ಥಾಣೆ ಸ್ಥಳೀಯ ಸಮಿತಿಯಿಂದ ಸಮಾಜ ಬಾಂಧವರಿಗೆ ಆಹಾರದ ಕಿಟ್ ವಿತರಣೆ
ಬಿಲ್ಲವರ ಅಸೋಸಿಯೇಶನ್ ಮುಂಬಯಿ
Team Udayavani, Sep 19, 2021, 2:06 PM IST
ಥಾಣೆ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಥಾಣೆ ಸ್ಥಳೀಯ ಸಮಿತಿಯ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರಿಗೆ ಆಹಾರದ ಕಿಟ್ ವಿತರಣೆ ಕಾರ್ಯಕ್ರಮವು ಥಾಣೆ ಸ್ಥಳೀಯ ಸಮಿತಿಯ ಕಚೇರಿಯಲ್ಲಿ ನಡೆಯಿತು.
ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಎಸ್. ಎಸ್. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕಾರ್ಯಾಲಯದ ಉಪಾಧ್ಯಕ್ಷ ದಯಾನಂದ ಪೂಜಾರಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಥಾಣೆಯ ಗಣೇಶ್ ಆರ್. ಪೂಜಾರಿ ಪಾಲ್ಗೊಂಡಿದ್ದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪ್ರಭಾ ಬಂಗೇರ ಹಾಗೂ ಥಾಣೆ ಹೊಟೇಲ್ ಉದ್ಯಮಿಗಳಾದ ವಿಶ್ವನಾಥ ಆರ್. ಪೂಜಾರಿ, ಸುರೇಶ್ ಎಸ್. ಪೂಜಾರಿ, ಭಾರತ್ ಬ್ಯಾಂಕ್‌ನ ನಿರ್ದೇಶಕ ಜ್ಯೋತಿ ಕೆ. ಸುವರ್ಣ, ಸ್ಥಳೀಯ ಸಮಿತಿಯ ಗೌರವ ಕೋಶಾಧಿಕಾರಿ ದೇವದಾಸ್ ಕರ್ಕೇರ ಉಪಸ್ಥಿತರಿದ್ದರು.
ಶ್ರೀ ಗುರುದೇವರಿಗೆ ಆರತಿ ಬೆಳಗಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಲಾ ಯಿತು. ಕಾರ್ಯಾಧ್ಯಕ್ಷ ಎಸ್. ಎಸ್. ಪೂಜಾರಿ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ದಯಾನಂದ ಪೂಜಾರಿ ಅವರು ಬಿಲ್ಲವರ ಅಸೋಸಿಯೇಶನ್‌ನ ನೂತನ ಅಧ್ಯಕ್ಷ ಹರೀಶ್ ಅಮೀನ್ ಜಿ. ಅಮೀನ್ ಮುಂದಾಳತ್ವದಲ್ಲಿ ಜರಗುತ್ತಿರುವ ಸಮಾಜಪರ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ, ಸಮಾಜದ ಬಡ ಬಂಧುಗಳು ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ಸಹಾಯಹಸ್ತ ನೀಡುವ ಮಹತ್ತರವಾದ ಕಾರ್ಯವನ್ನು ಬಿಲ್ಲವರ ಅಸೋಸಿಯೇಶನ್ ಮಾಡುತ್ತಿದೆ. ಅದಕ್ಕಾಗಿ ಕೊಡುಗೈ ದಾನಿಗಳು, ಹಿತೈಷಿಗಳು, ಭಾರತ್ ಬ್ಯಾಂಕ್‌ನ ಸಿಬಂದಿ ಸಹಕರಿಸಿದ್ದಾರೆ. ಇಂದು ನೀಡುತ್ತಿರುವ ಆಹಾರ ಕಿಟ್ ಅನ್ನು ಗುರುದೇವರ ಪ್ರಸಾದವೆಂದು ತಿಳಿದು ಯಾವುದೇ ಹಿಂಜರಿಕೆಯಿಲ್ಲದೆ ಸ್ವೀಕರಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿಸಿಖ್ ನಾಯಕರೇ ಪಂಜಾಬ್ ಮುಖ್ಯಮಂತ್ರಿಯಾಬೇಕು: ಸಿಎಂ ರೇಸ್ ನಿಂದ ಹಿಂದೆ ಸರಿದ ಅಂಬಿಕಾ ಸೋನಿ
ಅತಿಥಿಯಾಗಿದ್ದ ಗಣೇಶ್ ಪೂಜಾರಿ ಮಾತನಾಡಿ, ಪ್ರತಿಯೊಬ್ಬರು ಈ ಕೊರೊನಾ ಮಹಾಮಾರಿಯ ಸಮಯದಲ್ಲಿ ಹೆಚ್ಚಿನ ಜಾಗೃತೆ ವಹಿಸಿ ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು. ಅಸೋಸಿಯೇಶನ್ ನೀಡುತ್ತಿರುವ ಈ ಆಹಾರದ ಕಿಟ್‌ಗೆ ಸಮಾಜದ ಹಲವಾರು ಉದ್ಯಮಿಗಳು, ದಾನಿಗಳು ಸಹಕರಿಸಿದ್ದಾರೆ ಎಂದರು.
