ಧಾರವಾಡ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ
Team Udayavani, Sep 26, 2021, 8:35 PM IST
ಧಾರವಾಡ: ಮಳೆಗಾಲದಲ್ಲಿ ಸೋರಿಕೆ ಕಾಣುತ್ತಿದ್ದ ಗಡಿಯಾರ ಮತ್ತು ಕೆಂಪು ಬಣ್ಣದ ಧಾರವಾಡ ರೈಲ್ವೆ ನಿಲ್ದಾಣದ ಹಳೇ ಕಟ್ಟಡ ಇದೀಗ ಹೈಟೆಕ್ ಸ್ಪರ್ಶ ಪಡೆದಿದೆ. ಇದಲ್ಲದೇ ಉತ್ತರ ಕರ್ನಾಟಕದಲ್ಲಿಯೇ ಗೋಡೆ ಉದ್ಯಾನವನ ಹೊಂದಿರುವ ಏಕೈಕ ನಿಲ್ದಾಣವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಕಳೆದ ಎರಡ್ಮೂರು ವರ್ಷಗಳಲ್ಲಿ ಇಲ್ಲಿನ ರೈಲ್ವೆ ನಿಲ್ದಾಣದ ಚಿತ್ರಣವೇ ಬದಲಾಗಿದೆ. ನೈಋತ್ಯ ರೈಲ್ವೆ ವಿಭಾಗದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒಂದಾದ ಈ ರೈಲು ನಿಲ್ದಾಣವು ಇದೀಗ ಹೈಟೆಕ್ ರೂಪ ಪಡೆದುಕೊಂಡು ನೋಡುಗರ ಕಣ್ಮನ ಸೆಳೆಯಲು ಸಿದ್ಧಗೊಂಡಿದೆ.
ಹಳೇ ಕಟ್ಟಡ ನೆನಪಷ್ಟೆ: 1936ನೇ ಇಸ್ವಿಯಲ್ಲಿ ಅಂದಿನ ಮದ್ರಾಸ್ ದಕ್ಷಿಣ ಮರಾಠಾ ರೈಲ್ವೆ (ಎಂಎಸ್‌ಎಂಆರ್) ವತಿಯಿಂದ ಧಾರವಾಡದಲ್ಲಿ ರೈಲ್ವೆ ನಿಲ್ದಾಣ ನಿರ್ಮಿಸಲಾಗಿತ್ತು. ಗಡಿಯಾರ, ಕೆಂಪು ಬಣ್ಣದೊಂದಿಗೆ ತನ್ನದೇ ಆದ ವಿಶೇಷತೆಗಳಿಂದ ಕಂಗೊಳಿಸುತ್ತಿತ್ತು. ಇದೀಗ ಆ ಕಟ್ಟಡ ನೆನಪು ಮಾತ್ರ. ಹಳೇ ಕಟ್ಟಡದಲ್ಲಿ ಸಣ್ಣ ಬುಕ್ಕಿಂಗ್ ಕಚೇರಿ, ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವೇಟಿಂಗ್ ರೂಂಗಳಿದ್ದವು. ಇವು ಚಿಕ್ಕದಾಗಿದ್ದು, ಮಂಗಳೂರು ಹಂಚು ಹೊಂದಿದ್ದವು. ಇದೇ ಆವರಣದಲ್ಲೇ ಗಡಿಯಾರ ನಿರ್ವಹಣೆ ಕೋಣೆ ಸಂಯೋಜಿಸಲಾಗಿತ್ತು. ವಿಐಪಿ ಕೊಠಡಿ ಚಿಕ್ಕದಾಗಿತ್ತು. ಪ್ರವೇಶ ಹಾಗೂ ನಿರ್ಗಮನ ದ್ವಾರ ಒಂದೇ ಆಗಿತ್ತು. ವಾಹನಗಳ ನಿಲುಗಡೆಗೆ ಸೂಕ್ತ ಸೌಲಭ್ಯ ಇರಲಿಲ್ಲ. ಇದೀಗ ಈ ಕಟ್ಟಡ ತೆರವುಗೊಂಡು ಕಳೆದ ಎರಡ್ಮೂರು ವರ್ಷಗಳಲ್ಲಿ ಹೊಸ ರೂಪದಲ್ಲಿ ಕಂಗೊಳಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
MUST WATCH
ಹೊಸ ಸೇರ್ಪಡೆ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.