ಶ್ರೀರಂಗಪಟ್ಟಣ ದಸರಾಕ್ಕೆ 2 ಕೋಟಿ ರೂ.ಗೆ ಪ್ರಸ್ತಾವನೆ
Team Udayavani, Sep 26, 2021, 3:19 PM IST
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪಾರಂಪರಿಕಾ ದಸರಾ ಆಚರಿಸಲು ಸರ್ಕಾರಕ್ಕೆ 2 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅ.9 ರಿಂದ 3 ದಿನ ಶ್ರೀರಂಗಪಟ್ಟಣ ದಸರಾ ಉತ್ಸವವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ತಿಳಿಸಿದರು.
ಪಟ್ಟಣದ ಶೀರಂಗನಾಥಸ್ವಾಮಿ ಕಲ್ಯಾಣ ಮಂದಿರದಲ್ಲಿ ದಸರಾ ಆಚರಣೆ ಕುರಿತು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿ ಕಾರಿ, ಹಾಗೂ ಪೊಲೀಸ್ ಅಧಿಕಾರಿಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಲಹೆ ಪಡೆದು ಈ ವಿಷಯ ತಿಳಿಸಿದರು.
ಈ ಬಾರಿ ಕೋವಿಡ್ ನಿಯಮಗಳನ್ನು ಪಾಲಿಸಿ. ಮೂಲ ದಸರಾ ಆಚರಣೆ ಮಾಡುವ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ಪಾರಂಪರಿಕ ದಸರಾವನ್ನು ಚೆನ್ನಾಗಿ ಆಚರಣೆ ಮಾಡಬೇಕಿದೆ. ಹಣದ ಕೊರತೆ ಇಲ್ಲದಂತೆ ಹೆಚ್ಚಿನ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ತಿಳಿಸಿದರು.
ಉದ್ಘಾಟನೆಗೆ ಚಿಂತನೆ: ಮುಖ್ಯಮಂತ್ರಿ ಅಥವಾ ಇತರ ಜನಪ್ರತಿನಿಧಿ, ಕಲಾ ಸಾಹಿತಿಗಳು ಸೇರಿದಂತೆ ಇತರ ಹೆಸರಾಂತ ವ್ಯಕ್ತಿಗಳನ್ನು ದಸರಾ ಉದ್ಘಾಟನೆಗೆ ಕರೆಸಲು ಚಿಂತನೆ ನಡೆಯುತ್ತಿದೆ. ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಮತ್ತೂಂದು ದಿನ ಶಾಸಕ ರೊಂದಿಗೆ ಸಭೆ ಕರೆಯಲಾಗುತ್ತದೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಮೆರವಣಿಗೆ ಬಳಿಕ ಶ್ರೀರಂಗ ವೇದಿಕೆಯಲ್ಲಿ 3 ದಿನ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳೀಯ ಕಲಾವಿದರ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿ ಹಣಖರ್ಚಾಗುವ ಆರ್ಕೇಸ್ಟ್ರಾ ಕಡಿಮೆಗೊಳಿಸಲಾಗುತ್ತದೆ. ದಸರಾ ಕ್ರೀಡಾ ಕೂಟ ಗಳಲ್ಲಿ ಕುಸ್ತಿ ಕಬಡಿ, ಇತರೆ ಆಟೋಟ ನಡೆ ಸಲುಸೂಚಿಸಲಾಗಿದೆ .ಸಾರ್ವಜನಿಕರು ಹಾಗೂ ಕಲಾವಿ ದರಿಗೆ ಈ ವೇಳೆ ತೊಡಕು ಉಂಟಾಗದಂತೆ ಹಾಗೂ ವೈದ್ಯಕೀಯ ಸೌಕರ್ಯ ಒದಗಿಸಿ ಎಂದರು.
ಕ್ರೀಡಾಂಗಣ ದುರಸ್ತಿ: ಶ್ರೀರಂಗಪಟ್ಟಣದ ಕ್ರೀಡಾಂಗಣದ ಛಾವಣಿ ಹಲವು ವರ್ಷಗಳಿಂದ ದುರಸ್ತಿ ಕಾಮಗಾರಿ ನಡೆಸದೆ ಇರುವುದು ಬೇಸರದ ಸಂಗತಿ. ಕಳೆದ 10 ವರ್ಷಗಳ ಹಿಂದೆ ಕ್ರೀಡಾ ಸಚಿವನಾಗಿ ನಾನು ಇರಲಿಲ್ಲ. ಇದೀಗ ನಾನು ಕ್ರೀಡಾ ಸಚಿವ ನಾಗಿದ್ದರಿಂದ ಅಭಿವೃದ್ಧಿಗೆ ಈಗಾಗಲೇ ಹಣ ಬಿಡುಗಡೆ ಯಾಗಿದೆ. ಕಾಮಗಾರಿ ನಡೆಸಲು ಅಧಿಕಾರಿಗಳಿಂದ ವಿಳಂಬವಾಗಿದ್ದು ಹಣವನ್ನು ಹಂತಹಂತವಾಗಿ ನೀಡಲಾಗುತ್ತದೆ. ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಅಂಬೇಡ್ಕರ್ ಸ್ತಂಭ: ಪಟ್ಟಣದ ಹೃದಯ ಭಾಗದ ಅಂಬೇಡ್ಕರ್ ವೃತ್ತದಲ್ಲಿನ ಸ್ತಂಭ ಶಿಥಿಲಗೊಂಡಿರುವ ಬಗ್ಗೆ ದಲಿತ ಸಂಘರ್ಷ ಸಮಿತಿ ಸದಸ್ಯರು ಸಚಿವರ ಗಮನಕ್ಕೆ ತಂದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸಚಿವ ನಾರಾಯಣಗೌಡರು, ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಇಲ್ಲಿವರೆಗೆ 25 ಲಕ್ಷ ರೂ. ಹಣ ಬಿಡುಗಡೆಯಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ನಡೆಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವರು ತಕ್ಷಣದಲ್ಲಿ ದುರಸ್ತಿ ನಡೆಸಲು ತಹಶೀಲ್ದಾರ್ ಮೂಲಕ ಹಾಗೂ ಲೋಕೋ ಪಯೋಗಿ ಇಲಾಖೆಗೆ ಸೂಚನೆ ನೀಡಿದರು.
