ಹೈದರಾಬಾದ್ ಲಯಕ್ಕೆ ಮರಳಲಿದೆ: ಲಕ್ಷ್ಮಣ್
Team Udayavani, Sep 19, 2021, 9:35 PM IST
ಅಬುಧಾಬಿ: ಕೋವಿಡ್ ಕಾರಣದಿಂದ ಭಾರತದಲ್ಲಿ ಅರ್ಧಕ್ಕೆ ನಿಂತಿದ್ದ 2021ರ ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್ ತೀರಾ ಕಳಪೆ ಪ್ರದರ್ಶನ ನೀಡಿ ಅಂತಿಮ ಸ್ಥಾನಕ್ಕೆ ಕುಸಿದಿತ್ತು. 7 ಪಂದ್ಯಗಳಲ್ಲಿ ಒಂದನ್ನಷ್ಟೇ ಜಯಿಸಿತ್ತು. ಆದರೆ ಯುಎಇ ಆವೃತ್ತಿಯಲ್ಲಿ ಸನ್‌ರೈಸರ್ ಲಯ ಕಂಡುಕೊಂಡು ಉತ್ತಮವಾಗಿ ಕಮ್‌ಬ್ಯಾಕ್ ಮಾಡಲಿದೆ ಎಂದು ತಂಡದ ಮೆಂಟರ್ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
“ಟಿ20 ಕ್ರಿಕೆಟ್ ಮಾದರಿಗಳಲ್ಲಿ ಬಹಳಷ್ಟು ಬದಲಾವಣೆಗೆ ಅವಕಾಶವಿರುತ್ತದೆ. ಅಂದರೆ ದುರ್ಬಲ ತಂಡವೊಂದು ಅಚಾನಕ್ ಬಲಿಷ್ಠ ತಂಡವಾಗಿ ಬದಲಾಗಬಹುದು. ಹಾಗೆಯೇ ಬಲಿಷ್ಠ ತಂಡವೊಂದು ದುರ್ಬಲಗೊಳ್ಳಲೂಬಹುದು. ಇಂಥ ಸುದೀರ್ಘ ಟೂರ್ನಿಗಳಲ್ಲಿ ಇದಕ್ಕೆಲ್ಲ ಧಾರಾಳ ಅವಕಾಶ ಇರುತ್ತದೆ’ ಎಂದು ಲಕ್ಷ್ಮಣ್ ಹೇಳಿದರು.
ಬಿಡುವಿನಿಂದ ಲಾಭ:
“ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ನಮ್ಮ ತಂಡಕ್ಕೆ ಐಪಿಎಲ್ ಬಿಡುವಿನಿಂದ ಲಾಭವೇ ಆಗಿದೆ. ಒಗ್ಗಟ್ಟಾಗಿ ಮತ್ತು ಮಾನಸಿಕವಾಗಿ ಬಲಶಾಲಿಯಾಗಿ ಮರಳಲು ಅವಕಾಶ ನೀಡಿದೆ. ನಮಗೆ ಮಾನಸಿಕ ಸ್ಥೈರ್ಯ ಲಭಿಸಿದೆ. ಮರಳಿ ಮೇಲೇರುವುದು ನಮ್ಮ ಗುರಿ’ ಎಂದು ಲಕ್ಷ್ಮಣ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.