ಮೇಯರ್ ಚುನಾವಣೆ; ʼಕೈʼಯಿಂದ ವೀಕ್ಷಕರ ನೇಮಕ
Team Udayavani, Sep 26, 2021, 11:57 AM IST
ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯಮೇಯರ್-ಉಪಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಕೆಪಿಸಿಸಿ ವತಿಯಿಂದ ಶೀಘ್ರದಲ್ಲೇಅಬjರ್ವರ್ ಆಗಮಿಸಲಿದ್ದಾರೆ. ಬೆಂಗಳೂರಿನ ಕೆಪಿಸಿಸಿಕಚೇರಿಯಲ್ಲಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಈನಿರ್ಣಯ ಕೈಗೊಳ್ಳಲಾಗಿದ್ದು, ಅಬjರ್ವರ್‌ಗಳೇಸದಸ್ಯರು, ಮುಖಂಡರರು, ಪಕ್ಷದ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ಅಭ್ಯರ್ಥಿಗಳನ್ನುಆಯ್ಕೆ ಮಾಡಲಿದ್ದಾರೆ.
ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆಗೆಮತದಾನ-ಮತ ಎಣಿಕೆ ನಡೆದು ಈಗಾಗಲೇ ಐದುತಿಂಗಳು ಕಳೆದಿವೆ. ಕೋವಿಡ್ ಸೋಂಕು ಸೇರಿ ಹಲವುಕಾರಣಗಳಿಂದ ಮೇಯರ್-ಉಪಮೇಯರ್‌ಆಯ್ಕೆ ಚುನಾವಣೆಯನ್ನು ಮುಂದೂಡಿದ್ದ ರಾಜ್ಯಸರ್ಕಾರ, ಈಚೆಗೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡ,ಕಲುºರ್ಗಿ ಮಹಾನಗರ ಪಾಲಿಕೆಗಳಿಗೂ ಚುನಾವಣೆನಡೆದ ಹಿನ್ನೆಲೆಯಲ್ಲಿ ಎಲ್ಲ ಪಾಲಿಕೆಗಳಿಗೂ ಮೇಯರ್-ಉಪಮೇಯರ್ ಆಯ್ಕೆ ಚುನಾವಣೆ ನಡೆಸಲು ಈಚೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ.
ಇದರ ಬೆನ್ನಲ್ಲೇ ಪಾಲಿಕೆ ಚುನಾವಣೆಯಲ್ಲಿಬಹುಮತ (21 ಸದಸ್ಯ) ಸಾಧಿಸಿರುವ ಕಾಂಗ್ರೆಸ್‌ಪಕ್ಷದಲ್ಲಿ ರಾಜಕೀಯ ಚಟುವಟಿಕೆ ಬಿರುಸುಪಡೆದುಕೊಂಡಿವೆ. ಸಾಮಾನ್ಯಕ್ಕೆ ಮೇಯರ್,ಹಿಂದುಳಿದ ವರ್ಗ ಅ ಮಹಿಳೆಗೆ ಉಪಮೇಯರ್‌ಸ್ಥಾನ ಮೀಸಲಾಗಿದ್ದು, ಹಲವು ಆಕಾಂಕ್ಷಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಮಧ್ಯ ಪ್ರವೇಶಿಸಿರುವ ಕೆಪಿಸಿಸಿ ವೀಕ್ಷಕರನ್ನು ನಿಯೋಜಿಸಿ ಸೂಕ್ತ ಅಭ್ಯರ್ಥಿಗಳನ್ನುಆಯ್ಕೆ ಮಾಡಲು ಮುಂದಾಗಿದ್ದು, ಚುನಾವಣೆ ಘೋಷಣೆಯಾಗುವುದೊಂದೆ ಬಾಕಿಯಿದೆ.