ಬಿಲ್ಲವರ ಅಸೋಸಿಯೇಶನ್ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪ್ರಭಾ ಬಂಗೇರ ಮಾತನಾಡಿ, ಮಹಿಳಾ ವಿಭಾಗದ ಸದಸ್ಯೆಯರು ಕೂಡಾ ಈ ಕಿಟ್ ವಿತರಣೆಗೆ ಸಹಕರಿಸಿದ್ದಾರೆ. ಇಂತಹ ಕಾರ್ಯಗಳಲ್ಲಿ ಮಹಿಳಾ ವಿಭಾಗವು ಎಂದೂ ಹಿಂಜರಿಯುವುದಿಲ್ಲ. ಮುಂದೆಯೂ ನಾವು ಇಂತಹ ಆಪತ್ಕಾಲದಲ್ಲಿ ಸಹಕಾರ ನೀಡುತ್ತೇವೆ ಎಂದರು.
ಜ್ಯೋತಿ ಕೆ. ಸುವರ್ಣ ಮಾತನಾಡಿ, ಬಿಲ್ಲವರ ಅಸೋಸಿಯೇಶನ್ ದಿ| ಜಯ ಸುವರ್ಣರ ಮಾರ್ಗದರ್ಶನದಂತೆ ಈಗಲೂ ಕಾರ್ಯ ನಿರ್ವಹಿಸುತ್ತಿದೆ. ಅವರ ದೂರದೃಷ್ಟಿಯ 22 ಸ್ಥಳೀಯ ಕಚೇರಿಗಳನ್ನು ಸ್ಥಾಪಿಸಲಾಗಿದೆ. ಅದರ ಸದುಪಯೋಗವನ್ನು ನಮ್ಮ ಸಮಾಜದ ಬಂಧುಗಳು ಪಡೆಯುತ್ತಿದ್ದಾರೆ. ಬಿಲ್ಲವರ ಅಸೋಸಿಯೇಶನ್ ನೀಡುವ ಆರ್ಥಿಕ ಸಹಾಯ, ಶೈಕ್ಷಣಿಕ ನೆರವಿನ ಯೋಜನೆಗಳ ಸದುಪಯೋಗ
ವನ್ನು ಸ್ಥಳೀಯ ಸಮಿತಿಗಳ ಮುಖಾಂತರ ಸಮಾಜ ಬಾಂಧವರು ಪಡೆಯಬೇಕು ಎಂದರು.
ಅತಿಥಿ-ಗಣ್ಯರು ನೂರಾರು ಸಮಾಜ ಬಾಂಧವರಿಗೆ ಆಹಾರ ಕಿಟ್‌ಗಳನ್ನು ವಿತರಿಸಿ ಶುಭ ಹಾರೈಸಿದರು. ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುರೇಶ್ ಎಸ್. ಪೂಜಾರಿ, ದೇವದಾಸ್ ಕರ್ಕೇರ, ಪ್ರಶಾಂತ್ ಪೂಜಾರಿ, ಲಕ್ಷ್ಮಣ್ ಕೆ. ಅಮೀನ್, ತ್ರಿವೇಣಿ ಪೂಜಾರಿ, ಎಂ. ಜಿ. ಸಾಲ್ಯಾನ್, ಜಯಂತ್ ಕೋಟ್ಯಾನ್, ಪ್ರೇಮಾನಂದ ಕುಕ್ಯಾನ್, ಗಿರಿಧರ ಕರ್ಕೇರ, ಜಯರಾಮ ಸಾಲ್ಯಾನ್, ಕೃಷ್ಣ ಸುವರ್ಣ, ವಸುಧಾ ಪೂಜಾರಿ, ರಾಘವ ಕೋಟ್ಯಾನ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಗೌರವ ಕಾರ್ಯಧ್ಯಕ್ಷ ಅನಂತ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.