ಪ್ರವಾಸೋದ್ಯಮ ಅಭಿವೃದ್ಧಿ ಯಾವಾಗ?

ತೆರವುಗೊಳಿಸಲು ಮುಂದಾಗುವಂತೆ ಆದೇಶಗಳು ಹೊರಬಿದ್ದರೂ ಕಾರ್ಯಗತವಾಗುತ್ತಲೇ ಇಲ್ಲ.

Team Udayavani, Sep 27, 2021, 6:04 PM IST

ಪ್ರವಾಸೋದ್ಯಮ ಅಭಿವೃದ್ಧಿ ಯಾವಾಗ?

ಕಲಬುರಗಿ: ಪ್ರವಾಸವನ್ನು ಉದ್ಯಮ ಎನ್ನಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಪ್ರವಾಸಕ್ಕೂ ಹಾಗೂ ಉದ್ಯಮಕ್ಕೂ ಸಂಬಂಧವಿಲ್ಲ ಎನ್ನುವಂತಿದೆ. ದಕ್ಷಿಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ ಪ್ರವಾಸಿ ತಾಣಗಳಿಗೆ ಆ ಭಾಗಕ್ಕೆ ಕಾಲಿಡುತ್ತಿದ್ದಂತೆ ಎಲ್ಲೆಂದರಲ್ಲೂ ಮಾಹಿತಿ ಫ‌ಲಕ ಹಾಗೂ ಉತ್ತಮ ರಸ್ತೆ ಕಂಡು ಬರುತ್ತದೆ. ಪ್ರವಾಸಿ ಹಾಗೂ ಐತಿಹಾಸಿಕ ತಾಣಗಳಿಗೆ ಹೋದರೆ ಅಲ್ಲಿ ಉತ್ತಮ ಹೋಟೆಲ್‌ ಹಾಗೂ ವಸತಿ ವ್ಯವಸ್ಥೆ ಕಂಡು ಬರುತ್ತದೆ. ಆದರೆ ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಐತಿಹಾಸಿಕ ಸ್ಥಳಗಳ ಒತ್ತಟ್ಟಿಗಿರಲಿ, ಸ್ಥಳಗಳು ಎಲ್ಲಿವೆ? ಎನ್ನುವಂತಹ ದುಸ್ಥಿತಿಯಿದೆ. ಪ್ರವಾಸೋದ್ಯಮ ಇಲಾಖೆ ದಾಖಲಾತಿಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಹಾಗೂ ಎಷ್ಟು ನಿಟ್ಟಿನಲ್ಲಿ ರಸ್ತೆ ಅಭಿವೃದ್ಧಿಯಾಗಿದೆ ಹಾಗೂ ಸೌಕರ್ಯಗಳಿವೆ ಎನ್ನಲಾಗುತ್ತದೆ. ಆದರೆ ವಾಸ್ತವವಾಗಿ ನೋಡಿದರೆ ಏನೂ ಇಲ್ಲದಿರುವುದನ್ನು ನಾವು ಪ್ರಮುಖವಾಗಿ ಕಾಣಬಹುದಾಗಿದೆ.

ಹೇಳಿಕೆಗೆ ಸಿಮೀತವಾದ ಸಚಿವರ ಹೇಳಿಕೆ: ಶುಕ್ರವಾರ ಮುಕ್ತಾಯಗೊಂಡ ಅಧಿವೇಶನದಲ್ಲೇ ವಿಧಾನ ಪರಿಷತ್‌ ಸದಸ್ಯ ಸುನೀಲ ವಲ್ಲಾಪುರೆ ಅವರ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವ ಆನಂದಸಿಂಗ್‌ ಜಿಲ್ಲೆಯ ಪ್ರವಾಸಿ ತಾಣಗಳ ಬಳಿ ಪ್ರವಾಸಿಗರ ಅನುಕೂಲಕ್ಕಾಗಿ ಮೂಲಸೌಕರ್ಯಗಳಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರವಾಸಿ ತಾಣಗಳಿಗೆ ಸಂಪರ್ಕ ರಸ್ತೆ, ಕುಡಿಯುವ ನೀರು, ಶೌಚಾಲಯ, ಸ್ನಾನಗೃಹ ಸೇರಿದಂತೆ ಇತರ ಕಾಮಗಾರಿಗಳನ್ನು ಇಲಾಖೆಯಿಂದ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದ್ದಾರೆ. ಆದರೆ ವಾಸ್ತವವಾಗಿ ನೋಡಿದರೆ ಸಚಿವರ ಹೇಳಿದಂತೆ ಒಂದೇರಡು ಸ್ಥಳಗಳಲ್ಲಿ ಬಿಟ್ಟರೆ ಉಳಿದ ಯಾವ ತಾಣದಲ್ಲೂ ಮೂಲಸೌಕರ್ಯ ಕಂಡು ಬರುವುದೇ ಇಲ್ಲ.

