![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Sep 20, 2021, 2:48 PM IST
ಮೈಸೂರು: ನಾಡಹಬ್ಬ ದಸರಾ ಉತ್ಸವದಲ್ಲಿಭಾಗವಹಿಸಲು ಅರಮನೆ ಆವರಣದಲ್ಲಿಬೀಡುಬಿಟ್ಟಿರುವ ಅಭಿಮನ್ಯು ನೇತೃತ್ವದ ಗಜಪಡೆಗೆಸೋಮವಾರದಿಂದ ಭಾರ ಹೊರಿಸುವ ತಾಲೀಮುಆರಂಭವಾಗಲಿದ್ದು, ಬೆಳಗ್ಗೆ 11.30ಕ್ಕೆ ಆನೆಗಳಮೇಲಿಡುವ ಗಾದಿ ಮತ್ತು ನಮಾªಗೆ ಪೂಜೆ ಸಲ್ಲಿಸಿತಾಲೀಮಿಗೆ ಚಾಲನೆ ನೀಡಲಾಗುತ್ತದೆ.
ಸೆ.16ರಂದು ಅರಮನೆಗೆ ಪ್ರವೇಶಿಸಿದ ಗಜಪಡೆಗೆಕಳೆದ 5 ದಿನಗಳಿಂದ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, ಜಂಬೂ ಸವಾರಿಗೆ ಅಣಿಗೊಳಿಸಲಾಗುತ್ತಿದೆ. ಜತೆಗೆ 2 ದಿನದಿಂದ ಬೆಳಗ್ಗೆ3.5 ಕಿ.ಮೀ.ಹಾಗೂ ಸಂಜೆ 3.5ಕಿ.ಮೀ. ಸೇರಿದಂತೆ ದಿನಕ್ಕೆ 7ಕಿ.ಮೀ.ನಷ್ಟು ದೂರದನಡಿಗೆ ನಡೆಸಲಾಗುತ್ತಿತ್ತು.ಜಂಬೂ ಸವಾರಿಗೆ28 ದಿನ ಮಾತ್ರವಿರುವುದರಿಂದ ಇದೀಗಗಜಪಡೆಗೆ ಭಾರಹೊರಿಸುವ ತಾಲೀಮುನಡೆಸಲು ನಿರ್ಧರಿಸಲಾಗಿದೆ.
ಜಂಬೂ ಸವಾರಿಯಂತೆ ಮೆರವಣಿಗೆ: ನಾಳೆಯಿಂದಆರಂಭವಾಗಲಿರುವ ತಾಲೀಮುಜಂಬೂ ಸವಾರಿ ನಡೆಯುವ ಮಾರ್ಗದಲ್ಲಿತಾಲೀಮು ನಡೆಸಲಾಗುತ್ತದೆ. ನಾಳೆ ಕೋಡಿಸೋಮೇಶ್ವರ ದೇವಾಲಯದಿಂದ ಆನೆಗಳನ್ನುಅಂಬಾರಿ ಕಟ್ಟುವ ಕ್ರೇನ್ ಇರುವ ಸ್ಥಳಕ್ಕೆ ಕರೆದೊಯ್ದಬಳಿಕ ಅರಮನೆಮುಂಭಾಗಕ್ಕೆ ಆನೆಗಳನ್ನು ಸಾಲಾಗಿ ಕರೆತರಲಾಗುತ್ತದೆ.
ಅಲ್ಲದೆ ಕುಮ್ಕಿಆನೆಗಳಾದ ಚೈತ್ರ ಹಾಗೂಕಾವೇರಿಯೊಂದಿಗೆ ಭಾರ ಹೊತ್ತಅಭಿಮನ್ಯು ಜಂಬೂಸವಾರಿ ದಿನ ಪುಷ್ಪಾರ್ಚನೆಮಾಡುವ ಸ್ಥಳದಲ್ಲಿ ಜನರಲ್ ಸೆಲ್ಯೂಟ್ ನೀಡಿಅರಮನೆ ಆವರಣದಲ್ಲಿ 3 ಸುತ್ತು ಸಂಚರಿಸಲಿದೆ.ಸೋಮವಾರದಿಂದಲೇ ಭಾರ ಹೊರುವ ತಾಲೀಮುಆರಂಭವಾಗುತ್ತಿರುವುದರಿಂದ ಸಣ್ಣ ಪ್ರಮಾಣದತೂಕವನ್ನಷ್ಟೇ ಹೊರಿಸಲಾಗುತ್ತದೆ.
ನಂತರ ದಿನದಿಂದದಿನಕ್ಕೆ ಬಾರದ ಪ್ರಮಾಣ ಹೆಚ್ಚಿಸಲಾಗುತ್ತದೆ.ಎಲ್ಲಾ ಆನೆಗಳಿಗೂ ತಾಲೀಮು: ಈ ಬಾರಿಯದಸರಾ ಉತ್ಸವಕ್ಕೆ ಆಗಮಿಸಿರುವ ಆನೆಗಳಾದಅಭಿಮನ್ಯು, ಗೋಪಾಲಸ್ವಾಮಿ, ಧನಂಜಯಹಾಗೂ ಇದೇ ಮೊದಲ ಬಾರಿಗೆ ಬಂದಿರುವಅಶ್ವತ್ಥಾಮನಿಗೂ ಭಾರ ಹೊರಿಸುವ ತಾಲೀಮುನಡೆಸಲು ಅರಣ್ಯಾಧಿಕಾರಿಗಳು ತಯಾರಿನಡೆಸಿದ್ದಾರೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.