ಹಲವು ಅನುಮಾನಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಕಡಲ ಕಿನಾರೆಯ ಶವಗಳು
Team Udayavani, Sep 19, 2021, 8:46 PM IST
ಭಟ್ಕಳ: ಶನಿವಾರ ಮಧ್ಯಾಹ್ನ ತಾಲೂಕಿನ ಹುಯಿಲಮಡಿ ಇಕೋ ಬೀಚ್ ಹತ್ತಿರದ ಸಮುದ್ರ ಕಿನಾರೆಯಲ್ಲಿ ಪತ್ತೆಯಾದ ಶವಗಳು ತಾಯಿ, ಮಗನ ಶವ ಎಂದು ತನಿಖೆಯಿಂದ ತಿಳಿದು ಬಂದಿದೆ. ಮೂಲತಃ ತೀರ್ಥಹಳ್ಳಿಯವರಾದ ಇವರು ಬೆಂಗಳೂರಿನಲ್ಲಿ ವಾಸ ಮಾಡಿಕೊಂಡಿದ್ದರೆನ್ನಲಾಗಿದೆ. ಈಗಾಗಲೇ ತಂದೆ ತೀರಿಕೊಂಡಿದ್ದು ಉದ್ಯೋಗದಲ್ಲಿದ್ದ ತಾಯಿ ಕೆಲಸವನ್ನು ಬಿಟ್ಟಿದ್ದು, ಮಗ ಆದಿತ್ಯ ಬೆಂಗಳೂರಿನಲ್ಲಿಯೇ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಬೆಂಗಳೂರಿನಲ್ಲಿರುವ ಇವರ ಬಾಡಿಗೆ ಮನೆಯ ಮಾಲೀಕರಿಗೆ ಸುದ್ದಿ ತಿಳಿದ ತಕ್ಷಣ ಅವರು ತೀರ್ಥಹಳ್ಳಿಯಲ್ಲಿರುವ ಲಕ್ಷ್ಮೀಅವರ ಸಹೋದರರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು, ತೀರ್ಥಹಳ್ಳಿಯಿಂದ ಬಂದಿದ್ದ ಲಕ್ಷ್ಮೀ ಅವರ ಸಹೋದರ ಹಾಗೂ ಇತರರು ಶವದ ಗುರುತು ಪತ್ತೆ ಹಚ್ಚಿದ್ದು, ಸಾವಿಗೆ ನಿಖರವಾದ ಕಾರಣ ಅವರಿಗೆ ತಿಳಿದಿಲ್ಲ ಎನ್ನಲಾಗಿದೆ. ನಂತರ ಅವರು ಭಟ್ಕಳದಲ್ಲಿಯೇ ಅಂತ್ಯಕ್ರಿಯೆನ್ನು ಮುಗಿಸಿ ವಾಪಾಸು ಹೋಗಿದ್ದಾರೆನ್ನಲಾಗಿದೆ.
ಮೃತ ಪಟ್ಟಿದ್ದ ಆದಿತ್ಯ ಹಾಗೂ ತಾಯಿ ಲಕ್ಷ್ಮೀ ಅವರು ಕಳೆದ ಸೆ.14ರಂದು ಬೆಂಗಳೂರಿನಿಂದ ರೈಲಿನ ಮೂಲಕ ಮುರ್ಡೇಶ್ವರಕ್ಕೆ ಬಂದು ಅಲ್ಲಿನ ವಸತಿ ಗೃಹದಲ್ಲಿ ಒಂದು ದಿನ ತಂಗಿದ್ದರೆನ್ನಲಾಗಿದೆ. ಬರುವಾಗ ತಾಯಿ ಮಗ ಒಟ್ಟು ಒಂದು ಬ್ಯಾಗ್ ಮಾತ್ರ ತಂದಿದ್ದು, ಕಾರನ್ನು ಹೊಂದಿದ್ದರೂ ಕೂಡಾ ರೈಲಿನಲ್ಲಿ ಬಂದಿರುವುದು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಎನ್ನುವ ಸಂಶಯ ಕೂಡಾ ಬರುತ್ತಿದೆ. ಸೆ.15ರಂದು ಬುಧವಾರ ಬೆಳಿಗ್ಗೆ ವಸತಿ ಗೃಹದಿಂದ ಹೊರಟವರು ನೇರವಾಗಿ ಹುಯಿಲು ಮಡಿಗೆ ಹೋಗಿರುವ ಶಂಕೆ ಇದ್ದು ಅಂದೇ ಸಂಜೆಯೋಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಕುರಿತು ತಿಳಿದು ಬರುತ್ತದೆ. ತಾಯಿಯ ಶವ ಕಲ್ಲುಬಂಡೆಯ ಮೇಲೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿದ್ದು, ಮಗನ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಾ ಸ್ವಲ್ಪ ಅನುಮಾನಕ್ಕೆ ಕಾರಣವಾಗಿದೆ. ತಾಯಿ ಬಂಡೆಕಲ್ಲಿನ ಮೇಲೆ ಬಿದ್ದ ಸ್ಥಿತಿಯಲ್ಲಿ ಮೃತ ಪಡಲು ಕಾರಣ ಏನು ಎನ್ನುವ ಕುರಿತೂ ತನಿಖೆ ಮಾಡಬೇಕಾಗಿದೆ.
ಹುಯಿಲುಮಡಿ ಬೀಚನ್ನು ನೋಡಲು ಹೋಗಿ ಅಕಸ್ಮಾತ್ ಕಾಲುಜಾರಿ ಬಿದ್ದು ಮೃತ ಪಟ್ಟ ತಾಯಿಯ ಸ್ಥಿತಿಯನ್ನು ನೋಡಲಾಗದೇ ಈತ ನೇಣು ಬಿಗಿದುಕೊಂಡು ಮೃತಪಟ್ಟನೇ? ತಾಯಿಯನ್ನು ತಳ್ಳಿ ಮೃತಪಟ್ಟ ನಂತರ ಈತ ಆತ್ಮಹತ್ಯೆಗೆ ಶರಣಾದನೇ? ಯಾವುದೂ ಕೂಡಾ ಸ್ಪಷ್ಟವಿಲ್ಲವಾಗಿದ್ದು ಇನ್ನಷ್ಟೇ ಬೆಂಗಳೂರಿನಲ್ಲಿರುವ ಮನೆಯ ಅಕ್ಕಪಕ್ಕದವರು, ಆತನು ಕೆಲಸ ಮಾಡುತ್ತಿರುವ ಕಂಪೆನಿಯ ಸಹೋದ್ಯೋಗಿಗಳನ್ನು ವಿಚಾರಿಸಿದಾಗ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ. ಆತ್ಮಹತ್ಯೆಗೆ ಮಗನಿಗೆ ಮದುವೆಯಾಗಿಲ್ಲ ಎನ್ನುವ ಕೊರಗು ಕಾರಣವೇ ಇಲ್ಲ ಹಣಕಾಸು ವಿಚಾರವಾಗಿ ಸ್ಥಳೀಯವಾಗಿ ಬೆಂಗಳೂರಿನಲ್ಲಿ ಯಾರಾದರೂ ಬೆದರಿಕೆ ಹಾಕಿದ್ದರೇ ಎನ್ನುವ ಕುರಿತು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.