ನೀರಜ್ ನಟನಾ ಪ್ರತಿಭೆ ಅನಾವರಣ
Team Udayavani, Sep 21, 2021, 7:01 AM IST
ಹೊಸದಿಲ್ಲಿ: ಕ್ರೆಡಿಟ್ ಕಾರ್ಡ್ ಅಗ್ರಿಗೇಟರ್ ಸಂಸ್ಥೆಯಾದ “ಕ್ರೆಡ್’ನ ಜಾಹೀರಾತುಗಳಲ್ಲಿ ಇತ್ತೀಚೆಗೆ ಮಾಜಿ ಕ್ರಿಕೆಟರ್ಗಳಾದ ರಾಹುಲ್ ದ್ರಾವಿಡ್, ವೆಂಕಟೇಶ್ ಪ್ರಸಾದ್, ಜಾವಗಲ್ ಶ್ರೀನಾಥ್ ಕಾಣಿಸಿಕೊಂಡು ತಮ್ಮ ಅಭಿನಯ ಚಾತುರ್ಯವನ್ನು ಪ್ರಚುರಪಡಿಸಿದ್ದರು. ಅದನ್ನು ನೋಡಿ ಅವರ ಅಭಿಮಾನಿಗಳೂ ಹುಬ್ಬೇರಿಸಿದ್ದರು. ಅದರಲ್ಲೂ ರಾಹುಲ್ ದ್ರಾವಿಡ್ ಅವರ “ಮೇ ಇಂದಿರಾ ನಗರ್ ಕಾ ಗೂಂಡಾ ಹು’ ಎಂದು ಅಬ್ಬರಿಸಿದ್ದ ಜಾಹೀರಾತಂತೂ ಸಾಕಷ್ಟು ಜನಪ್ರಿಯವಾಗಿತ್ತು. ಈಗ ಇವರ ಪಟ್ಟಿಗೆ, ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಕೂಡ ಸೇರ್ಪಡೆಗೊಂಡಿದ್ದಾರೆ.
ನೀರಜ್ ಚೋಪ್ರಾ, ಇತ್ತೀಚೆಗೆ ನಡೆದ ಟೋಕಿಯೊ ಒಲಿಂಪಿಕ್ಸ್ನ ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಚಿನ್ನದ ಗೌರವ ತಂದಿದ್ದರು. ಈಗ ಕ್ರೆಡ್ ತಯಾರಿಸಿರುವ ಈ ವೀಡಿಯೋ ಜಾಹೀರಾತಿನಲ್ಲಿ ಅವರು ನಾನಾ ರೂಪಗಳಲ್ಲಿ ಕಾಣಿಸಿಕೊಂಡಿ ದ್ದಾರೆ. ಕಾರ್ಪೊರೇಟ್ ಅಧಿಕಾರಿ, ಬ್ಯಾಂಕ್ ಉದ್ಯೋಗಿ, ಮಾಧ್ಯಮ ವರದಿಗಾರ, ಕ್ರೀಡಾಪಟು ಸೇರಿದಂತೆ ಆರೇಳು ವೇಷಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಹೆಸರಾಂತ ಸ್ಟಾಂಡ್ ಅಪ್ ಕಾಮಿಡಿಯನ್ ತನ್ಮಯ್ ಭಟ್ ಈ ಜಾಹೀರಾತಿನ ಸ್ಕ್ರಿಪ್ಟ್ ಬರೆದಿರುವುದು ವಿಶೇಷ.
ಜಾಹೀರಾತಿನಲ್ಲಿ ನೀರಜ್ ನಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ರೆಡ್ ಸಂಸ್ಥೆಯ ಅಧಿಕಾರಿ ಅಯ್ಯಪ್ಪ ಕೆ.ಎಂ., “ನೀರಜ್, ನಟನೆ ಮಾಡುತ್ತಾರಾ, ಇಲ್ಲವಾ ಎಂಬ ಗೊಂದಲದಲ್ಲೇ ಅವರನ್ನು ಜಾಹೀರಾತಿಗೆ ಹಾಕಿಕೊಂಡಿ ದ್ದೆವು. ಆದರೆ ನಮ್ಮ ನಿರೀಕ್ಷೆಗೂ ಮೀರಿ ಅವರು ನಟಿಸುವ ಮೂಲಕ ತಮ್ಮ ಮತ್ತೂಂದು ಪ್ರತಿಭೆಯ ಅನಾವರಣ ಮಾಡಿದ್ದಾರೆ’ ಎಂದು ಹೇಳಿದ್ದಾರೆ. ಇನ್ನು, ಈ ಜಾಹೀ ರಾತನ್ನು ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ಮೆಚ್ಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.