ದಾವಣಗೆರೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 50 ಪೈಸೆ!
Team Udayavani, Sep 20, 2021, 4:47 PM IST
ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯ ಎಪಿಎಂಸಿಯಲ್ಲಿ ಕ್ವಿಂಟಲ್ ಈರುಳ್ಳಿ ಧಾರಣೆ ಕನಿಷ್ಟ100 ರೂಪಾಯಿಯಿಂದ ಗರಿಷ್ಠ 900 ರೂಪಾಯಿವರೆಗೆ ಇದೆ. ಕೆಲವು ಕಡೆ ಕೆಜಿಗೆ 50 ಪೈಸೆ ಧಾರಣೆಯೂ ಇದೆ. ಹಾಗಾಗಿ ಈರುಳ್ಳಿ ಬೆಳೆಗಾರರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ದಾವಣಗೆರೆ ಜಿಲ್ಲೆಯ ಜಗಳೂರಲ್ಲಿ 1500-1800, ನ್ಯಾಮತಿಯಲ್ಲಿ 500-600, ಹರಿಹರದಲ್ಲಿ 150,ದಾವಣಗೆರೆ ತಾಲೂಕಿನಲ್ಲಿ 100 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಅತಿವೃಷ್ಟಿಯ ಪರಿಣಾಮ 950 ಹೆಕ್ಟೇರ್‌ನಲ್ಲಿನ ಈರುಳ್ಳಿ ಸಂಪೂರ್ಣ ಹಾಳಾಗಿದೆ.ಅತೀ ಹೆಚ್ಚು ಜಗಳೂರು ತಾಲೂಕಿನಲ್ಲಿ 950, ಹೊನ್ನಾಳಿಯಲ್ಲಿ 50, ಹರಿಹರದಲ್ಲಿ30, ದಾವಣಗೆರೆಯಲ್ಲಿ 20 ಹೆಕ್ಟೇರ್‌ನಲ್ಲಿದ್ದ ಈರುಳ್ಳಿ ಸಂಪೂರ್ಣವಾಗಿ ನಾಶವಾಗಿದೆ. ಅತಿವೃಷ್ಟಿಯಿಂದ ಬೆಳೆಕಳೆದುಕೊಂಡಿರುವ ಜೊತೆಗೆ ಮುಕ್ತಮಾರುಕಟ್ಟೆಯಲ್ಲಿ ಬೆಲೆಯೂ ದೊರೆಯದಂತಾಗಿ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ಇದನ್ನೂ ಓದಿ:ಗಾಂಧಿ ಜಯಂತಿಯಂದು ಕನ್ನಯ್ಯ, ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ?
ಸರ್ಕಾರದಿಂದಪ್ರತಿ ಹೆಕ್ಟೇರ್‌ಗೆ 6,800 ರೂಪಾಯಿಪರಿಹಾರ ನೀಡಲಾಗುತ್ತದೆ. ಪ್ರತಿ ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲು 25 ರಿಂದ 30 ಸಾವಿರ ಖರ್ಚು ಮಾಡುವ ರೈತರಿಗೆಸರ್ಕಾರ ನೀಡುವ ಪರಿಹಾರ ಭೀಮನಹೊಟ್ಟೆಗೆ ಅರೆ ಕಾಸಿನಮಜ್ಜಿಗೆ ಎನ್ನುವಂತಾಗಿದೆ.ಅತಿವೃಷ್ಟಿಯಿಂದ ಈರುಳ್ಳಿ ನಾಶವಾಗಿರುವ ಜೊತೆಗೆ ಮಹಾರಾಷ್ಟ್ರದ ನಾಸಿಕ್ ಇತರೆ ಭಾಗದಿಂದ ಹೆಚ್ಚಾಗಿಈರುಳ್ಳಿ ದಾವಣಗೆರೆ ಮಾರುಕಟ್ಟೆಗೆ ಬರುತ್ತಿರುವುದು ಬೆಲೆ ಕುಸಿತಕ್ಕೆ ಕಾರಣ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.