ಕೋವಿಡ್ ಸಮಯದ ಪದಬಂಧಗಳು
Team Udayavani, Sep 21, 2021, 6:20 AM IST
ಪ್ರಪಂಚದಾದ್ಯಂತ ಕೊರೊನಾ ಸೋಂಕು ಎಲ್ಲೆಡೆ ಹರಡುತ್ತಿರುವ ಈ ಸಂದರ್ಭದಲ್ಲಿ ಕಾಯಿಲೆಗೆ ಸಂಬಂಧಿಸಿದ ಕೆಲವು ವೈದ್ಯಕೀಯ ಪದಗಳನ್ನು ಜನಸಾಮಾನ್ಯರು ಬಳಸುವುದನ್ನು ಕೇಳಿದ್ದೇವೆ. ಆದರೆ ಅವುಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಅವುಗಳ ಅರ್ಥ ಅದಲು-ಬದಲಾಗಿ ಅಥವಾ ಅವರಿಗೆ ಅವರದ್ದೇ ಆದ ಅರ್ಥದಲ್ಲಿ ಬಳಸಲ್ಪಡುತ್ತಿದೆ. ಆದರೆ ಈ ಪದಗಳಿಗೆ ಜಾಗತಿಕವಾಗಿ ಒಂದೇ ಅರ್ಥ ಹಾಗೂ ವೈಜ್ಞಾನಿಕ ವಿವರಣೆ ಇದೆ. ಹಾಗೆ ಬಳಸಲ್ಪಡುವ ಪದಗಳಲ್ಲಿ ಕೆಲವು ಈ ಕೆಳಗಿನಂತಿವೆ
ಕ್ವಾರೈಂಟೈನ್ (Quarantine):
ಪ್ರಪಂಚದಲ್ಲಿ ಎಲ್ಲಾದರೂ ಭಯಾನಕ ಸಾಂಕ್ರಾ ಮಿಕ ಕಾಯಿಲೆಗಳು ಬಂದಾಗ, ಸೋಂಕಿತ ಪ್ರದೇಶ ಗಳಲ್ಲಿರುವ ಜನರು ಅದಾಗಲೇ ಸೋಂಕಿಗೊಳಗಾಗಿ ರಬಹುದೆಂಬ ಶಂಕೆಯಲ್ಲಿ ಅವರ ಚಲನವಲನ, ಪ್ರಯಾಣದ ಮೇಲೆ ನಿರ್ಬಂಧ ಹೇರಲಾಗುವುದು. ಅಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟ ರೋಗ ವ್ಯಕ್ತಿಗೆ ಸೋಂಕು ತಗುಲಿದ ದಿನದಿಂದ ರೋಗ ಲಕ್ಷಣಗಳು ಆ ವ್ಯಕ್ತಿಯಲ್ಲಿ ಕಂಡು ಬರಲು ಬೇಕಾಗುವಷ್ಟು ದಿನಗಳ ವರೆಗೆ (Incubation period) ಅವರನ್ನು ಆಸ್ಪತ್ರೆಗಳಲ್ಲಿ, ತಾತ್ಕಾಲಿಕ ತಂಗುದಾಣಗಳಲ್ಲಿ ಪ್ರತ್ಯೇಕಿಸಿ ಇರಿಸಲಾಗುವುದು. ಅಂತಹ ಸೋಂಕು ಪೀಡಿತ ಪ್ರದೇಶದ ಶಂಕಿತ ಜನರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಮಾಡಿದಲ್ಲಿ ಅವರನ್ನು ವಿಮಾನ ನಿಲ್ದಾಣಗಳಲ್ಲಿ, ಬಂದರುಗಳಲ್ಲಿ, ಅಥವಾ ಗಡಿಗಳಲ್ಲಿರುವ ರೈಲು ನಿಲ್ದಾಣ, ಬಸ್ಸು ನಿಲ್ದಾಣಗಳಲ್ಲಿ ಪ್ರತ್ಯೇಕಿಸಿ ಇಡಲಾಗುವುದನ್ನು ಕ್ವಾರೈಂಟೈನ್ ಎಂದು ಕರೆಯುವುದು.
ಈ ಪ್ರಕ್ರಿಯೆಗೆ ಒಳಪಡುವ ವ್ಯಕ್ತಿಯು ಸೋಂಕಿಗೆ ಒಳಪಟ್ಟಿರಬಹುದು ಅಥವಾ ಒಳಪಡದೇ ಇರಬಹುದು.
