ಕಾಪು ಬೀಚ್‌ನಲ್ಲಿ ಮತ್ತೆ ಪ್ರವಾಸಿಗರು, ಮಕ್ಕಳು ಮತ್ತು ವಿಹಾರಾರ್ಥಿಗಳ ಕಲರವ
Team Udayavani, Sep 27, 2021, 12:51 PM IST
ಕಾಪು: ಶತಮಾನೋತ್ತರ ವಿಂಶತಿ (120) ವರ್ಷಾಚರಣೆಯ ಸಂಭ್ರಮದಲ್ಲಿರುವ ಕರಾವಳಿಯ ಆಕರ್ಷಕ ವಿಹಾರ ತಾಣ ಕಾಪು ಲೈಟ್ ಹೌಸ್ ಮತ್ತು ಬೀಚ್ ಇದೀಗ ಪ್ರವಾಸಿಗರಿಗೆ ಸಂಪೂರ್ಣ ಮುಕ್ತವಾಗಿ ತೆರೆದುಕೊಂಡಿದ್ದು, ಪ್ರವಾಸಿಗರು, ಮಕ್ಕಳು ಮತ್ತು ವಿಹಾರಾರ್ಥಿಗಳ ಕಲರವ ಪ್ರಾರಂಭಗೊಂಡಿದೆ.
ಕೊರೊನಾ ಎರಡನೇ ಅಲೆಯ ಕಾರಣದಿಂದ ಕಳೆದ ಮಾರ್ಚ್ ತಿಂಗಳಾಂತ್ಯದಿಂದ ಕಾಪು ಬೀಚ್‌ಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶಕ್ಕೆ ಅಧಿಕೃತವಾಗಿ ನಿರ್ಬಂಧ ವಿಽಸಲಾಗಿತ್ತು. ಇದರಿಂದಾಗಿ ಬೀಚ್ ಪ್ರವಾಸೋದ್ಯಮ ಸಂಪೂರ್ಣವಾಗಿ ನಿಂತು ಹೋಗಿದ್ದು, ಬೀಚ್‌ನಲ್ಲಿ ವ್ಯಾಪಾರ ವಹಿವಾಟುಗಳೂ ಸಂಪೂರ್ಣ ಸ್ಥಗಿತಗೊಂಡಿದ್ದವು.
ಕೊರೊನಾ ನಿರ್ಬಂಧದ ಜೊತೆಗೆ ಮಳೆಗಾಲವೂ ಆರಂಭಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರು ಬೀಚ್‌ಗೆ ಬರಲು ಹಿಂದೇಟು ಹಾಕುವಂತಾಗಿತ್ತು. ಕಾಪು ಬೀಚ್ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಗಾಲದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು ಇದರಿಂದಾಗಿ ತೀರಾ ಅಪಾಯಕಾರಿ ಸ್ಥಿತಿ ಉಂಟಾಗುತ್ತದೆ. ಇದರ ಜೊತೆಗೆ ಭಾರೀ ಮಳೆ ಮತ್ತು ತೌಖ್ತೆ ಚಂಡ ಮಾರುತದ ಪರಿಣಾಮದಿಂದಾಗಿ ಬೀಚ್ ಮೂಲಕವಾಗಿ ಲೈಟ್ ಹೌಸ್‌ಗೆ ತೆರಳುವ ರಸ್ತೆಯೂ ಕೊಚ್ಚಿ ಹೋಗಿದ್ದ ಪರಿಣಾಮ ಲೈಟ್ ಹೌಸ್‌ನ್ನು ಏರಲು ಸಮಸ್ಯೆಯಾಗುತ್ತಿತ್ತು.
ಸೆಪ್ಟಂಬರ್ 21ರಂದು ನಡೆದ ಲೈಟ್‌ಹೌಸ್ ದಿನಾಚರಣೆ, ಕಾಪು ಲೈಟ್‌ಹೌಸ್‌ನ ೧೨೦ ನೇ ವರ್ಷಾಚರಣೆ ಸಂಭ್ರಮ ಹಾಗೂ ಪ್ರವಾಸೋದ್ಯಮವನ್ನು ಇನ್ನಷ್ಟು ಬೆಳೆಸುವ ಉದ್ದೇಶದೊಂದಿಗೆ ಕಾಪು ಬೀಚ್ ಮತ್ತು ಲೈಟ್‌ಹೌಸ್‌ನ ಸುತ್ತಮುತ್ತಲಿನಲ್ಲಿ ಅಗತ್ಯವುಳ್ಳ ವಿವಿಧ ಸೌಕರ್ಯಗಳ ಸಹಿತವಾಗಿ ಪ್ರವಾಸಿಗರನ್ನು ಸೆಳೆಯುವ ಇತರ ಕೆಲವೊಂದು ಸೌಕರ್ಯಗಳೂ ಜೋಡಣೆಯಾಗಿರುವುದರಿಂದ ಪ್ರವಾಸಿಗರು ಮತ್ತೆ ಕಾಪು ಬೀಚ್‌ನತ್ತ ಮರಳುವಂತಾಗಿದೆ.
