ಕೃಷಿ ಚಟುವಟಿಕೆಗಳ ಕೌಶಲ್ಯ ಬಲವರ್ಧನೆಗೆ ಹೆಕ್ಸಾಗಾನ್ ಜೊತೆ ಒಡಂಬಡಿಕೆ


Team Udayavani, Sep 23, 2021, 9:20 PM IST

dfgdsfrtre

ಬೆಂಗಳೂರು: ಕೃಷಿ ಚಟುವಟಿಕೆಗಳ ಕೌಶಲ್ಯ ಬಲವರ್ಧನೆಗೆ ಸ್ಮಾರ್ಟ್ ಕೃಷಿ ಕೇಂದ್ರಗಳನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರ  ಮಹತ್ವದ ಹೆಜ್ಜೆಯಿಟ್ಟಿದ್ದು, ಈ ನಿಟ್ಟಿನಲ್ಲಿ ಹೆಕ್ಸಾಗಾನ್ ಮ್ಯಾನ್ಯುಫ್ಯಾಕ್ಚರಿಂಗ್ ಇಂಟಲಿಜೆನ್ಸ್ ಇಂಡಿಯಾ ಕಂಪೆನಿ ಜೊತೆ ಕೃಷಿ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ.

ವಿಕಾಸಸೌಧದ ಸಭಾಂಗಣದಲ್ಲಿ ಹೆಕ್ಸಗಾನ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಧರ್ಮರಾಜನ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕೃಷಿ ಅಭಿವೃದ್ಧಿಯಲ್ಲಿ ಕರ್ನಾಟಕ ಮಹತ್ವದ ಹೆಜ್ಜೆಇಟ್ಟಿದ್ದು, ದೇಶದಲ್ಲಿಯೇ ಮೊದಲ ಸ್ಥಾನವನ್ನು ಪಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿರುವ ರೈತರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಗೆ ಪೂರಕವಾಗಿ ರಾಜ್ಯ ಸರ್ಕಾರವು ಈ ಮಹತ್ವದ ಒಡಂಬಡಿಕೆಯನ್ನು ಮಾಡಿಕೊಂಡಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಮಯದಲ್ಲಿ ಹೆಕ್ಸಾನ್ ಕಂಪೆನಿ ಜೊತೆ ಚರ್ಚಿಸಿ ಈ ಒಡಂಬಡಿಕೆಗೆ ಮುಂದಾಗಿದ್ದೆವು. ಸಿಎಂ ಮಾರ್ಗದರ್ಶನದಂತೆ ಹಣಕಾಸು ಇಲಾಖೆಯಿಂದ ಒಪ್ಪಿಗೆಯನ್ನು ಇದಕ್ಕೆ ಪಡೆದು ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಸರ್ಕಾರ ಎರಡನೇ ಹೆಜ್ಜೆ ಹೆಜ್ಜೆ ಇಟ್ಟಿದೆ. ಕೃಷಿ ಚಟುವಟಿಕೆಗಳ ಕೌಶಲ್ಯ ಬಲವರ್ಧನೆಗೆ 700 ಕೋಟಿ ರೂ.ಮೌಲ್ಯದ ಒಡಂಬಡಿಕೆಯಾಗಿದ್ದು, ಈ ಒಡಂಬಡಿಕೆಯ ಮೂಲಕ ರಾಜ್ಯದ 4 ಕೃಷಿ ವಿಶ್ವವಿದ್ಯಾಲಯಗಳಲ್ಲಿ 7 CIDSA ಕೇಂದ್ರಗಳನ್ನು ಬೆಂಗಳೂರು, ಚಾಮರಾಜನಗರ, ಶಿವಮೊಗ್ಗ, ಧಾರವಾಡ, ವಿಜಯಪುರ, ಹನುಮನಮಟ್ಟಿ ಹಾಗೂ ಗಂಗಾವತಿಯಲ್ಲಿ ಸ್ಮಾರ್ಟ್ ಕೃಷಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದರು.