ಅವರು ಕೇವಲ ರೋಗ ಸೋಂಕು ಹೊಂದಿರ ಬಹುದು ಎಂದು ಶಂಕಿಸಲ್ಪಟ್ಟವರು. ಆದರೆ ಅವರಲ್ಲಿ ಹೀಗೆ ಪ್ರತ್ಯೇಕಿಸಲ್ಪಟ್ಟ ದಿನಗಳಲ್ಲಿ ರೋಗ ಲಕ್ಷಣಗಳು ಕಂಡುಬಂದರೆ ಅಥವಾ ಅಷ್ಟರಲ್ಲಿ ಪ್ರಯೋಗಾಲಯದ ವರದಿಗಳು ಸೋಂಕಿರುವುದನ್ನು ಸಾಬೀತುಪಡಿಸಿದರೆ ಅವರನ್ನು ಐಸೋಲೇಶನ್ (ಬೇರ್ಪಡಿಸುವ) ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ.
ಐಸೋಲೇಶನ್ (ಬೇರ್ಪಡಿಸುವಿಕೆ):
ಈ ಪ್ರಕ್ರಿಯೆಯಲ್ಲಿ ರೋಗದ ಸೋಂಕಿರುವ ಅಥವಾ ಸೋಂಕಿನ ಖಚಿತ ಮಾಹಿತಿಯಿರುವ ವ್ಯಕ್ತಿಗಳನ್ನು ಬೇರೆಯವರಿಂದ ಸಂಪೂರ್ಣವಾಗಿ ಭೌತಿಕವಾಗಿ ಬೇರ್ಪಡಿಸುವುದಾಗಿದೆ. ವಿಶೇಷ ಜಾಗದಲ್ಲಿ, ನಿರ್ಧಿಷ್ಟ ರೋಗಕ್ಕೆ ಸಂಬಂದಿಸಿದಂತೆ ನಿರ್ದಿಷ್ಟ ರೋಗ ತಡೆ ಪ್ರಕ್ರಿಯೆಗಳೊಂದಿಗೆ ಸೋಂಕಿತ ರನ್ನು ಅವರು ಸೋಂಕು ಮುಕ್ತವಾಗುವವರೆಗೆ ಈ ತೆರನಾಗಿ ಬೇರ್ಪಡಿಸಿ ಇಡುವುದಾಗಿದೆ. ಈ ಎರಡು ಪ್ರಕ್ರಿಯೆಗಳು ಮನುಷ್ಯ ಹಾಗೂ ಪ್ರಾಣಿಗಳಿಗೆ ಕೂಡ ಅನ್ವಯಿಸುತ್ತದೆ. ಈ ವಿಧಾನಗಳನ್ನು ಸಮು ದಾಯದಲ್ಲಿ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಲು ಮಾಡಲಾಗುತ್ತದೆ. ಅಲ್ಲದೇ ಅವರಿಗೆ ಅಲ್ಲಿ ಅಭ್ಯವಿರುವ ಚಿಕಿತ್ಸೆಗಳನ್ನು ಸಹ ನೀಡಲಾಗುವುದು.
1960ರಿಂದ 1970ರ ವರೆಗೆ ಪ್ರಪಂಚದಾದ್ಯಂತ ಸಿಡುಬು ರೋಗದಿಂದಾಗಿ ಸರಿ ಸುಮಾರು 30 ಕೋಟಿ ಜನರು ಸಾವಿಗೀಡಾಗಿದ್ದರು. ಸೋಂಕು ಪಡೆದ ಪ್ರತೀ ಮೂವರ ಪೈಕಿ ಒಬ್ಬರ ಸಾವು ಆಗ ಖಚಿತವಾಗಿತ್ತು. ಈ ಕ್ವಾರೈಂಟೈನ್, ಐಸೋಲೇಶನ್ ಹಾಗೂ ಲಸಿಕಾಕರಣದಿಂದಾಗಿ ಆ ರೋಗವನ್ನು ನಿರ್ನಾಮ ಮಾಡಲು ಸಾಧ್ಯವಾಗಿದೆ.
