![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Sep 18, 2021, 8:01 PM IST
ಬೆಳಗಾವಿ:ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಶುಕ್ರವಾರ ನಾಪತ್ತೆ ಆಗಿದ್ದ ಎರಡು ವರ್ಷದ ಮಗು ಬೋರವೆಲ್‌ನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದ್ದು, ಮಗುವನ್ನು ಹೊರ ತೆಗೆಯಲು ಕಾರ್ಯಾಚರಣೆ ನಡೆದಿದೆ.
ಅಲಖನೂರ ಗ್ರಾಮದ ಶರತ್ ಹಸರೆ ಎಂಬ ಮಗು ಆಟವಾಡುತ್ತ ನಾಪತ್ತೆ ಆಗಿತ್ತು. ಈ ಬಗ್ಗೆ ಮಗುವಿನ ತಂದೆ ಸಿದ್ದಪ್ಪ ಹಾರೂಗೇರಿ ಠಾಣೆಯಲ್ಲಿ ದೂರು ನೀಡಿದ್ದರು. ಶನಿವಾರ ಮಧ್ಯಾಹ್ನ ಬೋರವೆಲ್ ಹತ್ತಿರ ಹೋದಾಗ ಮಗು ಬಿದ್ದಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಕಾರ್ಯ ಪ್ರವೃತ್ತರರಾದ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಗು ಮೃತಪಟ್ಟಿದೆ ಎಂದು ಶಂಕಿಸಲಾಗಿದ್ದು, ಇನ್ನು ಕೆಲವೇ ಹೊತ್ತಿನಲ್ಲಿ ಮಗುವನ್ನು ಹೊರ ತೆಗೆಯಲಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮಗು ನಾಪತ್ತೆ ಆಗಿರುವ ಬಗ್ಗೆ ಗುರುವಾರ ದೂರು ದಾಖಲಾಗಿತ್ತು. ನಾಪತ್ತೆ ಪ್ರಕರಣ ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಈ ಬೋರವೆಲ್ ಕೊರೆಯಿಸಿದಾಗ ನೀರು ಹತ್ತಿರಲಿಲ್ಲ. ಹೀಗಾಗಿ ಇದು ನಿಷ್ಕ್ರೀಯಗೊಂಡಿತ್ತು. ಆದರೆ ಅದನ್ನು ಮುಚ್ಚಿರಲಿಲ್ಲ. ಈ ಬಗ್ಗೆ ಪೊಲೀಸರು ಬೋರವೆಲ್ ಗೆ ಸಂಬಂಧಿಸಿದವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
You seem to have an Ad Blocker on.
To continue reading, please turn it off or whitelist Udayavani.