ನಟಿ ಪಾಯಲ್ ಘೋಷ್ ಮೇಲೆ ಆ್ಯಸಿಡ್ ದಾಳಿಗೆ ಯತ್ನ
Team Udayavani, Sep 21, 2021, 3:40 PM IST
ಮುಂಬೈ: ದುಷ್ಕರ್ಮಿಗಳ ಗುಂಪೊಂದು ನನ್ನ ಮೇಲೆ ಆ್ಯಸಿಡ್ ದಾಳಿ ನಡೆಸಲು ಪ್ರಯತ್ನಿಸಿದರು ಎಂದು ನಟಿ ಪಾಯಲ್ ಘೋಷ್ ಹೇಳಿದ್ದಾರೆ.
ಸೋಮವಾರ ಮೆಡಿಕಲ್ ಶಾಪ್ನಿಂದ ಕೆಲವು ಮೆಡಿಷನ್ ಪಡೆದು ಕಾರ್ ಹತ್ತುವ ಸಂದರ್ಭದಲ್ಲಿ ಬೈಕ್ ಮೇಲೆ ಧಾವಿಸಿದ ಮುಸುಕುಧಾರಿಗಳ ಗುಂಪು ನನ್ನ ಮೇಲೆ ಕಬ್ಬಿಣದ ರಾಡ್ನಿಂದ ದಾಳಿ ನಡೆಸಲು ಮುಂದಾದರು. ಅವರ ಕೈಯಲ್ಲಿ ಬಾಟಲ್ವೊಂದಿತ್ತು. ಬಹುಶಃ ಅದರಲ್ಲಿ ಆ್ಯಸಿಡ್ ಇತ್ತು ಎನ್ನುವುದು ನನ್ನ ಅನುಮಾನ. ನಾನು ಅವರಿಂದ ತಪ್ಪಿಸಿಕೊಂಡು ಪಾರಾದೆ. ಈ ವೇಳೆ ನನ್ನ ಕೈಗೆ ಸ್ವಲ್ಪ ಪೆಟ್ಟಾಗಿದೆ ಎಂದು ಪಾಯಲ್ ಹೇಳಿದ್ದಾರೆ.
ನಾನು ಕಾರಿನ ಡೋರ್ ತೆಗೆಯುವಷ್ಟರಲ್ಲಿ ಮುಸುಕುಧಾರಿಗಳ ಗುಂಪು ನನ್ನತ್ತ ಧಾವಿಸಿತು. ಅಪಾಯದ ಮುನ್ಸೂಚನೆ ಅರಿತು ನಾನು ಜೋರಾಗಿ ಕೂಗಿಕೊಂಡು, ನನ್ನ ಮೇಲೆ ನಡೆಯಬಹುದಾದ ದಾಳಿಯಿಂದ ತಪ್ಪಿಸಿಕೊಂಡೆ. ಅವರು ಸ್ಥಳದಿಂದ ಓಡಿ ಹೋದೆ. ಈ ಬಗ್ಗೆ ಇಂದು ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತೇನೆ ಎಂದು ಘೋಷ್ ಹೇಳಿದ್ದಾರೆ.
ಇನ್ನು ಪಾಯಲ್ ಅವರು ಬಾಲಿವುಡ್ ಸಿನಿಮಾ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು. ಇದು ಹಿಂದಿ ಚಿತ್ರರಂಗದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಟಾಲಿವುಡ್ ನಟ ಜ್ಯೂ.ಎನ್ಟಿಆರ್ ಬಗ್ಗೆಯೂ ಈ ನಟಿ ಮಾತನಾಡಿದ್ದರು. ಹಾಗೂ ಚಿತ್ರರಂಗದಲ್ಲಿ ಪಕ್ಷಪಾತ ಇದೆ ಎಂದು ಆರೋಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್ಅಪ್ ಆಗಿದೆ: ಮಲ್ಲಿಕಾ ಶೆರಾವತ್
Rapper Badshah: ಗಾಯಕ ಬಾದ್ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.