ನಿಮಗೆ ತಲೆತಿರುಗುವ ಸಮಸ್ಯೆ ಇದೆಯೇ?
Team Udayavani, Sep 11, 2021, 9:00 AM IST
“ವರ್ಟಿಗೊ’ ಅಂದರೆ ತಲೆತಿರುಗುವುದು. ವರ್ಟಿಗೊ ಒಂದು ರೋಗನಿದಾನ ಅಥವಾ ಅನಾರೋಗ್ಯ ಸ್ಥಿತಿಯಲ್ಲ; ಅದೊಂದು ರೋಗ ಲಕ್ಷಣ. ಅದರ ಗುಣಲಕ್ಷಣಗಳನ್ನು ಆಧರಿಸಿ ಜನರು ತಲೆತಿರುಗುವಿಕೆ, ತಲೆಸುತ್ತುವಿಕೆ ಎಂಬೆಲ್ಲ ಹೆಸರುಗಳಿಂದ ಅದನ್ನು ಕರೆಯುತ್ತಾರೆ. ತಲೆ ತಿರುಗುವಿಕೆಯ ಸ್ವಭಾವದ ಬಗ್ಗೆ ಹೇಳುವುದಾದರೆ, ವರ್ಟಿಗೊ ಬಾಧೆಗೀಡಾಗಿರುವವರು ಹಿಂದಕ್ಕೂ ಮುಂದಕ್ಕೂ ತಲೆ ತಿರುಗಿದಂತೆ ಅನುಭವ ಹೊಂದಬಹುದು ಅಥವಾ ತಲೆ ಸಂಪೂರ್ಣ ವರ್ತುಲಾಕಾರವಾಗಿ ತಿರುಗುವ ಅನುಭವವನ್ನೂ ಹೊಂದಬಹುದು. ಇದರ ಜತೆಗೆ ಹೊಟ್ಟೆ ತೊಳೆಸುವಿಕೆ, ವಾಂತಿ, ದೃಷ್ಟಿ ಮಂಜಾಗುವುದು, ತಲೆನೋವು, ಅಸಮತೋಲನ ಮತ್ತು ಮನಸ್ಸು ಗೊಂದಲವಾಗುವುದು ಕೂಡ ಜತೆ ಸೇರಬಹುದು. ಇದು ಯಾವುದೇ ವಯಸ್ಸಿನ ವ್ಯಕ್ತಿಗಳಿಗೆ, ಜೀವನಪರ್ಯಂತವೂ ಇರಬಹುದು. ನಿರ್ದಿಷ್ಟ ಕಾರಣಗಳಿಂದಾಗಿ ಉಂಟಾಗುವ ಅನಾರೋಗ್ಯ ಸ್ಥಿತಿಗಳ ಸಹ ಲಕ್ಷಣಗಳಾಗಿ ತಲೆ ತಿರುಗುವಿಕೆ ಉಂಟಾಗುತ್ತದೆ. ದೇಹ ವ್ಯವಸ್ಥೆಯಲ್ಲಿ ತಲೆದೋರಿರಬಹುದಾದ ಯಾವುದೇ ವಿಧವಾದ ಅನಾರೋಗ್ಯ, ನಶಿಸುವ ಅನಾರೋಗ್ಯಗಳು, ಮಿದುಳಿಗೆ ಉಂಟಾಗಿರುವ ಗಾಯ/ಹಾನಿ, ಆಟೊ ಇಮ್ಯೂನ್ ಕಾಯಿಲೆಗಳು ತಲೆ ತಿರುಗುವ ಅನುಭವವನ್ನು ಉಂಟು ಮಾಡಬಹುದಾಗಿದೆ. ಕೆಲವು ಔಷಧಗಳಿಂದಾಗಿಯೂ ಇದು ಉಂಟಾಗಬಹುದು. ಮುಖ್ಯವಾಗಿ ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಗಳಿಂದಾಗಿ ಗರ್ಭ ಧರಿಸಿದ ಅವಧಿ, ಋತುಚಕ್ರ ಮತ್ತು ಋತುಚಕ್ರ ಬಂಧದ ಸಮಯದಲ್ಲಿ ತಲೆ ತಿರುಗುವ ಅನುಭವಕ್ಕೆ ತುತ್ತಾಗಬಹುದಾಗಿದೆ.
