ಅನ್ನದಾತನ ಬಳಿಗೆ ಕೃಷಿ ಸಂಜೀವಿನಿ
ರೈತರಿಗೆ ಪ್ರಚಾರ ಮಾಡಿ ಅದನ್ನು ತಲುಪಿಸಲು ಪ್ರಯತ್ನಿಸುವುದೇ ಮೂಲ ಉದ್ದೇಶವಾಗಿದೆ.
Team Udayavani, Sep 25, 2021, 6:13 PM IST
ಸಿಂದಗಿ:ಸರಕಾರ ಕೃಷಿ ಸಂಜೀವಿನಿ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಯ ಮೂಲಕ ಕೃಷಿ ಬೆಳೆಗಳಿಗೆ ಕಾಡುವ ಕೀಟ, ರೋಗ, ಕಳೆ ಬಾಧೆ, ಮಣ್ಣಿನ ಪರೀಕ್ಷೆ, ಮಣ್ಣಿನ ಪೋಷಕಾಂಷಗಳ ಕೊರತೆ ಮೊದಲಾದ ಸಮಸ್ಯೆಗಳಿಗೆ ತರುವ ಪರಿಹಾರವನ್ನು ನೀಡುವುದು ಕೃ ಷಿ ಸಂಜಿವಿನಿ ಉದ್ದೇಶವಾಗಿದೆ.
ಕೃಷಿ ಬೆಳೆಗಳಿಗೆ ಕಾಡುವ ಕೀಟ, ರೋಗ, ಕಳೆ ಬಾಧೆ, ಮಣ್ಣಿನ ಪರೀಕ್ಷೆ, ಮಣ್ಣಿನ ಪೋಷಕಾಂಷಗಳ ಕೊರತೆ ಕಂಡುಕೊಂಡು ಸಮರ್ಪಕವಾಗಿ ನಿರ್ವಹಣೆ ಮಾಡಲು ಹಾಗ ಕೃಷಿ ಕೀಟಗಳನ್ನು ಹತೋಟಿಗೆ ತರುವ ಮಾರ್ಗೋಪಾಯಗಳನ್ನು ರೈತನಿಗೆ ತಮ್ಮ ಜಮೀನನಲ್ಲೇ ವ್ಯವಸ್ಥೆ ಮಾಡಲು ಸರಕಾರ ಕೃಷಿ ಸಂಜೀವಿನಿ ಯೋಜನೆ ಜಾರಿಗೊಳಿಸಿದ್ದು , ತಾಲೂಕಿನಲ್ಲಿ ಯೋಜನೆಯನ್ನು ರೈತರಿಗೆ ಮುಟ್ಟಿಸಲು ಕೃಷಿ ಸಹಾಯಕ ನಿರ್ದೇಶಕ ಕಾರ್ಯಾಲಯದ ಕೃಷಿ
ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಕೃಷಿಯು ನೈಸರ್ಗಿಕ ವಿಕೋಪ, ಅನಾವೃಷ್ಟಿ, ಅತಿ ವೃಷ್ಟಿ, ಚಂಡಮಾರುತ, ಬೆಳೆಗಳಿಗೆ ಕಾಡುವ ಕೀಟ ಮತ್ತು ರೋಗ ಬಾಧೆ ಹಾಗೂ ಮಣ್ಣಿನ ಫಲವತ್ತತೆ ಮತ್ತು ಇತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ಸುಧಾರಿತ ಕೃಷಿ ಉತ್ಪಾದನಾ ತಾಂತ್ರಿಕತೆ, ಗುಣ ಮಟ್ಟದ ಕೃಷಿ ಪರಿಕರಗಳ ಪೂರೈಕೆ ಮತ್ತು ಶಿಫಾರಸು ಮಾಡಲಾದ ರಸಗೊಬ್ಬರಗಳ ಸಮರ್ಪಕ ಬಳಕೆ, ರೋಗ, ಕೀಟಗಳ ಹತೋಟಿ, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ ಸೂಕ್ತ ಬೆಳೆ ಬೆಳೆಯಲು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ.
ರೈತರ ಸಮಸ್ಯೆಗಳಿಗೆ ಕೃಷಿ ಸಂಜೀವಿನಿ ಟೋಲ್ ಫ್ರೀ ಹೆಲ್ಫ್ ಲೈನ್ (ಸಹಾಯವಾಣಿ) ಸಂಖ್ಯೆ 155313 ಆರೋಗ್ಯ ಇಲಾಖೆ ಯ ಆಂಬ್ಯುಲೆನ್ಸ್‌ನಂತೆ ಸಹಾಯವಾಣಿ ಕೆಲಸ ಮಾಡುತ್ತದೆ. ಸಕಾಲದಲ್ಲಿ ಬೆಳೆದ ಬೆಳೆಗಳನ್ನು ಎಲ್ಲಾ ಹಂತಗಳಲ್ಲಿ ಸರ್ವೇಕ್ಷಣೆ ಕೈಗೊಂಡು ಕಂಡುಬಂದಿರುವ, ಕಂಡುಬರ ಬಹುದಾದ ಕೀಟ ರೋಗ ಕಳೆಗಳ ನಿರ್ವಹಣಾ ಮಾರ್ಗೋಪಾಯಗಳನ್ನು ರೈತರಿಗೆ ತಿಳಿಸುವ ಜೊತೆಗೆ ಕೃಷಿ ಇಲಾಖೆಯ ಇತರೆ ಯೋಜನೆಗಳನ್ನು ರೈತರಿಗೆ ಪ್ರಚಾರ ಮಾಡಿ ಅದನ್ನು ತಲುಪಿಸಲು ಪ್ರಯತ್ನಿಸುವುದೇ ಮೂಲ ಉದ್ದೇಶವಾಗಿದೆ.