ಪ್ರವಾಸೋದ್ಯಮ ಇಲಾಖೆ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳನ್ನು ಗುರುತಿಸಿದೆ. ಕಲಬುರಗಿ ಮಹಾನಗರದಲ್ಲಿ ಐತಿಹಾಸಿಕ ಬಹುಮನಿ ಕಲಬುರಗಿ ಕೋಟೆ, ಚೋರ ಗುಂಬಜ, ಹಫ¤ ಗುಂಬಜ, ಬುದ್ಧ ವಿಹಾರ, ತಾಲೂಕಿನ ಹೋಳಕುಂದಾ, ಫಿರೋಜಾಬಾದ, ಸನ್ನತಿ, ಆಳಂದ ತಾಲೂಕಿನಲ್ಲಿ ನರೋಣಾ, ಅಮರ್ಜಾ ಜಲಾಶಯ, ಹೆಬಳಿ, ಸೇಡಂ ತಾಲೂಕಿನ ಮಳಖೇಡ ಕೋಟೆ, ಮೋತಕಪಲ್ಲಿ, ಯಾನಾಗುಂದಿ, ಬಿಜನಳ್ಳಿ, ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ, ಅಣೆಕಟ್ಟು, ಎತ್ತಿಪೋತ ಜಲಪಾತ, ಪಂಚಲಿಂಗೇಶ್ವರ ಬುಗ್ಗಿ, ಗೊಟ್ಟಂಗೊಟ್ಟ, ಮೋಘಾ, ಜೇವರ್ಗಿ ತಾಲೂಕಿನ ಕುಳಗೇರಿ, ಯಡ್ರಾಮಿ, ರಾಮತೀರ್ಥ, ಚಿತ್ತಾಪುರ ತಾಲೂಕಿನ ಕಾಳಗಿ, ಛಾಯಾ ಭಗವತಿ, ಸನ್ನತಿ, ಕನಗನಹಳ್ಳಿ, ನಾಗಾವಿ, ದಿಗ್ಗಾವಿ, ರಟಕಲ್‌, ಕೋರವಾರ ಪ್ರವಾಸಿ ತಾಣಗಳಾಗಿವೆ. ಆದರೆ ಈ ತಾಣಗಳಿಗೆ ಪ್ರವಾಸಿಗರು ಹೋಗಬೇಕೆಂದರೆ ಸೂಕ್ತ ಮಾಹಿತಿಯೇ ಇಲ್ಲ. ಮುಖ್ಯವಾಗಿ ಈ ತಾಣಗಳಲ್ಲಿ ಮೂಲ ಸೌಕರ್ಯಗಳಿಲ್ಲ.

ಉತ್ಸವಗಳೇ ಇಲ್ಲ
ಪ್ರವಾಸೋದ್ಯಮ ದಿನ ಹಂಪಿ ಉತ್ಸವ ಅಷ್ಟೇ ಏಕೆ ಪಕ್ಕದ ಬೀದರ್‌ ಜಿಲ್ಲೆಯಲ್ಲಿ ಬೀದರ್‌ ಉತ್ಸವ ನಡೆಯುತ್ತವೆ. ಆದರೆ ಕಲಬುರಗಿಯಲ್ಲಿ ಐತಿಹಾಸಿಕ ಉತ್ಸವಗಳೇ ನಡೆಯೋದಿಲ್ಲ. ಏನಿದ್ದರೂ ರಾಜಕೀಯ ಉತ್ಸವ ಎನ್ನುವಂತಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ಸಕಾಲಕ್ಕೆ ನಡೆಯುವುದೇ ಇಲ್ಲ. ಪ್ರಮುಖವಾಗಿ ರಾಜಕೀಯ ಜನಪ್ರತಿನಿಧಿಗಳಲ್ಲಿಯೇ ಪ್ರವಾಸ ತಾಣಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸವನ್ನು ಒಂದು ಉದ್ಯಮ ಆಗಿಸಬೇಕೆಂಬ ಇಚ್ಛಾಶಕ್ತಿಯೇ ಇಲ್ಲ. ಆದ್ದರಿಂದಲೇ ಜಿಲ್ಲೆಯ ಪ್ರವಾಸೋದ್ಯಮ ಬೆಳೆದಿಲ್ಲ.