ಇದು ನಿಮ್ಮಲ್ಲಿ ಅನೇಕರಿಗೆ ತಿಳಿದಿರಬಹುದಾದ ಸಾಮಾನ್ಯ ಮಾಹಿತಿಗಳು. ಆದರೆ ದೇಹದ ಸಮತೋಲನವನ್ನು ಕಾಪಾಡುವ ಅಂಗವು ಕಿವಿಯ ಒಳಗಿದೆ ಎಂಬುದು ನಿಮಗೆ ತಿಳಿದಿದೆಯೇ?
ಸುಳ್ಳಲ್ಲ, ಸಂಪೂರ್ಣ ಸತ್ಯ
ನಮ್ಮ ಕಿವಿಯಲ್ಲಿ ಮೂರು ವಿಭಾಗಗಳಿವೆ: ಹೊರಕಿವಿ, ಮಧ್ಯ ಕಿವಿ ಮತ್ತು ಒಳ ಕಿವಿ. ನಮ್ಮ ಒಳ ಕಿವಿಯು ಕೇಳಿಸಿಕೊಳ್ಳುವ ಮತ್ತು ಸಮತೋಲನದ ಪಾತ್ರವನ್ನು ನಿಭಾಯಿಸುತ್ತದೆ. ಪರಿಸರದ ಗುರುತ್ವಾಕರ್ಷಣ ಶಕ್ತಿಗೆ ಪ್ರತಿಸ್ಪಂದಿಸುವ ಮೂಲಕ ಒಳಕಿವಿಯಲ್ಲಿರುವ ಅಂಗವು ನಮ್ಮ ದೇಹದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಹೀಗೆಂದರೆ ಏನರ್ಥ ಎಂದು ನೀವು ಅಚ್ಚರಿಪಡಬಹುದು. ನಾವು ನಮ್ಮ ತಲೆಯನ್ನು ಯಾವುದೇ ಕೋನದಲ್ಲಿ ಮೇಲಿನಿಂದ ಕೆಳಕ್ಕೆ ಅಥವಾ ಎಡದಿಂದ ಬಲಕ್ಕೆ ತಿರುಗಿಸಿದಾಗ ನಮ್ಮ ಒಳಕಿವಿಯಲ್ಲಿ ಗುರುತ್ವಾಕರ್ಷಣ ಶಕ್ತಿಗೆ ಅನುಗುಣವಾಗಿ ದೇಹಶಾಸ್ತ್ರೀಯ ಚಟುವಟಿಕೆ ನಡೆಯುತ್ತದೆ (ಅಟ್ರಿಕಲ್, ಸಕ್ಯೂಲ್ ಮತ್ತು ಸೆಮಿ ಸಕ್ಯುìಲರ್ ಕೆನಲ್).