ಶಾಸಕ ಗೈರು: ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಶ್ರೀರಂಗಪಟ್ಟಣ ದಸರಾದ ಪೂರ್ವಭಾವಿ ಸಭೆಯ ವೇದಿಕೆಯಲ್ಲಿ ಗೈರು ಹಾಜರಿ ಕಾಣುತ್ತಿತ್ತು. ಈ ಬಗ್ಗೆ ಸಚಿವರನ್ನು ಪ್ರಶ್ನಿಸಿದಾಗ, ತುಮಕೂರಿನಲ್ಲಿ ಜೆಡಿಎಸ್ ಕಾರ್ಯಕಾರಣಿ ಸಭೆ ಇದೆ ಎಂದು ಶಾಸಕರು ತಿಳಿಸಿದ್ದಾರೆ.
ಅವರೊಂದಿಗೆ ನಾನು ಚರ್ಚೆ ಮಾಡಿದ್ದು ಇನ್ನೊಂದು ದಿನ ಶಾಸಕರೊಂದಿಗೆ ಸಭೆ ಕರೆದು ದಸರಾ ಕಾರ್ಯಕ್ರಮಗಳ ಕುರಿತು ಚರ್ಚೆ ಮಾಡಲಾಗುತ್ತದೆ ಎಂದರು. ಜಿಲ್ಲಾಧಿಕಾರಿ ಎಸ್. ಅಶ್ವಥಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶ್ವಿನಿ, ಅಪರ ಜಿಲ್ಲಾಧಿಕಾರಿ ಶೈಲಜಾ, ಪಾಂಡವಪುರಉಪ ವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಶ್ವೇತಾ, ಡಿವೈಎಸ್ಪಿ ಸಂದೇಶ್‌ಕುಮಾರ್, ಮುಖ್ಯಾಧಿಕಾರಿ ಮಾನಸ, ಜಿಲ್ಲಾ ಮತ್ತು ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮೈಸೂರಿನಿಂದ ಆನೆ, ಕುದುರೆ ಆಗಮನ: ಪ್ರತಿ ವರ್ಷದಂತೆ ಚಾಮುಂಡೇಶ್ವರಿ ದೇವಿ ಹೊರಲು ಗಜಪಡೆ ಕಳುಹಿಸುವ ವಿಚಾರದಲ್ಲಿ ಈಗಾಗಲೇ ಪಳಗಿರುವ ಆನೆಗಳನ್ನು ನೀಡಲು ಸರ್ಕಾರಕ್ಕೆ ಮನವಿ ಮಾಡಿದೆ. ಈ ಬಾರಿಯ ದಸರಾಗೆ ಮೈಸೂರಿನಿಂದ ಆನೆ ಹಾಗೂ ಕುದುರೆ ಕರೆಸಲಾಗುತ್ತಿದೆ. ಗಜಪಡೆಯೊಂದಿಗೆ ನಾಡದೇವಿಚಾಮುಂಡೇಶ್ವರಿಯನ್ನು ಹೊತ್ತ ಪಾರಂಪರಿಕ ದಸರೆ ಮೆರವಣಿಗೆ ಬನ್ನಿಮಂಟಪದಿಂದ ರಾಜಬೀದಿಯಲ್ಲಿ ಶ್ರೀರಂಗನಾಥ ದೇವಾಲಯದವರೆಗೂ ಜಂಬೂಸವಾರಿ ಮೂಲಕ ತೆರಳಲುರೂಪುರೇಷೆ ಮಾಡಿಕೊಳ್ಳಲಾಗುವುದು. ಈ ವೇಳೆ ಹಲವು ಸ್ಥಳೀಯ ಮತ್ತು ರಾಜ್ಯದ ವಿವಿಧಜಾನಪದ ಕಲಾತಂಡಗಳು, ವಿದ್ಯಾರ್ಥಿಗಳ ಪಥಸಂಚಲನ, ಪ್ರಮುಖ ಇಲಾಖೆಗಳ ಸ್ತಬ್ಧ ಚಿತ್ರ ಹಾಗೂ ಪೊಲೀಸ್ ಬ್ಯಾಂಡ್ ಜತೆಗೆ ನಿಯೋಜಿತ ಮಾರ್ಗದಲ್ಲಿ ತೆರಳುವುದು. ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲು ಸೂಚಿಸಲಾಗುತ್ತದೆ ಎಂದು ಸಚಿವ ನಾರಾಯಣಗೌಡ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.