ದಿನಾಚರಣೆಗೆ ಸಿಮೀತ ಇಲಾಖೆ
ಸೆ. 27 ವಿಶ್ವ ಪ್ರವಾಸೋದ್ಯಮ ದಿನ. ಈ ದಿನದಂದು ಮಾತ್ರ ಕಾರ್ಯಕ್ರಮವೊಂದನ್ನು ಆಯೋಜಿಸುವುದನ್ನು ಬಿಟ್ಟರೆ ಉಳಿದ ಸಮಯದಲ್ಲಿ ಇಲಾಖೆ ಯಾವುದೇ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ವರ್ಷಂಪ್ರತಿ ಪ್ರವಾಸೋದ್ಯಮ ದಿನಕ್ಕೆ ಒಂದು ಘೋಷವಾಕ್ಯ ನೀಡಲಾಗುತ್ತದೆ. ಈ ವರ್ಷ ಸುಸ್ಥಿರ ಹಾಗೂ ಅಂತರ್ಗತ ಬೆಳವಣಿಗೆಗೆ ಪ್ರವಾಸೋದ್ಯಮ ಸಂದೇಶದಡಿ ಬೆಳಕಿಗೆ ಬಾರದ ಪ್ರವಾಸಿ ತಾಣಗಳು ಎಂಬುದಿದೆ. ಈ ಘೋಷ ವಾಕ್ಯವನ್ನು ಇಲಾಖೆ ಕಾರ್ಯರೂಪಕ್ಕೆ ತಂದಲ್ಲಿ ನೂರಾರು ಪ್ರವಾಸಿ ಹಾಗೂ ಐತಿಹಾಸಿಕ ತಾಣಗಳು ಬೆಳಕಿಗೆ ಬರುತ್ತವೆ. ಪ್ರಮುಖವಾಗಿ ಜಿಲ್ಲಾ ಪ್ರವಾಸೋದ್ಯಮದಲ್ಲಿ ಅಗತ್ಯ ಸಿಬ್ಬಂದಿಗಳೇ ಇಲ್ಲ. ಜಂಟಿ ನಿರ್ದೇಶಕರು ಹಾಗೂ ಉಪನಿರ್ದೇಶಕರೇ ಇಲ್ಲ. ಪ್ರಭಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿದ್ದ ಮೇಲೆ ಪ್ರವಾಸಿ ತಾಣಗಳು ಅಭಿವೃದ್ಧಿ ಆಗುವುದು ಹೇಗೆ ಎಂದು ಹವ್ಯಾಸಿ ಪ್ರವಾಸಿಗರು ಪ್ರಶ್ನಿಸುತ್ತಾರೆ.

ತೆರವು ಯಾವಾಗ?: ಕಲಬುರಗಿ ಮಹಾನಗರದ ಐತಿಹಾಸಿಕ ಕೋಟೆಯೊಳಗೆ ವಾಸವಾಗಿರುವರಿಗೆ ಬೇರೆಡೆ ವ್ಯವಸ್ಥೆ ಕಲ್ಪಿಸಿ ತೆರವುಗೊಳಿಸಲಾಗುತ್ತದೆ ಎಂಬುದಾಗಿ ಕಳೆದ ದಶಕಗಳ ಅವಧಿಯಿಂದ ಹೇಳುತ್ತಾ ಬರಲಾಗುತ್ತದೆಯೇ ಹೊರತು ಯಾವುದೇ ಕಾರ್ಯವಾಗುತ್ತಿಲ್ಲ. ಕೋಟೆಯೊಳಗಿನ ಜನರ ತೆರವುಗೊಳಿಸಲು ಮುಂದಾಗುವಂತೆ ಆದೇಶಗಳು ಹೊರಬಿದ್ದರೂ ಕಾರ್ಯಗತವಾಗುತ್ತಲೇ ಇಲ್ಲ.

ಜಿಲ್ಲೆಯ ಪ್ರವಾಸಿ ತಾಣಗಳ ಮೂಲಕ ಸೌಕರ್ಯಕ್ಕಾಗಿ 8 ಕೋಟಿ ರೂ. ಪ್ರಸ್ತಾವನೆ ಕಳುಹಿಸಲಾಗಿದೆ. ಮಂಜೂರಾತಿಯಾಗಿ ಬಂದರೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಕಲಬುರಗಿ ಬುದ್ಧ ವಿಹಾರ ಸಮೀಪ ಐದು ಎಕರೆ ಜಾಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕಲಾವನ ಸಾಂಸ್ಕೃತಿಕ ಲೋಕ ನಿರ್ಮಿಸಲಾಗುತ್ತಿದೆ.
ಪ್ರಭುಲಿಂಗ ತಳಕೇರಿ, ಡಿಡಿ, ಪ್ರವಾಸೋದ್ಯಮ ಇಲಾಖೆ

ಐತಿಹಾಸಿಕ ತಾಣಗಳ ಸಂರಕ್ಷಣೆ, ಅಭಿವೃದ್ಧಿ ನಿಟ್ಟಿನಲ್ಲಿ ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆ ಜಿಲ್ಲೆಯಲ್ಲಿ ಏನು ಮಾಡುತ್ತಿದೆ ಎಂಬುದು ತಿಳಿಯದಂತಾಗಿದೆ. ಪ್ರವಾಸೋದ್ಯಮ ದ್ವಿಗುಣಗೊಳ್ಳುವ ಬದಲು ಪ್ರಯಾಸವಾಗುತ್ತಿದೆ. ಪ್ರವಾಸಿ ಹೆಲ್ಪ ಡೆಸ್ಕ್ವೂ ಇಲ್ಲ. ವರ್ಷಕ್ಕೊಮ್ಮೆ ಪ್ರವಾಸೋದ್ಯಮ ದಿನಾಚರಣೆಗೆ ಇಲಾಖೆ ಸಿಮೀತವಾಗಿದೆ.
ಬಸವರಾಜ ರಾವೂರ, ಪ್ರವಾಸಿ ಮಾರ್ಗದರ್ಶಿ

*ಹಣಮಂತ ರಾವ ಭೈರಾಮಡಗಿ

ಟಾಪ್ ನ್ಯೂಸ್

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.