ಈ ವ್ಯವಸ್ಥೆಯು ತಲೆಯ ಚಲನೆಗೆ ಅನುಗುಣವಾಗಿ ಮಿದುಳಿಗೆ ನರಶಾಸ್ತ್ರೀಯ ಸಂದೇಶಗಳನ್ನು ಕಳುಹಿಸುವ ಮೂಲಕ ದೇಹದ ಸ್ಥಿರತೆ, ಸಮತೋಲನ (ಸ್ಥಿರ, ಚಲನೆ)ವನ್ನು ಕಾಪಾಡಿಕೊಳ್ಳುತ್ತದೆ. ಒಳಕಿವಿಯ ಈ ಭಾಗಕ್ಕೆ ಮತ್ತು ಮಿದುಳಿನ ಜತೆಗೆ ಅದರ ಸಂಪರ್ಕಕ್ಕೆ ಯಾವುದೇ ರೀತಿಯಲ್ಲಿ ಹಾನಿ ಉಂಟಾದರೆ ತಲೆತಿರುಗುವಿಕೆ ತಲೆದೋರುತ್ತದೆ. ತಲೆತಿರುಗುವಿಕೆ ಮತ್ತು ಅಸಮತೋಲನಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೇ. 85 ಒಳಕಿವಿಗೆ ಆಗಿರುವ ಹಾನಿಗೆ ಸಂಬಂಧಪಟ್ಟಿರುತ್ತವೆ. ಒಳಕಿವಿಯ ಸಮತೋಲನ ಭಾಗವು ಸರಿಯಾಗಿ ಕೆಲಸ ಮಾಡದ್ದರಿಂದ ವ್ಯಕ್ತಿಯಿಂದ ವ್ಯಕ್ತಿಗೆ ಲಕ್ಷಣಗಳು ಬದಲಾಗುತ್ತವೆ. ಕೆಲವು ಮಂದಿ ಹಾಸಿಗೆಯಿಂದ ಏಳುವಾಗ ಅಥವಾ ಕುಳಿತುಕೊಳ್ಳುವಾಗ, ಕುಳಿತಲ್ಲಿಂದ ಏಳುವಾಗ, ಮೆಟ್ಟಿಲು ಏರುವಾಗ ಅಥವಾ ಲಿಫ್ಟ್ನಲ್ಲಿ ಚಲಿಸುವಾಗ ತಲೆ ತಿರುಗುವ ಅನುಭವ ಹೊಂದಬಹುದು. ಕೆಲವರಿಗೆ ವಿಶ್ರಾಂತಿ ಪಡೆದುಕೊಳ್ಳುತ್ತಿರು ವಾಗ, ಏನೂ ಮಾಡದೆ ಇರುವಾಗಲೂ ತಲೆ ತಿರುಗುವಿಕೆ ಉಂಟಾಗಬಹುದು. ವೆಸ್ಟಿಬ್ಯುಲಾರ್ ಡಿಸ್‌ಫಂಕ್ಷನ್‌ಗೆ ತುತ್ತಾಗಿರುವ ವ್ಯಕ್ತಿಗಳಲ್ಲಿ ಬಹುತೇಕ ಬಾರಿ “ನಿಸ್ಟಾಗ್ಮಸ್’ ಎಂದು ಕರೆಯಲ್ಪಡುವ ಅನೈಚ್ಛಿಕ ಕಣ್ಣಿನ ಚಲನೆ ಉಂಟಾಗುತ್ತಿದ್ದು, ಇದರಿಂದ ಗಮನ ಕೇಂದ್ರೀಕರಣಕ್ಕೆ ತೊಂದರೆ ಮತ್ತು ನಿರ್ದಿಷ್ಟ ಕೆಲಸ ಮಾಡಲು ಅಸಾಧ್ಯವಾಗುತ್ತದೆ.
