1921ರ ಮಾಪಿಳ್ಳೆ ದಂಗೆ ಜೆಹಾದಿಗಳು ಹಿಂದೂಗಳ ಮೇಲೆ ನಡೆಸಿದ ನರಮೇಧ : ಯೋಗಿ
Team Udayavani, Sep 26, 2021, 7:30 AM IST
ತಿರುವನಂತಪುರ: 1921ರಲ್ಲಿ ಕೇರಳದ ಮಲಬಾರ್‌ನಲ್ಲಿ ನಡೆದ ಮಾಪಿಳ್ಳೆ ದಂಗೆ ಅಥವಾ ಮಲಬಾರ್ ದಂಗೆಯು ಜೆಹಾದಿಗಳು ಹಿಂದೂಗಳ ಮೇಲೆ ನಡೆಸಿದ ಪೂರ್ವ ನಿಯೋಜಿತ ನರಮೇಧ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಆರ್‌ಎಸ್‌ಎಸ್ ಬೆಂಬಲಿತ ಪಾಂಚಜನ್ಯ ವಾರಪತ್ರಿಕೆ ಏರ್ಪಡಿಸಿದ್ದ ಚರ್ಚೆಯಲ್ಲಿ ಭಾಗವಹಿಸಿ ಅವರು ಈ ಮಾತುಗಳನ್ನಾಡಿದ್ದಾರೆ. “ಭಾರತದ ಇತಿಹಾಸವನ್ನು ಸರಿಯಾದ ದೃಷ್ಟಿಯಲ್ಲಿ ಅರ್ಥ ಮಾಡಿಕೊಳ್ಳುವ ಆವಶ್ಯಕತೆಯಿದೆ. 100 ವರ್ಷಗಳ ಹಿಂದೆ ರಾಜ್ಯದ ಜೆಹಾದಿಗಳು ಸಾವಿರಾರು ಹಿಂದೂಗಳನ್ನು ಹತ್ಯೆ ಮಾಡಿದರು. ಸಾಕಷ್ಟು ದಿನಗಳ ಕಾಲ ನರಮೇಧ ನಡೆಯಿತು. 10 ಸಾವಿರಕ್ಕೂ ಅಧಿಕ ಹಿಂದೂಗಳು ಸಾವನ್ನಪ್ಪಿರುವ ವರದಿಯಿದೆ. ಅದು ಭೂ ಮಾಲಕರ ಮೇಲೆ ನಡೆಸಿದ ದಂಗೆ ಎಂದು ಕೆಲವರು ವಾದಿಸುತ್ತಾರೆ. ಹಾಗಾಗಿದ್ದರೆ ಅಷ್ಟೊಂದು ಸಾವಿರ ಹಿಂದೂಗಳ ಕೊಲೆ ಹೇಗಾಗುತ್ತಿತ್ತು. ಅವರು ಮತಾಂತರಕ್ಕೆ ಒಪ್ಪಲಿಲ್ಲ ಎನ್ನುವ ಕಾರಣಕ್ಕೇ? ಸತ್ಯ ಏನೆಂದರೆ ಈ ಇತಿಹಾಸವನ್ನೆಲ್ಲ ಬರೆದವರು ಎಡಪಂಥೀಯರು. ಓಟ್‌ಬ್ಯಾಂಕ್ ಮಾಡುತ್ತಿದ್ದ ಪಕ್ಷಗಳೂ ಅದಕ್ಕೆ ಬೆಂಬಲಿಸಿದರು’ ಎಂದು ಯೋಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.