಧಾನಸಭಾಚುನಾವಣೆ ಯಾರ ನೇತೃತ್ವದಲ್ಲಿ ನಡೆಯಲಿದೆಎಂಬುದಕ್ಕೆ ರಾಜ್ಯ ಪದಾಧಿಕಾರಿಗಳ ಸಭೆ, ಕೋರ್‌ಕಮಿಟಿ ಮತ್ತು ಕಾರ್ಯಕಾರಿಣಿ ಸಭೆ ದಿಕ್ಸೂಚಿ ಆಗಬಹುದು ಎಂಬ ಲೆಕ್ಕಾಚಾರ ಕಮಲ ಪಾಳೆಯದಲ್ಲಿದೆ.
ಬಿಜೆಪಿಯ ಪರಮೋತ್ಛ ನಾಯಕರಾಗಿರುವ ಅಮಿತ್‌ಶಾ ಪ್ರತಿ ಹೇಳಿಕೆಯ ಹಿಂದೆ ಮುಂದಿನ ರಾಜಕೀಯಲೆಕ್ಕಾಚಾರ ಇದ್ದೇ ಇರುತ್ತದೆ ಎಂಬುದು ಜನಜನಿತ.ಮುಂದಿನ ವಿಧಾನಸಭಾ ಚುನಾವಣೆ ನೇತೃತ್ವದಕುರಿತಂತೆ ನೀಡಿರುವ ಹೇಳಿಕೆಯೂ ಅದೇ ಮಹತ್ವಪಡೆದುಕೊಂಡಿದೆ. ಹಾಗಾಗಿಯೇ ದಾವಣಗೆರೆಯಲ್ಲಿನಡೆಯಲಿರುವ ರಾಜ್ಯ ಕಾರ್ಯಕಾರಿಣಿಯೂ ಬಿಜೆಪಿಪಾಲಿಗೆ ಮಹತ್ವದ್ದಾಗಿದೆ.ಅಮಿತ್ ಶಾ ಹೇಳಿಕೆಗೆ ಬಿಜೆಪಿಯ ಕೆಲ ಹಿರಿಯಮುಖಂಡರು ಬದ್ಧತೆ ಪ್ರದರ್ಶಿಸಿದರೆ, ಇನ್ನು ಕೆಲವರು ಸಮಯಾವಕಾಶ ಇದೆ.
ಈಗಲೇ ನಾಯಕತ್ವ ಕುರಿತುಹೇಳಿಕೆ ನೀಡುವ ಅವಸರ ಇರಲಿಲ್ಲ ಎಂಬ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿದಾವಣಗೆರೆಯಲ್ಲಿ ನಡೆಯಲಿರುವ ಕಾರ್ಯಕಾರಿಣಿ ಮತ್ತುಕೋರ್ ಕಮಿಟಿ ಸಭೆಯಲ್ಲಿ ನಡೆಯುವ ಚರ್ಚೆ, ಅದರಪ್ರತಿಫಲ ಬಿಜೆಪಿ ಮಾತ್ರವಲ್ಲ, ರಾಜ್ಯ ರಾಜಕೀಯವಲಯದಲ್ಲಿ ಭಾರೀ ಕೌತುಕಕ್ಕೆ ಕಾರಣವಾಗಿದೆ.ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿಅಧಿಕಾರ ವಹಿಸಿಕೊಂಡ ನಂತರ ಪ್ರಪ್ರಥಮ ಬಾರಿಗೆಪದಾಧಿಕಾರಿಗಳ ಸಭೆ, ಕೋರ್ ಕಮಿಟಿ ಸಭೆ ಮತ್ತುಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುತ್ತಿರುವುದುಸಹ ದಾವಣಗೆರೆಯಲ್ಲೇ ಎಂಬುದು ಗಮನಾರ್ಹ.
ಅಂತೆಯೇ ನಳಿನ್‌ಕುಮಾರ್ ರಾಜ್ಯ ಬಿಜೆಪಿಯಚುಕ್ಕಾಣಿ ಹಿಡಿದ ನಂತರ ಪೂರ್ಣ ಪ್ರಮಾಣದ ರಾಜ್ಯಕಾರ್ಯಕಾರಿಣಿ ನಡೆಯುತ್ತಿರುವುದು ದಾವಣಗೆರೆಯಲ್ಲೇ.ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲನಡೆಯುವ ಪದಾಧಿಕಾರಿಗಳ, ಕೋರ್ ಕಮಿಟಿ ಸಭೆಮತ್ತು ಕಾರ್ಯಕಾರಿಣಿ ಕುತೂಹಲದ ಕೇಂದ್ರವಾಗಿದೆ.
ರಾ.ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.