ಟ್ರೆಂಟಿನೋ (Trentino)ದಿಂದ ಕ್ವಾರೈಂಟೈನ್:
1377ರಲ್ಲಿ ಯುರೋಪ್ ಖಂಡದಲ್ಲಿ ಪ್ಲೇಗ್ ಭಯಾನಕವಾಗಿ ಹಬ್ಬುತ್ತಿದ್ದಾಗ ಅಂದಿನ ಇಂಗ್ಲೆಂಡ್ ಸಾಮ್ರಾಜ್ಯವು ವೈದ್ಯಕೀಯ ಕಾರಣಗಳಿಗಾಗಿ ರೋಗ ಶಂಕಿತ ಜನರನ್ನು 30 ದಿನಗಳ ವರೆಗೆ ಬೇರ್ಪಡಿಸುವ ವ್ಯವಸ್ಥೆ “ಟ್ರೆಂಟಿನೋ’ ಜಾರಿ ಮಾಡಿತ್ತು. ಅನಂತರ ದಲ್ಲಿ ಬೇರೆ ಬೇರೆ ದೇಶಗಳು ಸಹ ವಿದೇಶಗಳಿಂದ ಬರುವ ಸಾಂಕ್ರಾಮಿಕ ರೋಗಗಳ ಶಂಕಿತರನ್ನು 40 ದಿನಗಳವರೆಗೆ ಬಂದರುಗಳಲ್ಲಿಯೇ ಬೇರ್ಪಡಿಸಿ ಡುವ ಕ್ವಾರೈಂಟೈನ್ ಕಾನೂನು ಅಳವಡಿಸಿಕೊಂಡವು. (ಲ್ಯಾಟಿನ್ ಪದ Quadraginta ಅಂದರೆ 40 ದಿನಗಳು) ಅಂದು ಅವರಿಗೆ ರೋಗಾಣುಗಳ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದೇ ಇರುವುದರಿಂದ ಎಲ್ಲರನ್ನೂ ಸಹ 40 ದಿನಗಳ ವರೆಗೆ ಪ್ರತ್ಯೇಕಿಸಿ ಇಡುತ್ತಿದ್ದರು.
ಎಪಿಡೆಮಿಕ್(Epidemic) :
ಒಂದು ನಿರ್ದಿಷ್ಟ ಸಮುದಾಯದಲ್ಲಿ ಯಾವುದೇ ರೋಗ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ನಡ ವಳಿಕೆಗಳು ಸಾಮಾನ್ಯಕ್ಕಿಂತ ಹೆಚ್ಚಾಗಿ ಕಂಡುಬಂದರೆ ಅದನ್ನು ಎಪಿಡೆಮಿಕ್ ಎಂದು ಕರೆಯುವುದು. ಉದಾಹರಣೆಗೆ, ನಗರವೊಂದರಲ್ಲಿ ಪ್ರತೀ ವರ್ಷ 20-30 ಮಲೇರಿಯಾ ಪ್ರಕರಣಗಳು ವರದಿ ಯಾಗುತ್ತಿದ್ದು, ಆದರೆ ಪ್ರಸ್ತುತ ಆ ನಗರದಲ್ಲಿ 200-300 ಪ್ರಕರಣಗಳು ವರದಿಯಾದರೆ ಅದನ್ನು ಎಪಿಡೆಮಿಕ್ ಎಂದು ಕರೆಯಬಹುದು. ಹಾಗೆ ಕರೆಯಲು ಸಾಮಾನ್ಯಕ್ಕಿಂತ ಎಚುr ಹೆಚ್ಚಿರಬೇಕು ಎನ್ನುವುದನ್ನು ರೋಗದ ತೀವ್ರತೆ ಹಾಗೂ ಹರಡುವಿಕೆ ಮತ್ತಿತರರ ಅಂಶಗಳ ಮೇಲೆ ನಿರ್ಧರಿಸಲಾಗುತ್ತದೆ.
ಈ ತೆರನಾಗಿ ಯಾವುದೇ ಸೋಂಕು ಕಾಯಿಲೆ ಕೆಲವೇ ಮನೆಗಳಲ್ಲಿ, ವಸತಿ ಗೃಹಗಳಲ್ಲಿ ಮಾತ್ರ ಕಂಡು ಬಂದಲ್ಲಿ ಅದನ್ನು outbreak (ಸ್ಫೋಟ) ಎಂದು ಕರೆಯಲಾಗುವುದು. ಈ ಹಂತದಲ್ಲಿ ರೋಗ ತಡೆಗಟ್ಟುವ ಕ್ರಮ ಕೈಗೊಳ್ಳದಿದ್ದರೆ ಅದು ಎಪಿಡೆಮಿಕ್ ಆಗಿ ಮಾರ್ಪಾಡಬಹುದಾಗಿದೆ.