ಏನಿದು ಒಡಂಬಡಿಕೆ: ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹೇಗೆ ಹೆಕ್ಸಗಾನ್ ನೆರವಾಗಲಿದೆ:

CIDSA ಕೇಂದ್ರಗಳು 3 ವರ್ಷಗಳ ಅವಧಿಯಲ್ಲಿ ರೈತರಿಗೆ, ವಿದ್ಯಾರ್ಥಿಗಳಿಗೆ, ಉದ್ದಿಮೆದಾರರಿಗೆ ಹಾಗೂ ವಿಜ್ಞಾನಿಗಳಿಗೆ ಮುಂದಿನ ಆಧುನಿಕ ಕೃಷಿಗೆ ಬೇಕಾಗುವ ಭವಿಷ್ಯದ ಕೌಶಲ್ಯಗಳು, ಹೊಸ ತಂತ್ರಜ್ಞಾನ ಮತ್ತು ಉತ್ಕೃಷ್ಟ ಇಂಜಿನಿಯರಿಂಗ್ ತಂತ್ರಜ್ಞಾನ, ಪ್ರಾತ್ಯಕ್ಷಿಕೆ ಹಾಗೂ ಕಲಿಕೆ ಮೂಲಕ ತರಬೇತಿ ನೀಡುವುದು.

ಕಂಪೆನಿ ಒದಗಿಸುವ ಆವಿಷ್ಕಾರಕ ತಂತ್ರಜ್ಞಾನಗಳಿಂದ ಯಂತ್ರೋಪಕರಣಗಳ ನಿಖರ ಉಪಯೋಗದಿಂದ ಕೃತಕ ಬುದ್ಧಿವಂತಿಕೆ ಬಳಸಿ, ರೋಬೋಟಿಕ್ ಬಳಕೆ, ಅಭಿವೃದ್ಧಿಪಡಿಸಿದ ಡಾಟಾವನ್ನು ಬುದ್ಧಿವಂತಿಕೆಯಿಂದ ಬಳಸುವ ಯೋಜನೆಯನ್ನು ಕ್ಷೇತ್ರ ಮಟ್ಟದ ಕೃಷಿ ಚಟುವಟಿಕೆಗಳನ್ನು ನಿಖರ ಬೇಸಾಯ ಪದ್ಧತಿಯಲ್ಲಿ ಮಾಡಲು ರೂಪಿಸಲಾಗಿದೆ.ನೂತನ ಯೋಜನೆಯಲ್ಲಿ ಕ್ಷೇತ್ರಮಟ್ಟದ ಪ್ರಾಯೋಗಿಕ ಕೌಶಲ್ಯಗಳನ್ನು ಕೃಷಿಯಲ್ಲಿ ಅಟೋಮೆಷನ್ ತರುವ ಹಾಗೂ ಸ್ಥಳೀಯ ಬೇಡಿಕೆಗೆ ಅನುಗುಣವಾಗುವಂತೆ ಪಠ್ಯಕ್ರಮಗಳನ್ನು ಕ್ಷೇತ್ರ ಮಟ್ಟದ ಪ್ರಾಯೋಗಿಕ ವಿಷಯಗಳಾದ ಮಣ್ಣು, ಹವಾಮಾನ, ಸ್ಥಳೀಯ ಕ್ಷೇತ್ರ ಪದ್ಧತಿಗಳನ್ನು ಸುಧಾರಣೆ ಮಾಡಿ ತರಬೇತುದಾರರಿಗೆ ತರಬೇತಿ ನೀಡುತ್ತಾ ಗ್ರಾಮೀಣ ಬದುಕನ್ನು ಮತ್ತು ಗ್ರಾಮಸ್ಥರನ್ನು ಹಾಗೂ ಕೃಷಿ ಉದ್ದಿಮೆದಾರರೊಂದಿಗೆ ಸೌಹಾರ್ದತೆಯಿಂದ ಕೃಷಿ ಅಭಿವೃದ್ಧಿಗಾಗಿ ಪೂರಕ ವಾತಾವರಣವನ್ನು ನಿರ್ಮಿಸುವ ಉದ್ದೇಶ ಹೊಂದಿದೆ.

