ಕುಂದಾನಗರಿಯಲ್ಲಿ ಗಣೇಶ ವಿಸರ್ಜನೆ ವೇಳೆ ಲಾಠಿ ಚಾರ್ಜ್
Team Udayavani, Sep 20, 2021, 1:30 AM IST
ಬೆಳಗಾವಿ: ನಗರದಲ್ಲಿ ನಡೆಯುತ್ತಿರುವ ಶ್ರೀ ಗಣೇಶೋತ್ಸವ ಮೆರವಣಿಗೆ ವೇಳೆ ಗಣಪತಿ ವಿಸರ್ಜನೆ ಮಾಡಲು ಗಣೇಶ ಮಂಡಳಿಯವರು ವಿಳಂಬ ಮಾಡಿದ್ದಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ ಘಟನೆ ರವಿವಾರ ರಾತ್ರಿ ಕಪಿಲೇಶ್ವರ ಬ್ರಿಡ್ಜ್ ಬಳಿ ನಡೆದಿದೆ.
ರಾತ್ರಿ 9 ಗಂಟೆ ನಂತರ ಕರ್ಫ್ಯೂ ಆದೇಶಿಸಿದ್ದರೂ ಸಾರ್ವಜನಿಕ ಗಣೇಶ ಮಂಡಳಿಯವರು ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್ ನಡೆಸಿದರು.
ರಾತ್ರಿ 12 ಗಂಟೆವರೆಗೂ ಕಪಿಲೇಶ್ವರ್ ಹೊಂಡದ ಸುತ್ತಲೂ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ರಾತ್ರಿ ಆಗುತ್ತಿದ್ದಂತೆ ಈ ಪ್ರದೇಶದಲ್ಲಿ ಜನಸಾಗರವೇ ಹರಿದು ಬಂದಿತ್ತು. ಗಣೇಶ ಮೂರ್ತಿ ನೋಡಲು ಜನ ಆಗಮಿಸಿದ್ದರು. ರಾತ್ರಿ 12:30ರ ಬಳಿಕ ಖಡಕ್ ಗಲ್ಲಿಯ ಗಣಪತಿ ವಿಸರ್ಜನೆ ಆಯಿತು. ಹಲವು ವರ್ಷಗಳಿಂದ ಈ ಗಣಪತಿಯೇ ಕಿನೆಯದಾಗಿ ವಿಸರ್ಜನೆ ಆಗುತ್ತಿತ್ತು. ಮರು್ಉನ ಮಧ್ಯಾಹ್ನ ವಿಸರ್ಜನೆ ಆಗುತ್ತಿತ್ತು. ಈ ಸಲ ಅತಿ ಬೇಗವಾಗಿದೆ. ಇನ್ನೂ 15ಕ್ಕೂ ಹೆಚ್ಚು ಮೂರ್ತಿಗಳು ವಿಸರ್ಜನೆ ಆಗಬೇಕಿವೆ. ಪೊಲೀಸರು ಬೇಗ ಮುಗಿಸುವಂತೆ ಮಂಡಳಿಯವರಿಗೆ ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.