ಐಷಾರಾಮಿ ಮಲ್ಟಿಪ್ಲೆಕ್ಸ್ ಗೆ ವಿಜಯ್ ದೇವರಕೊಂಡ ಒಡೆಯ
Team Udayavani, Sep 20, 2021, 2:08 PM IST
ಹೈದರಾಬಾದ್ : ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರು ಹೊಸದಾಗಿ ಮಲ್ಟಿಪ್ಲೆಕ್ಸ್ ಆರಂಭಿಸಿದ್ದು, ಹೈದರಾಬಾದ್‍ನ ಮೆಹಮೂಬ್ ನಗರದಲ್ಲಿ ಈ ಐಷಾರಾಮಿ ಥಿಯೇಟರ್ ತಲೆ ಎತ್ತಿ ನಿಂತಿದೆ.
ಹೀರೋ ಆಗಬೇಕೆನ್ನುವ ಕನಸಿನೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ಈ ನಟ ಇಂದು ಟಾಲಿವುಡ್‍ನಲ್ಲಿ ಬಹುಬೇಡಿಕೆ ನಟನಾಗಿದ್ದಾನೆ. ಅರ್ಜುನ್ ರೆಡ್ಡಿ ಬಳಿಕ ತನ್ನದೆಯಾದ ಭದ್ರ ನೆಲೆ ಕಂಡುಕೊಂಡ ಇವರು ನಂತರ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದರು. ಇದೀಗ ಮತ್ತೊಂದು ಉದ್ಯಮಕ್ಕೆ ಕೈ ಹಾಕಿದ್ದು, ಹೈಟೆಕ್ ಚಿತ್ರಮಂದಿರಕ್ಕೆ ಒಡೆಯರಾಗಿದ್ದಾರೆ.
ವಿಜಯ್ ದೇವರಕೊಂಡ ಅವರ ಪೋಷಕರ ನೆಟಿವ್ ಪ್ಲೇಸ್ ಆಗಿರುವ ಮೆಹಬೂಬ್ ನಗರದಲ್ಲಿ ಈ ಮಲ್ಟಿಪ್ಲೆಕ್ಸ್ ನಿರ್ಮಾಣವಾಗಿದ್ದು, ಇದೆ ಸೆಪ್ಟೆಂಬರ 24ರಂದು ಉದ್ಘಾಟನೆಗೊಳ್ಳುತ್ತಿದೆ. ಆದರೆ, ಸಿನಿಮಾ ಶೂಟಿಂಗ್ ನಿಮಿತ್ತ ಗೋವಾದಲ್ಲಿರುವ ಕಾರಣ ವಿಜಯ್ ದೇವರಕೊಂಡ ಅವರು ಈ ಕಾರ್ಯಕ್ರಮಕ್ಕೆ ಗೈರು ಆಗುತ್ತಿದ್ದಾರೆ.
From dreaming of becoming an Actor to now owning my own Multiplex Cinema ?
I share with you all,
Asian Vijay Deverakonda cinemas ?The 1st AVD will officially open in Mahbubnagar, from September 24th 2021. https://t.co/rv5l22B16U
— Vijay Deverakonda (@TheDeverakonda) September 19, 2021
ಈ ಮಲ್ಟಿಪ್ಲೆಕ್ಸ್ ಏಷಿಯನ್ ಅವರ ಸಹಯೋಗದಲ್ಲಿ ವಿಜಯ್ ದೇವರಕೊಂಡ ಅವರು ನಿರ್ಮಿಸಿದ್ದಾರೆ. ಆದ್ದರಿಂದ AVD ( ಏಷಿಯನ್ ವಿಜಯ್ ದೇವರಕೊಂಡ) ಎಂದು ನಾಮಕರಣ ಮಾಡಲಾಗಿದೆ.
ಇಂದು ತಮ್ಮ ಟ್ವಿಟರ್ ನಲ್ಲಿ ತಮ್ಮ ಅಭಿಮಾನಿಗಳಿಗೆ ಈ ಸಂತಸದ ವಿಷಯವನ್ನು ಹಂಚಿಕೊಂಡಿರುವ ವಿಜಯ್ ದೇವರಕೊಂಡ ಅವರು, ಎವಿಡಿಯ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
ಇನ್ನು ಸೆಪ್ಟೆಂಬರ್ 24 ರಂದು ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾ ವಿಜಯ್ ದೇವರಕೊಂಡ ಅವರ ಮಲ್ಟಿಪ್ಲೆಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ವಿಜಯ್ ದೇವರಕೊಂಡ ಅವರು ಶುಭಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.