CIDSA ಕೇಂದ್ರಗಳಲ್ಲಿ ತೆರೆಯುವ ಪ್ರಯೋಗಾಲಯಗಳು ಪ್ರಮುಖವಾಗಿ ಕೃಷಿಯನ್ನು ಆಧುನೀಕರಣಗೊಳಿಸುವ ತಂತ್ರಜ್ಞಾನಗಳಾದ ನಿಖರ ಬೇಸಾಯ, ಕೃಷಿಯಲ್ಲಿ ಆಟೋಮೇಷನ್, ಬೇಸಾಯ ಶಾಸ್ತ್ರ, ಕೃಷಿ ಯಂತ್ರೋಪಕರಣಗಳ ವಿನ್ಯಾಸ ಹಾಗೂ ತಯಾರಿಕೆ, ಆಧುನಿಕ ಡ್ರೋನ್ ತಂತ್ರಜ್ಞಾನಗಳನ್ನು ಬಳಕೆ ಮಾಡಿ ಕೃಷಿಯನ್ನು ಹವಾಮಾನ ವೈಪರೀತ್ಯಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವಂತೆ ನಿರಂತರ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಕಾರ್ಯಯೋಜನೆಯನ್ನು ರೂಪಿಸಲಾಗಿದೆ.

ಸ್ಮಾರ್ಟ್ ಕೃಷಿ ಕೇಂದ್ರಗಳು ರಾಜ್ಯದ ಕೃಷಿಯನ್ನು ಹೆಚ್ಚು ಸುಸ್ಥಿರವಾಗುವಂತೆ ಲಾಭದಾಯಕವಾಗುವಂತೆ ಎಂಜಿನಿಯರಿಂಗ್ ನೂತನ ತಂತ್ರಜ್ಞಾನ ಬಳಸಿ ಜಾಗತಿಕವಾಗಿ ಸ್ಪರ್ಧಾತ್ಮಕ ಮಾದರಿಯಲ್ಲಿ ಗುಣಮಟ್ಟದ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.  ಈ ಕೇಂದ್ರಗಳು ಮುಂದುವರೆದು, ಕೃಷಿಯಲ್ಲಿ ನೂತನ ಆವಿಷ್ಕಾರಗಳನ್ನು ತರುವುದು, ಕೃಷಿ ನವೋದ್ಯಮಗಳಿಗೆ ಪ್ರೋತ್ಸಾಹ ನೀಡುವುದು, ಸಣ್ಣ- ಅತಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಉದ್ದಿಮೆದಾರರನ್ನು ಸೃಷ್ಟಿಸುವುದು ಮತ್ತು ಇವರಿಗೆ ಪೂರಕವಾದ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳುವುದು.  ಅಲ್ಲದೇ ರಾಜ್ಯದಲ್ಲಿ ಕೃಷಿಯಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ.

ಒಡಂಬಡಿಕೆ ಸಂದರ್ಭದಲ್ಲಿ  ಹೆಕ್ಸಾಗಾನ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಧರ್ಮರಾಜನ್ ಕೃಷಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಜಕುಮಾರ್ ಖತ್ರಿ, ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಸೇರಿದಂತೆ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23-bng

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

22-bng

Bengaluru: ಏರ್ಪೋರ್ಟ್‌ ಟಿ-2ಗೆ ವರ್ಟಿಕಲ್‌ ಗಾರ್ಡನ್‌ ರಂಗು

21-bng

Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ

20-flipama

Bengaluru: 19 ಕಡೆ ಫ್ಲಿಪ್‌ ಕಾರ್ಟ್‌, ಅಮೆಜಾನ್‌ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ

19-bng

Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.