ಪ್ರಮುಖ ವೃತ್ತಗಳಲ್ಲಿ ಸಂಚಾರ ಅವ್ಯವಸ್ಥೆ
ಇದ್ದೂ ಇಲ್ಲದಂತಾಗಿರುವ ಸಿಗ್ನಲ್ ದೀಪಗಳು ; ವೈಜ್ಞಾನಿಕ ರಸ್ತೆ ತಿರುವು ನಿರ್ಮಾಣಕ್ಕೆ ಸಾರ್ವಜನಿಕರ ಆಗ್ರಹ
Team Udayavani, Sep 17, 2021, 3:50 PM IST
ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್ ವೃತ್ತದಲ್ಲಿ ಹಾಗೂ ಟಿ.ಬಿ ವೃತ್ತದಲ್ಲಿ ಇತ್ತೀಚಿನ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಅಪಘಾತಗಳು ಸಾಮಾನ್ಯವಾಗಿವೆ. ಈ ನಿಟ್ಟಿನಲ್ಲಿ ಇಲ್ಲಿ ಸಂಚಾರ ದಟ್ಟಣೆ ನಿಯಂತ್ರಣದ ಜತೆಗೆ ವೈಜ್ಞಾನಿಕವಾಗಿ ರಸ್ತೆ ತಿರುವು ನಿರ್ಮಿಸಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಅವೈಜ್ಞಾನಿಕ ವೃತ್ತ: ನಗರದ ಡಿ.ಕ್ರಾಸ್ ಬಳಿ ಇದೀಗ ರೇಲ್ವೆ ಮೇಲ್ಸೇತುವೆ ನಿರ್ಮಾಣವಾಗಿದ್ದು, ಬೆಂಗಳೂರು ಹಿಂದೂ ಪುರ ಹೆದ್ದಾರಿ ಮೂಲಕ ತೆರಳುವ ನೂರಾರು ವಾಹನಗಳು ಯಾವುದೇ ಅಡೆತಡೆ ಇಲ್ಲದೇ, ಡಿ.ಕ್ರಾಸ್ ವೃತ್ತದ ಮಾರ್ಗವಾಗಿ ಚಲಿಸುತ್ತವೆ. ಇಲ್ಲಿನ ವೃತ್ತ ಸಹ
ಅವೈಜ್ಞಾನಿಕವಾಗಿದ್ದು, ಹೆದ್ದಾರಿ ಬದಿಯಲ್ಲಿ ಇರಬೇಕಾದ ರಸ್ತೆ ವ್ಯವಸ್ಥೆ ಇಲ್ಲಿಲ್ಲ. ಇನ್ನು ರಸ್ತೆ ಬದಿಯಲ್ಲಿನ ಅಂಗಡಿಗಳಿಗೆ ಬರುವ ಗ್ರಾಹಕರು ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದ, ಭಾರೀ ವಾಹನಗಳು ರಸ್ತೆಯಲ್ಲಿ ಸಂಚರಿಸಲು ತೊಂದರೆಯಾಗುತ್ತಿದೆ.
ಇತ್ತೀಚೆಗಷ್ಟೇ ಇದೇ ಜಾಗದಲ್ಲಿ ವಾಹನವೊಂದು ವೃದ್ಧರೊಬ್ಬರ ಮೇಲೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದ ಘಟನೆ ನಡೆದಿತ್ತು. ಹೊರಗಡೆ ಯಿಂದ ಬರುವ ವಾಹನ ಗಳಿಗೆ ಇಲ್ಲಿನ ರಸ್ತೆಯ ಬಗ್ಗೆ ಅರಿವಿಲ್ಲದೇ ಅಪಘಾತಗಳು ಸಂಭವಿಸುತ್ತಿರುತ್ತವೆ. ಇಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಿ, ಡಿ.ಕ್ರಾಸ್ ವೃತ್ತದ ಬಳಿ ಸಿಗ್ನಲ್ ದೀಪಗಳನ್ನು ಅಳವಡಿಕೆ ಮಾಡಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.
ಇದನ್ನೂ ಓದಿ:ಗುಲಾಬಿ ಪ್ರೀತಿಯ ಸಂಕೇತ, ಮಲ್ಲಿಗೆ ಅದೃಷ್ಟದ ಸಂಕೇತ; ಜಡೆಗೆ ಹೂವು ಮುಡಿಯುವುದೇಕೆ?
