ನ್ಯಾಯಾಲಯ ಆರಂಭ ಯಾವಾಗ?

ಬೆಂಗಳೂರು ಪೂರ್ವ ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಕೋರ್ಟ್‌ ಕಾಮಗಾರಿ

Team Udayavani, Sep 19, 2021, 3:10 PM IST

ನ್ಯಾಯಾಲಯ ಆರಂಭ ಯಾವಾಗ?

ಕೆ.ಆರ್‌.ಪುರ: ಬೆಂಗಳೂರು ಪೂರ್ವ ತಾಲೂಕಿನಲ್ಲಿ ಹಿಂದೆಯೇ ಕೋರ್ಟ್‌ ಆರಂಭವಾಗಬೇಕಿತ್ತು. ಸರ್ಕಾರದ ವಿಳಂಬ ನೀತಿಯಿಂದ ನ್ಯಾಯಾಲಯ ಕಾರ್ಯಾರಂಭವಾಗಿಲ್ಲ. ನಾಗರಿಕರು ನ್ಯಾಯಕ್ಕಾಗಿ ನಗರಕ್ಕೆ ಅಲೆದಾಡುವ ಸಂಕಷ್ಟ ಮುಂದುವರೆದಿದೆ.

ನ್ಯಾಯಾಲಯ ಆರಂಭಕ್ಕೆ ಹಸಿರು ನಿಶಾನೆ ದೊರೆಯಬಹುದೇ ಎಂಬ ನಿರೀಕ್ಷೆ ಹೆಚ್ಚಾಗಿದೆ. ತಾಲೂಕು ನೆಲಮಹಡಿಯಲ್ಲಿ ಕಳೆದ 6-7 ವರ್ಷದಿಂದ ಕೋರ್ಟ್‌ ಕಾಮಗಾರಿ ನಡೆಯುತ್ತಲೇ ಇದೆ. ಇನ್ನೂ ಪೂರ್ಣವಾಗಿಲ್ಲ.

ಹಾಗೇ ಉಳಿದ ಪ್ರಕರಣಗಳು: ಬೆಂಗಳೂರು ಪೂರ್ವ ತಾಲೂಕಿನ ಕೃಷ್ಣರಾಜಪುರ, ವರ್ತೂರು ಹಾಗೂ ಬಿದರಹಳ್ಳಿ ಮೂರು ಕಂದಾಯ ವೃತ್ತ
ಗಳನ್ನು ಒಳಗೊಂಡ ಕೃಷ್ಣರಾಜಪುರದಲ್ಲಿ ನ್ಯಾಯಲಯವು ಸ್ಥಾಪಿಸುವಂತೆ 2003 ರಲ್ಲೇ ಸರ್ಕಾರ ಸೂಚನೆ ಹೊರಡಿಸಿತ್ತು.ಬಳಿಕ ನ್ಯಾಯಾಲಯ
ಸ್ಥಾಪನೆಗೆ 2004 ಫೆ.27ಕ್ಕೆ ಸರ್ಕಾರ ಅಂತಿಮ ಸೂಚನೆಯನ್ನು ಹೊರಡಿಸಿತ್ತು, ಉಚ್ಚನ್ಯಾಯಾಲಯವು ಕೃಷ್ಣರಾಜಪುರದಲ್ಲಿ ನ್ಯಾಯಾಲಯ
ಕಾರ್ಯಾರಂಭಕ್ಕೆ ಸಮ್ಮತಿ ಸೂಚಿಸಿದೆ. ಆದಾಗ್ಯೂಕೆಆರ್‌ ಪುರದಲ್ಲಿ ಇನ್ನೂ ನ್ಯಾಯಾಲಯ ಕಾರ್ಯಾಚರಣೆ ಆರಂಭಿಸಿಲ್ಲ. ಇದರಿಂದಾಗಿ ಪೂರ್ವ ತಾಲೂಕಿನ ಪ್ರಕರಣಗಳು ಇತ್ಯರ್ಥವೇ ಆಗಿಲ್ಲ.

ಕೆ.ಆರ್‌.ಪುರದಲ್ಲಿ ಕೋರ್ಟ್‌ಗೆ ಒತ್ತಾಯ:
ನ್ಯಾಯಕ್ಕಾಗಿ ನಾಗರಿಕರು ಬೆಂಗಳೂರು ಹೃದಯ ಭಾಗಕ್ಕೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಆರ್‌ ಪುರ ಭಾಗದಿಂದ ನಗರಕ್ಕೆ ಆಗಮಿಸಲು ಸಂಚಾರದಟ್ಟಣೆಯಲ್ಲಿ ಅರ್ಧ ದಿನ ಕಳೆದು ಹೋಗುತ್ತದೆ ನಿಗದಿತ ಸಮಯಕ್ಕೆ ಸರಿಯಾಗಿ ನ್ಯಾಯಾಲಯಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ, ಕಕ್ಷಿದಾರರರ ಜತೆಗೆ ತಾಲೂಕಿನ ವಕೀಲರಿಗೂ ಕಾರ್ಯನಿರ್ವಹಿಸಲು ವಿಪರೀತ ತೊಂದರೆಯಾಗುತ್ತಿದ್ದು, ಕೃಷ್ಣರಾಜಪುರಲ್ಲಿ ಶೀಘ್ರವಾಗಿ ನ್ಯಾಯಾಲಯ ಕಾರ್ಯಾರಂಭಿಸುವಂತೆ ಪೂರ್ವ ತಾಲೂಕು ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ:ಬೆಂಗಳೂರು ಭಾರತದ ಬಯೋಟೆಕ್ ರಾಜಧಾನಿ: ಕೇಂದ್ರ ಸಚಿವ ಪಿಯೂಷ್ ಗೋಯಲ್