ಕೆಪಿಸಿಸಿ ಕಚೇರಿಯಲ್ಲಿ ಸಭೆ: ಬಳ್ಳಾರಿ ಮಹಾನಗರಪಾಲಿಕೆಗೆ ಸಂಬಂಧಿಸಿದಂತೆ ಬೆಂಗಳೂರಿನ ಕೆಪಿಸಿಸಿಕಚೇರಿಯಲ್ಲಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ನೇತೃತ್ವದಲ್ಲಿ ಶನಿವಾರ ಸಭೆ ನಡೆದಿದ್ದು, ಸಭೆಯಲ್ಲಿಕಾರ್ಯಧ್ಯಕ್ಷರಾದ ಈಶ್ವರಖಂಡ್ರೆ, ಸಲೀಂಅಹಮ್ಮದ್, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ರಾಜ್ಯಸಭೆ ಸದಸ್ಯಡಾ| ಸೈಯದ್ ನಾಸೀರ್ ಹುಸೇನ್, ಗ್ರಾಮೀಣಶಾಸಕ ಬಿ. ನಾಗೇಂದ್ರ, ಮಾಜಿ ಸಂಸದ ಉಗ್ರಪ್ಪ,ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಮಹಮ್ಮದ್‌ರಫೀಕ್ ಸೇರಿ ಹಾಲಿ ಸದಸ್ಯರು, ಪರಾಜಿತಅಭ್ಯರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಮೇಯರ್-ಉಪಮೇಯರ್ ಆಯ್ಕೆಗೆಚುನಾವಣೆ ಘೋಷಣೆಯಾಗಿಲ್ಲ. ದಿನಾಂಕ ನಿಗದಿಯಾಗಿಲ್ಲ. ಈ ನಡುವೆ ಆಕಾಂಕ್ಷಿಗಳಲ್ಲಿಪೈಪೋಟಿ ಏರ್ಪಟ್ಟು ಗೊಂದಲಕ್ಕೀಡಾಗುವುದುಬೇಡ. ಚುನಾವಣೆ ಘೋಷಣೆಯಾದಾಕ್ಷಣ ಕೆಪಿಸಿಸಿವತಿಯಿಂದಲೇ ವೀಕ್ಷಕರನ್ನು ನೇಮಿಸಲಾಗುವುದು.ಅವರು ಬಳ್ಳಾರಿಗೆ ಬಂದು ಹಾಲಿ ಸದಸ್ಯರು,ವಿಧಾನ ಪರಿಷತ್ ಸದಸ್ಯರು, ಶಾಸಕರು, ಪರಾಜಿತಅಭ್ಯರ್ಥಿಗಳು, ಹಿರಿಯ ಮುಖಂಡರು ಸೇರಿ ಪಕ್ಷದಎಲ್ಲ ಕಾರ್ಯಕರ್ತರನ್ನು ಸಂಪರ್ಕಿಸಿ ಅಭಿಪ್ರಾಯಸಂಗ್ರಹಿಸಲಿದ್ದಾರೆ. ಬಳಿಕ ವೀಕ್ಷಕರು ನೀಡುವ ವರದಿಆಧರಿಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ,ಚುನಾವಣೆಯಂದು ಹೆಸರುಗಳನ್ನು ಬಹಿರಂಗಪಡಿಸಲಿದ್ದು, ಸೂಚಿಸಿದ ಅಭ್ಯರ್ಥಿಗಳು ನಾಮಪತ್ರಸಲ್ಲಿಸಲಿದ್ದಾರೆ ಎಂಬುದು ಸೇರಿ ಇನ್ನಿತರೆ ವಿಷಯಗಳಕುರಿತು ಸಭೆಯಲ್ಲಿ ಚರ್ಚೆಯಾಗಿವೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಮಹಾನಗರ ಪಾಲಿಕೆ ಐದು ವರ್ಷದ ಅವಧಿಯದ್ದಾಗಿದೆ. ಈ ಅವಧಿಯಲ್ಲಿ ಐದು ಮೇಯರ್,ಐದು ಉಪಮೇಯರ್ ಸೇರಿ 10 ಜನರಿಗೆ ಅವಕಾಶದೊರೆಯಲಿದೆ. ಪ್ರತಿವರ್ಷ ನಾಲ್ಕು ಸ್ಥಾಯಿಸಮಿತಿಗಳಿಗೆ ನಾಲ್ವರಂತೆ ಐದು ವರ್ಷಗಳಲ್ಲಿ 20ಸದಸ್ಯರಿಗೆ ಸ್ಥಾಯಿ ಸಮಿತಿ ಅವಕಾಶ ದೊರೆಯಲಿದೆ.ಎಲ್ಲರೂ ಆಕಾಂಕ್ಷಿಗಳಾಗುವುದು ಸಾಮಾನ್ಯ. ಹಾಗಂತಎಲ್ಲರಿಗೂ ಅವಕಾಶ ನೀಡಲಾಗದು. ಬಿಜೆಪಿಯವರುಹಬ್ಬಿಸುವ ಗಾಳಿ ಸುದ್ದಿಗಳಿಗೆ ಕಿವಿಗೊಡದೆ, ಅವಕಾಶಸಿಕ್ಕಿಲ್ಲ ಎಂದು ಅಸಮಾಧಾನಕ್ಕೊಳಗಾಗದೆ ಎಲ್ಲರೂ ಒಗ್ಗಟ್ಟಾಗಿರಬೇಕು. ಮುಂಬರುವ ವಿಧಾನಸಭೆ ಚುನಾವಣೆಗೆ ಇನ್ನು 18 ತಿಂಗಳು ಮಾತ್ರ ಉಳಿದಿದ್ದು,ಈ ನಡುವೆ ಯಾವುದೇ ಗೊಂದಲಕ್ಕೆ ಒಳಗಾಗಬಾರದುಎಂದು ಡಿಕೆಶಿ ಸದಸ್ಯರಿಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
Bellary: ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.