ಎಂಡಮಿಕ್ (Endemic) :
ಯಾವುದೇ ನಿಗದಿತ ಭೌಗೋಳಿಕ ಪ್ರದೇಶದಲ್ಲಿ ನಿರ್ದಿಷ್ಟ ಕಾಯಿಲೆ ಅಥವಾ ಅದರ ಸೋಂಕು ಹಲವು ಕಾಲ/ಯಾವಾಗಲೂ ಉಳಿದುಕೊಂಡಿದ್ದರೆ/ (ಒಂದೇ ಪ್ರಮಾಣದಲ್ಲಿ) ಅದನ್ನು ಎಂಡೆಮಿಕ್ ಎಂದು ಎಂದು ಕರೆಯಬಹುದು. ದೇಶದ ಹಲವು ಭಾಗಗಳಲ್ಲಿ ಮಲೇರಿಯಾ ಈಗ ಎಂಡೆಮಿಕ್ ಆಗಿ ಕಾಣಿಸಿಕೊಳ್ಳುತ್ತಿದ್ದರೆ, ಡಯಾಬಿಟಿಸ್, ರಕ್ತದೊತ್ತಡ ದಂತಹ ರೋಗಗಳು ಎಲ್ಲೆಡೆ ಕಾಣಿಸಿಕೊಳ್ಳುತ್ತಿದೆ.
ಪ್ಯಾಂಡಮಿಕ್ (Pandemic) :
ಯಾವುದೇ ರೋಗ ನಿಗದಿತ ಪ್ರದೇಶ ಮೀರಿ ಹಲವು ರಾಷ್ಟ್ರಗಳಿಗೆ ಹಬ್ಬಿದರೆ, ಪ್ರಪಂಚದ ವಿವಿಧ ಖಂಡಗಳ ರಾಷ್ಟ್ರಗಳನ್ನು/ಜನರನ್ನು ಬಾಧಿಸುತ್ತಿದ್ದರೆ ಅದನ್ನು ಪ್ಯಾಂಡಮಿಕ್ (ಸರ್ವವ್ಯಾಪಿ) ಎಂದು ಕರೆಯುವುದು.
2009ರಲ್ಲಿ ಹೆಚ್1ಎನ್1, ಪ್ರಸ್ತುತ ಕೋವಿಡ್-19 ಸೋಂಕು ಸರ್ವವ್ಯಾಪಿಯಾಗಿ ಪ್ರಪಂಚದಾದ್ಯಂತ ಹರಡುತ್ತಿದೆ.
ಸ್ಫೋರ್ಯಾಡಿಕ್ (Sporadic):
ನಿರ್ದಿಷ್ಟ ಖಾಯಿಲೆ ಅನಿಮಿಯತವಾಗಿ ವಿರಳವಾಗಿ ವಿಶಾಲ ಪ್ರದೇಶದಲ್ಲಿ ಅಲ್ಲೊಂದು ಇಲ್ಲೊಂದರಂತೆ ಕಾಣಿಸಿಕೊಂಡರೆ ಅದನ್ನು ಸ್ಪೋರ್ಯಾಡಿಕ್ ಎಂದು ಕರೆಯುವುದು. ಸಾಮಾನ್ಯವಾಗಿ ರೇಬೀಸ್, ಟೆಟನಸ್ ರೋಗಗಳು ಈ ತೆರನಾಗಿ ಕಾಣಿಸಿಕೊಳ್ಳುತ್ತವೆ.
ಎಲಿಮಿನೇಶನ್ : (Elimination)
ಒಂದು ಭೂ ಪ್ರದೇಶದಲ್ಲಿ (ದೇಶ/ಖಂಡ) ಹರಡದಂತೆ ಸಂಪೂರ್ಣ ನಿಯಂತ್ರಣಕ್ಕೊಳಪಡಿಸು ವುದನ್ನು ಎಲಿಮಿನೇಶನ್ (ರೋಗ ನಿರ್ಮೂಲನೆ) ಎಂದು ಕರೆಯಬಹುದು. ಉದಾಹರಣೆಗೆ, ಪೋಲಿಯೋ ರೋಗ ಭಾರತದ ದೇಶದಿಂದ ನಿರ್ಮೂಲನೆಗೊಂಡಿದೆ ಆದರೆ ಬೇರೆ ದೇಶಗಳಲ್ಲಿ, ಖಂಡಗಳಲ್ಲಿ ಇನ್ನೂ ಇದೆ.