ಸಿಗ್ನಲ್ ದೀಪ ಕಾರ್ಯ ನಿರ್ವಹಿಸಲ್ಲ: ನಗರದ ಟಿ.ಬಿ ವೃತ್ತದ ಬಳಿ ಬೆಂಗಳೂರು-ಹಿಂದೂಪುರ ಹೆದ್ದಾರಿ ಸಹ ಹಾದುಹೋಗುವುದರಿಂದ ಇಲ್ಲಿಯೂ ಸಹ ವಾಹನಗಳ ಸಂಚಾರ ಹೆಚ್ಚಾಗಿದೆ. ಇದರೊಂದಿಗೆ ನಗರದಿಂದ ಚಲಿಸುವ ವಾಹನಗಳು ಸಹ ಇದೇ ವೃತ್ತದಲ್ಲಿ ಸೇರುತ್ತವೆ. ಇದರಿಂದ
ವಾಹನ ದಟ್ಟಣೆ ಹೆಚ್ಚಾಗಿ ಹಲವಾರು ಬಾರಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುತ್ತದೆ. ಈ ಹಿನ್ನೆಲೆ ಇಲ್ಲಿ ಸಿಗ್ನಲ್ ದೀಪಗಳನ್ನು ಸಹ ಅಳವಡಿಸ ಲಾಗಿದೆ. ಸಿಗ್ನಲ್ ದೀಪಗಳನ್ನು ಅಳವಡಿಸಿ 5 ವರ್ಷಗಳಾಗಿವೆ. ಆದರೆ ಸಿಗ್ನಲ್ ದೀಪಗಳು ಕಾರ್ಯ ನಿರ್ವಹಿಸದೇ ನೆಪ ಮಾತ್ರಕ್ಕೆ ಮಾತ್ರಕ್ಕೆ ಇವೆ ಎನ್ನುವಂತಾಗಿದೆ. ಸಿಗ್ನಲ್ ದೀಪವಿಲ್ಲದ ಕಾರಣ, ವೇಗವಾಗಿ ಆಗಮಿಸಿ ವೃತ್ತದಲ್ಲಿ ಸಂಧಿಸುವ ವಾಹನಗಳು ಡಿಕ್ಕಿ ಹೊಡಿಸಿಕೊಂಡು.
ಸಣ್ಣ ಅಪಘಾತಗಳಾಗಿ ಜಗಳ ಕಾಯುವ ದೃಶ್ಯಗಳು ನಿತ್ಯ ಸಾಮಾನ್ಯವಾಗಿವೆ. ಶೀಘ್ರವೇ ಸಂಬಂಧಪಟ್ಟವರು ಇಲ್ಲಿ ವಾಹನಗಳ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿ ನೇಮಿಸುವುದರೊಂದಿಗೆ ಟಿ.ಬಿ ವೃತ್ತದ ಬಳಿ ಸಿಗ್ನಲ್ ದೀಪಗಳು ಕಾರ್ಯ ನಿರ್ವಹಿಸುವಂತೆ ಮಾಡಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಸರ್ವಿಸ್ ರಸ್ತೆ ಇಲ್ಲ
ಪೊಲೀಸರು ಕೆಲಕಾಲ ಬಂದು ನಿಯಂತ್ರಿಸುವುದು ಬಿಟ್ಟರೆ ಸದಾಕಾಲ ಇಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ವಾಣಿಜ್ಯ ಮಳಿಗೆಗಳಿಗೆ ಹಾಗೂಸ್ಥಳೀಯರು ಸಂಚರಿಸಲು ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆಇಲ್ಲದಂತಾಗಿದೆ. ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆ ಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸ ಬೇಕಿದೆ ಎನ್ನುತ್ತಾರೆ ಸ್ಥಳೀಯರಾದ ಬಸವರಾಜ್.
ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರು ವಾಗ ಹಾಗೂ ಕೆಲವು ಸಮಯದಲ್ಲಿ ವಾಹನದಟ್ಟಣೆ ಹೆಚ್ಚಾಗುತ್ತಿದ್ದು, ಈ ವೇಳೆ ಡಿ.ಕ್ರಾಸ್ ರಸ್ತೆ ಮೂಲಕ ಹಾದು ಹೋಗುವ ವಾಹನಗಳನ್ನು ಈ ರಸ್ತೆಗೆ ಸಂಪರ್ಕಿಸುವ ಪ್ರಮುಖ ವೃತ್ತಗಳಿಂದ ನಿಯಂತ್ರಿಸಲಾಗುತ್ತಿದೆ. ಡಿ.ಕ್ರಾಸ್ ವೃತ್ತದಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ವ್ಯವಸ್ಥೆ ಮಾಡಲಾಗುವುದು. ರಸ್ತೆ ಬದಿ ಅನಗತ್ಯ ವಾಹನ ನಿಲುಗಡೆ ತೆರವು ಮಾಡಲು ಕ್ರಮ ವಹಿಸಲಾಗುವುದು.
-ಎಂ.ಬಿ.ನವೀನ್ ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್
-ಡಿ.ಶ್ರೀಕಾಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.