ಟೋಲ್ ಫ್ರೀಹೆಲ್ಪ್ಲೈನ್ (ಸಹಾಯವಾಣಿ) 155313ಈ ಸಂಖ್ಯೆಗೆ ಕರೆ ಮಾಡಿ ರೈತರು ತಮ್ಮ ಸಮಸ್ಯೆ ತಿಳಿಸಿ ಪರಿಹಾರ ಪಡೆಯಬಹುದು. ಆರೋಗ್ಯ ಇಲಾಖೆಯ
ಆಂಬ್ಯುಲೆನ್ಸ್‌ನಂತೆ ಕೆಲಸ ಮಾಡುತ್ತದೆ. ಸಕಾಲದಲ್ಲಿ ಬೆಳೆಯ ಎಲ್ಲ ಹಂತಗಳಲ್ಲಿ ಸರ್ವೇಕ್ಷಣೆಕೈಗೊಂಡು ಕಂಡು ಬಂದಿರುವ, ಕಂಡು ಬರಬಹುದಾದಕೀಟ, ರೋಗ, ಕಳೆಗಳ ನಿರ್ವಹಣಾ ಮಾರ್ಗೋಪಾಯಗಳನ್ನು ರೈತರಿಗೆ ತಿಳಿಸುವುದು ಮುಖ್ಯ ಉದ್ಧೇಶವಾಗಿದೆ.
ಡಾ| ಎಚ್.ವೈ. ಸಿಂಗೆಗೋಳ
ಸಹಾಯಕ ಕೃಷಿ ನಿರ್ದೇಶಕರು, ಸಿಂದಗಿ
ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನದಲ್ಲಿ ಸೂಕ್ಷ್ಮ ಕೀಟಗಳನ್ನು ಗುರುತಿಸಲು ಸ್ಟೀರಿಯೊ ಜೂಮ್ ಸೂಕ್ಷ್ಮದರ್ಶಕ, ಭೂತಗನ್ನಡಿ, ರಸಗೊಬ್ಬರ ಪರೀಕ್ಷಾ ಕಿಟ್, ಮಣ್ಣು ತೇವಾಂಶ ಸಂವೇದಕ,ಕೀಟ ಸಂಗ್ರಹಣಾ ಬಲೆ, ರೈತರ ಜಮೀನಿನಲ್ಲಿ ವೈಜ್ಞಾನಿಕ ಸರ್ವೇಕ್ಷಣೆ ಕೈಗೊಳ್ಳಲು ಟ್ಯಾಬ್ಸ್, ಲ್ಯಾಪ್‌ಟಾಪ್, ಪ್ರಿಂಟರ್, ಉಷ್ಣಮಾಪಕ ಸೇರಿ ವಿವಿಧ ಉಪಕರಣಗಳನ್ನು ವಾಹನದಲ್ಲಿ ಇರುತ್ತದೆ. ರೈತರುಕೃಷಿ ಸಂಜೀವಿನಿ ಪ್ರಯೋಜನ ಪಡೆಯಬೇಕು.
ಶಿವಾನಂದ ಹೂವಿನಹಳ್ಳಿ. ಕೃಷಿ ಅಧಿಕಾರಿ,
ರೈತ ಸಂಪರ್ಕ ಕೇಂದ್ರ, ಸಿಂದಗಿ
ಸುಧಾರಿತಕೃಷಿ ಉತ್ಪಾದನಾ ತಾಂತ್ರಿಕತೆ, ಗುಣಮಟ್ಟದ ಕೃಷಿ ಪರಿಕರಗಳ ಪೂರೈಕೆ ಮತ್ತು ಶಿಫಾರಸು ಮಾಡಲಾದ ರಸಗೊಬ್ಬರಗಳ ಸಮರ್ಪಕ ಬಳಕೆ, ರೋಗ,ಕೀಟಗಳ ಹತೋಟಿ, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಷಗಳ ಬಗ್ಗೆ ರೈತರುಕೃಷಿ ಅಧಿಕಾರಿಗಳ ಮಾರ್ಗದರ್ಶನದಿಂದ ಮಾಹಿತಿ ಪಡೆದು ಸೂಕ್ತ ಬೆಳೆ ಬೆಳೆಯಬೇಕು.
ರಾಜಶೇಖರ ಪೂಜಾರಿ, ನಿರ್ದೇಶಕರು,
ತಾಲೂಕಾ ಕೃಷಿಕ ಸಮಾಜ ಸಿಂದಗಿ
ರಮೇಶ ಪೂಜಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.