ಜಾಗತಿಕ ಟಾಪ್ ಸ್ಟಾರ್ಟ್ ಅಪ್ ಹಬ್ಗಳಲ್ಲಿ ಬೆಂಗಳೂರಿಗೆ ಸ್ಥಾನ
ದಿಲ್ಲಿಯು ಟಾಪ್ 40ರ ಪಟ್ಟಿಯಲ್ಲಿ 36ನೇ ಸ್ಥಾನ ಪಡೆದಿದೆ.
Team Udayavani, Sep 25, 2021, 10:50 AM IST
ಲಂಡನ್: ಜಗತ್ತಿನ ಪ್ರಮುಖ ಸ್ಟಾರ್ಟ್ ಅಪ್ ಹಬ್ಗಳ ಪಟ್ಟಿಯಲ್ಲಿ ಬೆಂಗಳೂರು, ಮುಂಬಯಿ, ಲಂಡನ್ ಸ್ಥಾನ ಪಡೆದಿವೆ. ಟಾಪ್ 100 ಸ್ಟಾರ್ಟ್ ಅಪ್ ಹಬ್ಗಳ ಪೈಕಿ ಮುಂಬಯಿ ಮೊದಲ ಸ್ಥಾನವನ್ನು ಕಾಯ್ದುಕೊಂಡರೆ, ಲಂಡನ್ ಎರಡನೇ ಸ್ಥಾನವನ್ನು ಪಡೆದಿದೆ. ಟಾಪ್ 30 ಜಾಗತಿಕ ಟೆಕ್ ಹಬ್ಗಳ ಪಟ್ಟಿಯಲ್ಲಿ ಬೆಂಗಳೂರು 23ನೇ ಸ್ಥಾನ ಪಡೆದುಕೊಂಡರೆ, ದಿಲ್ಲಿಯು ಟಾಪ್ 40ರ ಪಟ್ಟಿಯಲ್ಲಿ 36ನೇ ಸ್ಥಾನ ಪಡೆದಿದೆ.
ಕಾರ್ಯಕ್ಷಮತೆ, ಪ್ರತಿಭೆ, ಸಂಪರ್ಕ ಸಾಧನೆ ಸೇರಿದಂತೆ 7 ಮಾನದಂಡಗಳ ಆಧಾರದಲ್ಲಿ ಈ ಸ್ಥಾನಗಳನ್ನು ನೀಡಲಾಗಿದೆ. ಟೆಕ್ ಸ್ಟಾರ್ಟ್ ಅಪ್ ಸ್ಥಾಪನೆಗೆ ಅತ್ಯಂತ ಆಕರ್ಷಣೀಯವಾದ ನಗರವೆಂದರೆ ಲಂಡನ್ ಎಂದು ಸ್ಟಾರ್ಟ್ ಅಪ್ ಜಿನೋಮ್ನ “ಗ್ಲೋಬಲ್ ಸ್ಟಾರ್ಟ್ ಅಪ್ ರ್ಯಾಂಕಿಂಗ್’ನಲ್ಲಿ ಉಲ್ಲೇಖೀಸಲಾಗಿದೆ. ಭಾರತದ ಸ್ಟಾರ್ಟಪ್ಗಳು ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ 12.1 ಶತಕೋಟಿ ಡಾಲರ್ ಸಂಗ್ರಹಿಸಿದ್ದು, ಟೆಕ್ ಮತ್ತು ಇನೋವೇಶನ್ನಲ್ಲಿ ಜಾಗತಿಕ ಹಬ್ ಆಗಿ ಭಾರತ ಮುಂದಡಿಯಿಡುತ್ತಿರುವುದಕ್ಕೆ ಇದು ಸಾಕ್ಷಿ ಎಂದು ವರದಿ ಹೇಳಿದೆ.
ಬೆಂಗಳೂರು ಮತ್ತು ಕರ್ನಾಟಕದ ಇತರ ಪ್ರದೇಶಗಳು ಜಗತ್ತಿನಲ್ಲೇ 4ನೇ ಅತಿದೊಡ್ಡ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಲಸ್ಟರ್ಗಳಾಗಿ ರೂಪುಗೊಂಡಿವೆ. ಇಲ್ಲಿ 400ಕ್ಕೂ ಅಧಿಕ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರು, ಮುಂಬಯಿ ಹೊರತು ಪಡಿಸಿ ಭಾರತದ ಚೆನ್ನೈ, ಪುಣೆ ಮತ್ತು ಹೈದರಾಬಾದ್ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Passes Away: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.