ಡೋಲಿಯಲ್ಲಿ ಗಿಡ ಹೊತ್ತೋಯ್ದ ಪರಿಸರ ಪ್ರೇಮಿಗಳು
ಕರೀಘಟ್ಟ ಬೆಟ್ಟದ ಮೇಲ್ಭಾಗದಲ್ಲಿ ಗಿಡ ನೆಡುವ ಕಾಯಕ; ಪಟ್ಟಣದ ಪರಿಸರ ಪ್ರೇಮಿ ರಮೇಶ್ ಹಾಗೂ ಸ್ನೇಹಿತರಿಂದ ಪರಿಸರ ವೃದ್ಧಿಗೆ ಶ್ರಮ
Team Udayavani, Sep 23, 2021, 2:30 PM IST
ಶ್ರೀರಂಗಪಟ್ಟಣ: ಕರೀಘಟ್ಟ ಬೆಟ್ಟದ ಹಸಿರೀಕರಣಕ್ಕಾಗಿ ಶ್ರೀರಂಗಪಟ್ಟಣದಲ್ಲಿ ಯುವಕರ ತಂಡವೊಂದು ಬೆಟ್ಟದ ಮೇಲ್ಭಾಗಕ್ಕೆ ಗಿಡಗಳನ್ನು ಡೋಲಿ ಕಟ್ಟಿ ಹೆಗಲ ಮೇಲೆ ಹೊತ್ತೋಯ್ದು ಬೆಟ್ಟದ ತುದಿಯಲ್ಲಿ ಗಿಡ ನೆಡುವ ಮೂಲಕ ಪರಿಸರ ಕಳಿಕಳಿ ಮೆರೆಯುತ್ತಿದ್ದಾರೆ.
ಪಟ್ಟಣದ ಪರಿಸರ ಪ್ರೇಮಿ ರಮೇಶ್ ಹಾಗೂ ಮತ್ತವರ ತಂಡ ತಾಲೂಕಿನ ಕರೀಘಟ್ಟ ಬೆಟ್ಟದಲ್ಲಿ ಬೆಟ್ಟದ ಹಸಿರೀಕರಣ ಕಾರ್ಯಕ್ಕೆ ಮುಂದಾಗಿದ್ದಾರೆ. ಕಡಿದಾದ ಬೆಟ್ಟದ ಮೇಲ್ಭಾಗಕ್ಕೂ ದೊಡ್ಡ ದೊಡ್ಡ ಗಿಡಗಳನ್ನು ನೆಡಲು ನಿರ್ಧರಿಸಿ ತಮ್ಮ ತಂಡದೊಂದಿಗೆ, ಮೆಟ್ಟಿಲು ಇಲ್ಲದೇ ಕಡಿದಾಗಿರೋ ಬೆಟ್ಟದ ತಪ್ಪಲುಗಳ ಮೇಲ್ಭಾಗಕ್ಕೆ ಕೋಲಿನ ಸಹಾಯದಿಂದ ಡೋಲಿ ನಿರ್ಮಿಸಿ, ಅದಕ್ಕೆ ಗಿಡಗಳನ್ನ ಕಟ್ಟಿ ಹೆಗಲ ಮೇಲೆ ಬೆಟ್ಟದ ಮೇಲ್ಭಾಗಕ್ಕೆ ಹೊತ್ತು ಸಾಗಿಸಿ ಗಿಡ ನೆಡುವ ಕಾಯಕ ಮಾಡುತ್ತಿದ್ದಾರೆ.
ಇದನ್ನೂ ಓದಿ:ಮುದ್ದೇಬಿಹಾಳದಲ್ಲಿ ಮನೆಯ ಮೇಲ್ಛಾವಣಿ ಕುಸಿತ: ವೃದ್ದೆಗೆ ಗಂಭೀರ ಗಾಯ
ಸ್ನೇಹಿತರ ಸಹಕಾರ:
ಬೆಟ್ಟದ ಕೆಳಭಾಗದ ಸುತ್ತಲೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಗಿಡಗಳನ್ನು ಪಡೆದು ಸಾವಿರಾರು ಗಿಡ ನೆಡಲಾಗಿದ್ದು, ಮೇಲ್ಭಾಗಕ್ಕೆ ಗಿಡಗಳನ್ನು ತೆಗೆದುಕೊಂಡು ಹೋಗಲು ಭಾರೀ ಶ್ರಮವಾಗುತ್ತಿತ್ತು. ಇದರಿಂದ ನನ್ನ ಸ್ನೇಹಿತರ ಸಹಕಾರ ಪಡೆದು ಬೆಟ್ಟದ ಮೇಲ್ಭಾಗದಲ್ಲಿ ವಿವಿಧ ಗಿಡ ನೆಡಲಾಗುತ್ತಿದೆ. ಮುಂದೆ ಈ ಗಿಡಗಳು ದೊಡ್ಡ ಮರವಾಗುವ ಗಿಡಗಳಾಗಿವೆ ಎಂದು ಪರಿಸರ ಪ್ರೇಮಿ ರಮೇಶ್ ತಿಳಿಸಿದರು.
ಸ್ನೇಹಿತರು ಸೇರಿದಂತೆ ಪರಿಸರ ಕಳಕಳಿಯ ತಂಡದೊಂದಿಗೆ ಈ ಕೆಲಸ ಮಾಡುತ್ತಿದ್ದು, ಇವರ ಈ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇವರ ತಂಡದ ಪರಿಸರ ಕಳಕಳಿಗೆ ಪ್ರಶಂಸೆ ವ್ಯಕ್ತಪಡಿಸ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.