ಗಾಂಧಿ ಧೋತಿ ಶತಮಾನೋತ್ಸವ
Team Udayavani, Sep 23, 2021, 1:36 PM IST
ಬೆಂಗಳೂರು: ಉಡುಪುಗಳ ಮಾರಾಟ ಕ್ಷೇತ್ರದಲ್ಲಿ ಹೆಸರು ಮಾಡಿರುವ ರಾಮರಾಜ್ ಕಾಟನ್ ಇತ್ತೀಚೆಗೆ
ಗಾಂಧಿ ಧೋತಿ ಶತಮಾನೋತ್ಸವವನ್ನು ಆಚರಿಸಿತು. ಶತಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ
“ನನ್ನ ಉಡುಪನ್ನು ಧೋತಿಗೆ ಬದಲಾಯಿಸಲು’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ವರ್ಷದ ಸ್ಮರಣಾರ್ಥವಾಗಿ ರಾಮರಾಜ್ ಕಾಟನ್ ತಿರುಪುರದಲ್ಲಿ “ಧೋತಿ 100′ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದೇ ಸಂದರ್ಭದಲ್ಲಿ ನೂರು ಹುತಾತ್ಮ ಕುಟುಂಬದವರನ್ನು ಮತ್ತು ನೂರು ನೇಕಾರನ್ನು
ಗೌರವಿಸಲಾಯಿತು. ಜತೆಗೆ 100 ಸಸಿಗಳನ್ನು ನಡೆಲಾಯಿತು.
ಚನ್ನೈನ ಕಲಾಕ್ಷೇತ್ರ ಫೌಂಡೇಶನ್‌ನ ನೃತ್ಯಗಾರರು ಗಾಂಧಿಯ ವಾಜಿಲ್ ರಾಮರಾಮ್ ಎಂಬ ಸಾಂಪ್ರಾದಾಯಿಕ ನೃತ್ಯ ರೂಪಕ ಪ್ರದರ್ಶಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಮರಾಜನ್ ಕಾಟನ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್.ನಾಗರಾಜ್ ನಾವು ಮಹಾತ್ಮನ ಉಡುಪು ಗಳನ್ನು ನಮ್ಮ ರಾಷ್ಟ್ರೀಯ ಉಡುಪು ಮತ್ತು ಗುರುತಿನ
ಸಂಕೇತವಾಗಿ ಪರಿವರ್ತಿಸುತ್ತಿದ್ದೇವೆ ಎಂದರು. ನಮ್ಮ ಧ್ಯೇಯವನ್ನು ಅನುಸರಿಸಿ ನಾವು 40,000 ನೇಕಾರರ
ಜೀವನವನ್ನು ಪ್ರಜ್ಞಾನ ಪೂರ್ವಕವಾಗಿ ಶ್ರೀಮಂತ ಗೊಳಿಸುತ್ತಿದ್ದೇವೆ. ಫ್ಯಾಷನ್ ಬ್ರ್ಯಾಂಡ್ ಪ್ರಪಂಚಕ್ಕೆ
ಹೊಸದನ್ನು ನೀಡುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ ಕೊಯಮತ್ತೂರಿನ ಭಾರತೀಯ ವಿದ್ಯಾಭವನದ ಅಧ್ಯಕ್ಷ ಡಾ.ಬಿ.ಕೆ.ಕೃಷ್ಣರಾಜ್ ವನವ
ರಾಯರ್ ಅವರು ಮಾಹತ್ಮವೈ ಕೊಂಡಡುವಂ ಕೃತಿ ಯನ್ನು ಬಿಡುಗಡೆಗೊಳಿಸಿದರು. ಮೊದಲ ಪ್ರತಿ
ಯನ್ನು ಕೊಯಮತ್ತೂರಿನ ರೊಟ್ಸ್ ಗ್ರೂಫ್ ಆಫ್ ಕಂಪನಿಗಳ ಅಧ್ಯಕ್ಷ ಕೆ.ರಮಸ್ವಾಮಿ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.