ಬೀಚ್‌ನಲ್ಲಿ ಸಂಜೆ ವೇಳೆ ಹೆಚ್ಚುತ್ತಿದೆ ಜನಸಂದಣಿ : ಅದರ ಜೊತೆಗೆ ವಿಽಸಲಾಗಿದ್ದ ರಾಜ್ಯಾದ್ಯಂತ ಕೊರೊನಾ ಕಾರಣದ ನಿರ್ಬಂಧಗಳು ಕೂಡಾ ಒಂದೊಂದಾಗಿ ತೆರವಾಗಿದ್ದು ಕಾಪು ಬೀಚ್‌ನಲ್ಲಿ ನಿಂತು ಹೋಗಿದ್ದ ಬಹುತೇಕ ಚಟುವಟಿಕೆಗಳು, ಅಂಗಡಿಗಳು ಕೂಡಾ ಒಂದೊಂದಾಗಿ ತೆರೆದುಕೊಂಡಿವೆ. ಇದರಿಂದಾಗಿ ಕಳೆದ ಒಂದು ವಾರದಿಂದೀಚೆಗೆ ಕಾಪು ಬೀಚ್‌ಗೆ ಆಗಮಿಸುವ ಸ್ಥಳೀಯ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ವಿಹಾರಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ಎರಡು ವಾರಗಳಿಂದೀಚಿಗೆ ವಾರಾಂತ್ಯದಲ್ಲಿ ಬೀಚ್‌ಗೆ ಬರುವ ಹೊರ ಜಿಲ್ಲೆಗಳು, ಹೊರ ರಾಜ್ಯಗಳ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ಶನಿವಾರ ಮತ್ತು ರವಿವಾರ ಸಂಜೆ ಬೀಚ್‌ನಲ್ಲಿ ಹೆಚ್ಚಿನ ಜನಸಂದಣಿ ಕಂಡು ಬರುತ್ತಿದೆ.
ನಿಂತು ಹೋಗಿದ್ದ ಚಟುವಟಿಕೆಗಳು ಪುನರಾರಂಭ : ಕೊರೊನಾ ಕಾರಣದಿಂದ ನಿಂತು ಹೋಗಿದ್ದ ಚಟುವಟಿಕಗಳ ಸಹಿತವಾಗಿ ಪುಟ್ಟ ಮಕ್ಕಳನ್ನು ಸೆಳೆಯುವ ಮನೋರಂಜನಾ ಆಟಿಕೆಗಳು, ಕ್ರೂಸರ್ ಬೈಸಿಕಲ್, ಇನ್‌ಪ್ಲಾಟೇಬಲ್ ಜಂಪಿಂಗ್, ಬಂಗೀ ಜಂಪಿಂಗ್, ಸ್ಕೈ ಜಂಪರ್, ಜಾಲಿ ಬೈಕ್ ರೈಡಿಂಗ್, ಗಾಳಿಪಟ ಮಾರಾಟ ಮತ್ತು ಹಾರಾಟ ಮೊದಲಾದ ಮನೋರಂಜನಾ ಚಟುವಟಿಕೆಗಳು ಪುನರಾರಂಭಗೊಂಡಿದ್ದು ಬೀಚ್‌ಗೆ ಬರುವ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತಿವೆ. ಬೀಚ್ ವಾಟರ್ ಸ್ಪೋರ್ಟ್ಸ್ ಸಹಿತವಾದ ವಿವಿಧ ಚಟುವಟಿಕೆಗಳು ಕೆಲವೇ ದಿನಗಳಲ್ಲಿ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ.
ಪಾರಂಪರಿಕ ತಾಣ ಕಾಪು ಲೈಟ್‌ಹೌಸ್‌ಗೆ 120 ವರ್ಷ ಪೂರ್ಣಗೊಳ್ಳುತ್ತಿದ್ದು ಮೂಲ ಸೌಕರ್ಯಗಳ ಜೋಡಣೆ ಮತ್ತು ಕೊರೊನಾ ಕಾರಣದಿಂದಾಗಿ ಮಕ್ಕಳ ಸೆಳೆಯುವ ಆಟಿಕೆ ಸೌಲಭ್ಯಗಳೊಂದಿಗಿನ ಚಟುವಟಿಕೆಗಳು ನಿಂತು ಹೋಗಿರುವುದರಿಂದ ಬೀಚ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣೀಯವಾಗಿ ಇಳಿಮುಖಗೊಂಡಿರುವುದರ ಬಗ್ಗೆ ಉದಯವಾಣಿ ಸುದಿನದಲ್ಲಿ ಸೆ.17 ವಿಶೇಷ ಲೇಖನ ಪ್ರಕಟಗೊಂಡಿತ್ತು. ಸುದಿನದಲ್ಲಿ ಲೇಖನ ಪ್ರಕಟಗೊಂಡ 10 ದಿನದಲ್ಲಿ ವಿವಿಧ ಮನೋರಂಜನಾ ಚಟುವಟಿಕೆಗಳು ಮತ್ತೆ ಪ್ರಾರಂಭಗೊಳ್ಳುತ್ತಿರುವುದು ಪ್ರವಾಸಿಗರಲ್ಲಿ ಸಂತಸ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.