2001ರಲ್ಲಿ ಬೆಂಗಳೂರು ಪೂರ್ವ ತಾಲೂಕು ರಚನೆಯಾದ ಬಳಿಕ ದಕ್ಷಿಣ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು ಕೆ.ಆರ್‌. ಪುರಕ್ಕೆ ಸ್ಥಳಾಂತರಗೊಂಡಿವೆ. ಆಗಲೇ ನ್ಯಾಯಾಲಯ ಸ್ಥಾಪನೆಗೆ ಬೆಂಗಳೂರು ಪೂರ್ವ ತಾಲೂಕು ವಕೀಲರ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. 2004ರಲ್ಲಿ ನ್ಯಾಯಾಲಯ ಹಾಗೂ ತಾಲೂಕು ಕಚೇರಿ ಸ್ಥಾಪನೆಗಾಗಿ ಸರ್ಕಾರ ಅಧಿಕೃತ ಅದೇಶ ಹೊರಡಿಸಿದೆ. ಜತೆಗೆ 3 ಎಕರೆ ಜಾಗವನ್ನು ಸರ್ಕಾರಿ ಕಚೇರಿ ಸ್ಥಾಪನೆಗಾಗಿ 99 ವರ್ಷಗಳ ಕಾಲ
ಗುತ್ತಿಗೆ ಪಡೆದುಕೊಂಡು ಒಂದೂವರೆ ಎಕರೆ ಜಾಗ ತಾಲೂಕು ಕಚೇರಿ ಮತ್ತು ಉಳಿದ ಜಾಗ ಕೋರ್ಟ್‌ ಸ್ಥಾಪನೆಗೆ ಮೀಸಲಿಡಲಾಗಿದೆ.

ತಾಲೂಕು ಕಚೇರಿ ಕಟ್ಟಡ ನಿರ್ಮಾಣವಾಗಿ ಹಲವು ವರ್ಷ ಕಳೆದರೂ ಕೋರ್ಟ್‌ ಸ್ಥಾಪನೆಯಾಗಿಲ್ಲ ಸಂತೆ ಮೈದಾನದಲ್ಲಿದ್ದ ಉಪ ನೋಂದಣಾ ಧಿಕಾರಿ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಆ ಹಳೆಯ ಕಟ್ಟಡವನ್ನು 60 ಲಕ್ಷ ವೆಚ್ಚದಲ್ಲಿ ನ್ಯಾಯಾಲಯಕ್ಕಾಗಿ ಅಭಿವೃದ್ಧಿ
ಪಡಿಸಲಾಗಿತ್ತು ಅಲ್ಲೂ ನ್ಯಾಯಾಲಯ ಕಾರ್ಯಾಚರಣೆ ನಡೆಸಲಿಲ್ಲ. ಈಗ ಮತ್ತೆ ಪೂರ್ವ ತಾಲೂಕು ಕಚೇರಿಯ ನೆಲಮಹಡಿಯಲ್ಲಿ ನ್ಯಾಯಾಲಯ ಆರಂಭಕ್ಕೆ ಸುಮಾರು 60ಲಕ್ಷ ಖರ್ಚು ಮಾಡಿ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಸರ್ಕಾರ ತಕ್ಷಣ ಸೂಕ್ತ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಂಡು ಶೀಘ್ರ ಕೋರ್ಟ್‌ ಕಾರ್ಯಾರಂಭಕ್ಕೆ ಕ್ರಮಕೈಗೊಳ್ಳ ಬೇಕು ಎಂದು ನಾಗರಿಕರು ಮನವಿ ಮಾಡಿದರು.

ಶೀಘ್ರ ನ್ಯಾಯಾಲಯ ಪ್ರಾರಂಭಕ್ಕೆ ಒತ್ತಾಯ ಹಲವು ವರ್ಷಗಳ ಹಿಂದೆಯೇ ಕೋರ್ಟ್‌ ಕಾರ್ಯರಂಭ ಮಾಡಬೇಕಿತ್ತು. ಬೆಂಗಳೂರು ವಕೀಲರ ಸಂಘದ ತಕರಾರಿನಿಂದ ನ್ಯಾಯಾಲಯ ಆರಂಭ ವಿಳಂಬವಾಗುತ್ತಿದೆ. ಅನೇಕ ವರ್ಷಗಳಿಂದ ಕೆ.ಆರ್‌.ಪುರದಲ್ಲಿ ನ್ಯಾಯಾಲಯ ಆರಂಭಿಸುವಂತೆ ಹೋರಾಟ ಮಾಡುತ್ತಿದ್ದೇವೆ. ತಾಲೂಕು ಕಚೇರಿಯ ನೆಲಮಹಡಿಯಲ್ಲಿ ಜಿಲ್ಲಾ ನ್ಯಾಯದೀಶರ ಆದೇಶದಂತೆ ಅಗತ್ಯ ಮೂಲ ಸೌಕರ್ಯಗಳ ಒದಗಿಸುವ ಕೆಲಸ ನಡೆಯುತ್ತಿದೆ ಆದಷ್ಟು ಬೇಗ ನ್ಯಾಯಾಲಯ ಆರಂಭಿಸುವಂತೆ ಪೂರ್ವ ತಾಲೂಕು ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಒತ್ತಾಯಿಸಿದರು.

-ಗಿರೀಶ್‌ ಕೆ.ಆರ್‌

ಟಾಪ್ ನ್ಯೂಸ್

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.