ತಲೆತಿರುಗುವಿಕೆಯ ಗುಣಲಕ್ಷಣ, ತೀವ್ರತೆ ಮತ್ತು ಸಹಲಕ್ಷಣಗಳ ಸಹಿತ ತಲೆತಿರುಗುವಿಕೆ ಎಷ್ಟು ಬಾರಿ ಉಂಟಾಗುತ್ತದೆ ಮತ್ತು ಅದರ ತೀಕ್ಷ್ಣತೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವೊಮ್ಮೆ ಲಕ್ಷಣಗಳು ಸರಣಿಗಳಾಗಿ ಉಂಟಾಗಬಹುದಾಗಿದ್ದು, ಇದನ್ನು ಗಮನಿಸಬೇಕಾಗಿರುತ್ತದೆ. ಸುದೀರ್ಘ ಕಾಲದ ವರೆಗೆ ತಲೆ ತಿರುಗುವಿಕೆ ಇದ್ದರೆ ದೈನಿಕ ಚಟುವಟಿಕೆಗಳಿಗೆ ತೊಂದರೆಯಾಗಬಹುದು, ಸಂವೇದನೆ, ಗ್ರಹಣ ಶಕ್ತಿಯಲ್ಲಿ ಕುಸಿತವಾಗಬಹುದು, ಬೀಳಬಹುದು ಮತ್ತು ಖನ್ನತೆಯೂ ಉಂಟಾಗಬಹುದು. ವಯೋವೃದ್ಧರಿಗೆ ಸಮತೋಲನದ ಸಮಸ್ಯೆಯಿಂದಾಗಿ ಬೀಳುವ ಅಪಾಯ ಹೆಚ್ಚು. ಒಳಕಿವಿಯ ಸಮತೋಲನಕ್ಕೆ ಸಂಬಂಧಿಸಿದ ಭಾಗಗಳಲ್ಲಿ ಎಲ್ಲಿ ಹಾನಿಯಾಗಿದೆ ಅಂದರೆ, ಕಿವಿಯ ಮಟ್ಟದಲ್ಲಿಯೇ ಇದೆಯೇ ಅಥವಾ ಮಿದುಳಿನ ಮಟ್ಟದಲ್ಲಿದೆಯೇ ಎಂಬುದನ್ನು ಆಧರಿಸಿ ತೊಂದರೆಯನ್ನು ಪೆರಿಫರಲ್ ಅಥವಾ ಸೆಂಟ್ರಲ್ ಡಿಸ್‌ಫಂಕ್ಷನ್ ಎಂಬುದಾಗಿ ವರ್ಗೀಕರಿಸಲಾಗುತ್ತದೆ.
ನನಗೆ ಈ ತೊಂದರೆ ಉಂಟಾದರೆ ಏನು ಮಾಡಬೇಕು?:
ನನಗೆ ಈ ತೊಂದರೆ ಉಂಟಾದರೆ ಏನು ಮಾಡಬಹುದು ಎಂಬ ಪ್ರಶ್ನೆ ಈಗ ನಿಮ್ಮಲ್ಲಿ ಉದ್ಭವಿಸಿರಬಹುದು. ಈ ಸಮಸ್ಯೆಯನ್ನು ಪರಿಹರಿಸಲು ಬಹು ವೈದ್ಯಕೀಯ ವಿಭಾಗಗಳ ತಂಡದ ಮೂಲಕ ನಿರ್ವಹಿಸುವುದು ತುಂಬಾ ಪ್ರಯೋಜನಕಾರಿಯಾಗಬಲ್ಲುದು. ಇದರಲ್ಲಿ ಜನರಲ್ ಮೆಡಿಸಿನ್, ನ್ಯೂರಾಲಜಿ, ಇಎನ್‌ಟಿ, ಆಡಿಯಾಲಜಿ, ಫಿಸಿಯೋಥೆರಪಿ, ಆಕ್ಯುಪೇಶನ್ ಥೆರಪಿ ಮತ್ತು ಆಪ್ತಮಾಲಜಿ ವಿಭಾಗಗಳು ಇದರಲ್ಲಿ ಸೇರಿಕೊಳ್ಳಬೇಕು. ರೋಗ ಪತ್ತೆಯನ್ನು ಆಧರಿಸಿ, ವೈದ್ಯರ ಜತೆಗೆ ಸಮಾಲೋಚನೆ
