ವಾಣಿಜ್ಯ ಟ್ರಕ್ ಚಾಲಕರಿಗೂ ಚಾಲನಾ ಅವಧಿ ನಿಗದಿಯಾಗಲಿ: ಗಡ್ಕರಿ
Team Udayavani, Sep 21, 2021, 10:00 PM IST
ನವದೆಹಲಿ: ಪೈಲಟ್‌ಗಳ ಮಾದರಿಯಲ್ಲೇ ಇನ್ನು ಮುಂದೆ ವಾಣಿಜ್ಯ ಟ್ರಕ್ ಚಾಲಕರಿಗೂ “ಚಾಲನಾ ಅವಧಿ’ಯನ್ನು ನಿಗದಪಡಿಸಬೇಕು. ಜತೆಗೆ, ವಾಣಿಜ್ಯ ವಾಹನಗಳ ಒಳಗೆ “ನಿದ್ರೆ ಪತ್ತೆ ಸೆನ್ಸರ್’ಗಳನ್ನು ಅಳವಡಿಸಬೇಕು. ಆಗ ರಸ್ತೆ ಅಪಘಾತಗಳನ್ನು ತಗ್ಗಿಸಲು ಸಾಧ್ಯ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಂಗಳವಾರ ಸರಣಿ ಟ್ವೀಟ್‌ಗಳ ಮೂಲಕ ಅವರು ಈ ರೀತಿಯ ಸಲಹೆಗಳನ್ನು ನೀಡಿದ್ದಾರೆ. ಬಹುತೇಕ ಅಪಘಾತಗಳಿಗೆ ಚಾಲಕನ ಬಳಲಿಕೆಯೇ ಕಾರಣ. ಅದನ್ನು ತಪ್ಪಿಸಬೇಕೆಂದರೆ, ವಾಣಿಜ್ಯ ಟ್ರಕ್‌ಗಳ ಚಾಲಕರಿಗೆ ಇಂತಿಷ್ಟೇ ಚಾಲನಾ ಅವಧಿ ಎಂದು ನಿಗದಿಪಡಿಸಬೇಕು.
ಅಲ್ಲದೇ, ಅವರು ವಾಹನ ಚಾಲನೆ ಮಾಡುತ್ತಾ ನಿದ್ರೆಗೆ ಜಾರದಂತೆ ತಡೆಯಲು, ಸೆನ್ಸೆರ್ ಅಳವಡಿಸಬೇಕು. ನಿದ್ದೆ ಆವರಿಸುತ್ತಿದ್ದಂತೆ ಆ ಸೆನ್ಸರ್ ಅವರನ್ನು ಎಚ್ಚರಿಸುವಂತಿರಬೇಕು. ಐರೋಪ್ಯ ಮಾದರಿಯಲ್ಲಿ ಇಂಥ “ಸ್ಲೀಪ್ ಡಿಟೆಕ್ಷನ್ ಸೆನ್ಸರ್’ಗಳನ್ನು ಅಳವಡಿಸುವ ನಿಯಮದ ಕುರಿತು ಚಿಂತನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದೂ ಗಡ್ಕರಿ ಹೇಳಿದ್ದಾರೆ.
ಇದನ್ನೂ ಓದಿ:ಪ್ರದರ್ಶನ ನಿಲ್ಲಿಸಿದ ‘ಸರಸ್ವತಿ’ |ಇತಿಹಾಸದ ಪುಟ ಸೇರಿದ ಮತ್ತೊಂದು ಚಿತ್ರಮಂದಿರ
ಇದೇ ವೇಳೆ, ಇತ್ತೀಚಿನ ದಿನಗಳಲ್ಲಿ ದೇಶದ ಹೆದ್ದಾರಿ ಯೋಜನೆಗಳಲ್ಲಿ ಚೀನಾದ ಕಂಪನಿಗಳು ಹೂಡಿಕೆ ಮಾಡಿಲ್ಲ ಎಂದೂ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.