ಇರಾಡಿಕೇಶನ್ (Eradication)
ಕಾಯಿಲೆ ಹರಡುವುದನ್ನು ಸಂಪೂರ್ಣ ಸ್ಥಗಿತ ಗೊಳಿಸುವುದಲ್ಲದೇ ಕಾಯಿಲೆಗೆ ಸಂಬಂಧಿಸಿದ ಸೂಕ್ಷ್ಮಾಣುಗಳು/ಅಪಾಯಕಾರಿ ಅಂಶಗಳು ಜಗತ್ತಿ ನಲ್ಲಿ/ ವಾತಾವರಣದಲ್ಲಿ ಇರದಂತೆ ಮಾಡುವು ದಾಗಿದೆ. ಉದಾಹರಣೆಗೆ, ಸಿಡುಬು ರೋಗ ಈಗ ನಿರ್ನಾಮಗೊಂಡಿದೆ. ಕೇವಲ ಒಂದೆರಡು ರೋಗಗಳನ್ನು ಮಾತ್ರ ಇದುವರೆಗೆ ನಿರ್ನಾಮ ಮಾಡಲಾಗಿದೆ/ ನಿರ್ನಾಮಗೊಂಡಿವೆ
ಸಾಂಕ್ರಾಮಿಕ ಕಾಯಿಲೆಗಳ ಕಾಯಿದೆ 1897ರ ಅಡಿಯಲ್ಲಿ ಯಾವುದೇ ರೀತಿಯ ಭಯಾನಕ ರೋಗಗಳು ಬಂದ ಸಂಧರ್ಭದಲ್ಲಿ ಕೇಂದ್ರ ಸರಕಾರ ರೋಗ ತಡೆಯುವ ಇಂತಹ ಪ್ರಕ್ರಿಯೆಗಳಿಗಾಗಿ ವಿಶೇಷ ಅಧಿಕಾರ ಪ್ರಯೋಗ ಮಾಡಬಹುದಾಗಿದೆ. ಇದಲ್ಲದೇ ವಿಪತ್ತು ನಿರ್ವಹಣ ಕಾಯಿದೆ 2005, ಭಾರತೀಯ ದಂಡ ಸಂಹಿತೆ 269, 270, 271, 302, 304, 307ರ ಅಡಿಯಲ್ಲಿ ವಿವಿಧ ಪ್ರಕರಣಗಳನ್ನು ರೋಗ ಹರಡುವಿಕೆ ತಡೆಯಲು ಬಳಸಬಹುದಾಗಿದೆ. ಇವುಗಳಲ್ಲದೆ, ಸ್ಥಳೀಯ ಕಾನೂನುಗಳು ಪೌರಾಡಳಿತ, ನಗರ ಸಭೆಗಳು, ಪಂಚಾಯತ್ ಕಾಯಿದೆ ಅಡಿಯಲ್ಲಿ ಸಹ ಕೆಲವು ವಿಶೇಷ ಅಧಿಕಾರವನ್ನು ನಗರ ಪಾಲಿಕೆಗಳಿಗೆ, ಪಂಚಾಯತ್‌ಗಳಿಗೆ ರೋಗ ನಿಯಂತ್ರಿಸಲು ನೀಡಲಾಗಿದೆ.
ರಾಜ್ಯದಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆ 2020 ಕೂಡ ಈಗ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿದೆ. ಆದರೆ ಕಾಯಿದೆ ಆದೇಶಗಳು ಎಷ್ಟೇ ಇದ್ದರೂ ಜನರು ಹಾಗೂ ಸಮುದಾಯ ಸರಕಾರದ ವೈಜ್ಞಾನಿಕವಾದ ಮಾರ್ಗದರ್ಶನ ಗಳೊಂದಿಗೆ ಸಹಕರಿಸಿದಾಗ ಮಾತ್ರ ಸೋಂಕು ರೋಗ ಗಳು ನಿಯಂತ್ರಣಕ್ಕೆ ಬರಬಹುದು.
ಡಾ| ಅಶ್ವಿನಿ ಕುಮಾರ ಗೋಪಾಡಿ
ಕೆ.ಎಂ.ಸಿ., ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.