ನಡೆಸಿ ತಕ್ಕ ನಿರ್ವಹಣ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ. ಒಳ ಕಿವಿಯ ಕಾರ್ಯಸಾಮರ್ಥ್ಯವನ್ನು ಪರಿಶೀಲಿಸುವಲ್ಲಿ ಆಡಿಯಾಲಜಿಸ್ಟ್‌ಗಳು ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದು, ಶ್ರವಣ ಶಕ್ತಿ ವಿಶ್ಲೇಷಣೆಯನ್ನು, ಆ ಬಳಿಕ ಸಮತೋಲನ ವಿಶ್ಲೇಷಣೆಯನ್ನು ನಡೆಸುತ್ತಾರೆ. ರೋಗ ಪತ್ತೆಯನ್ನು ಆಧರಿಸಿ ಆಡಿಯೋ -ವೆಸ್ಟಿಬ್ಯುಲರ್ ಸ್ಪೆಶಲಿಸ್ಟ್ ವೈದ್ಯರು ವೆಸ್ಟಿಬ್ಯುಲರ್ ರಿಹ್ಯಾಬಿಲಿಟೇಶನ್ ಥೆರಪಿಯನ್ನು ಒದಗಿಸುತ್ತಾರೆ. ವೆಸ್ಟಿಬ್ಯುಲರ್ ಥೆರಪಿಯಲ್ಲಿ ಪರಿಹಾರ ಮತ್ತು ಹೊಂದಿಕೊಳ್ಳುವಿಕೆಗೆ ಸಹಾಯ ಮಾಡುವ ವಿವಿಧ ದೈಹಿಕ ಚಟುವಟಿಕೆಗಳು ಒಳಗೊಂಡಿರುತ್ತವೆ. ಇದೊಂದು ಲಕ್ಷಣ-ಆಧಾರಿತ ಚಿಕಿತ್ಸೆಯಾಗಿದ್ದು, ಆಯಾ ರೋಗಿಯ ಆವಶ್ಯಕತೆ ಮತ್ತು ಪ್ರಯೋಜನವನ್ನು ಆಧರಿಸಿರುತ್ತದೆ.
ಸೆ. 19-25: ಸಮತೋಲನ ಅರಿವು ಸಪ್ತಾಹ:
ವೆಸ್ಟಿಬ್ಯುಲರ್ ಡಿಸಾರ್ಡರ್ ಯಾವುದೇ ವಯಸ್ಸಿನಲ್ಲಿ ಲಿಂಗಬೇಧವಿಲ್ಲದೆ ಕಾಡಬಹುದಾದ ಒಂದು ಸಮಸ್ಯೆಯಾಗಿದೆ. ವೆಸ್ಟಿಬ್ಯುಲರ್ ಡಿಸಾರ್ಡರ್ ಅಸೋಸಿಯೇಶನ್ ಪ್ರತೀ ವರ್ಷ ಸೆಪ್ಟಂಬರ್ 19ರಿಂದ 25ರ ವರೆಗೆ ಒಂದು ವಾರ ಕಾಲ ಅಂತಾರಾಷ್ಟ್ರೀಯ ಸಮತೋಲನ ಅರಿವು ಸಪ್ತಾಹವನ್ನು ಆಚರಿಸುತ್ತದೆ. ವೆಸ್ಟಿಬ್ಯುಲರ್ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಹೆಚ್ಚಿಸಿ ರೋಗಿಗಳು ಸಮತೋಲನ ಹೊಂದುವತ್ತ ಮುನ್ನಡೆಯಲು ಸಹಾಯ ಮಾಡುವುದಕ್ಕಾಗಿ ಈ ಸಪ್ತಾಹವನ್ನು ಉಪಯೋಗಿಸಲಾಗುತ್ತದೆ. ಈ ಸಪ್ತಾಹ ಸಂದರ್ಭದಲ್ಲಿ ಅಲ್ಲಲ್ಲಿ ಈ ಬಗ್ಗೆ ಅರಿವು ಹುಟ್ಟಿಸುವ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಈ ಸಪ್ತಾಹ ಆಚರಣೆ ಯಾಕೆ ಮುಖ್ಯ ಎಂಬುದನ್ನು ವಿವರಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.
ಅನುಪ್ರಿಯಾ ಇ.
ಕ್ಲಿನಿಕಲ್ ಸೂಪರ್‌ವೈಸರ್ (ಆಡಿಯಾಲಜಿ)
ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ,
ಕೆಎಂಸಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.