ಪೆರ್ಮುದೆ ಗ್ರಾ.ಪಂ. ರಾಜ್ಯದಲ್ಲಿಯೇ ಮಾದರಿ ಗ್ರಾ.ಪಂ.: ನಾಗರಾಜ್
ಪೆರ್ಮುದೆ ಗ್ರಾಮ ಪಂಚಾಯತ್ ಗ್ರಾಮಸಭೆ
Team Udayavani, Sep 28, 2021, 5:03 AM IST
ಬಜಪೆ: ಪೆರ್ಮುದೆ ಗ್ರಾ.ಪಂ. ಈಗಾಗಲೇ ಅಮೃತ ಗ್ರಾ.ಪಂ. ಯೋಜನೆಗೆ ಆಯ್ಕೆಯಾಗಿದೆ. ಗ್ರಾ.ಪಂ. ಗ್ರಂಥಾಲಯ ಡಿಜಿಟಲೀಕರಣಗೊಂಡ ರಾಜ್ಯದಲ್ಲೆಯೇ ಮಾದರಿಯಾಗಿದೆ. ಪಂಚಾಯತ್‌ನ ಕಾರ್ಯಕ್ರಮಗಳ ಪಟ್ಟಿ ತಯಾರಿಸಿ, ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಿದ ಗ್ರಾ.ಪಂ.ಗೆ 25ಲಕ್ಷ ರೂ. ಸರಕಾರದಿಂದ ನೀಡಲಾಗುತ್ತದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಗ್ರಾ.ಪಂ. ಸದಸ್ಯರ ಹಾಗೂ ಗ್ರಾಮಸ್ಥರ ಸಹಕಾರ ಅಗತ್ಯ. ಈ ಗ್ರಾ.ಪಂ.ನ ಗ್ರಾಮಸಭೆಯಲ್ಲಿ ಅಭಿವೃದ್ಧಿಯ ಬಗ್ಗೆ ಚರ್ಚೆಗಳು ನಡೆದಿದ್ದು ಇದು ಒಳ್ಳೆಯ ಬೆಳವಣಿಗೆ ಮುಂದೆ ಈ ಗ್ರಾಮ ಪಂಚಾಯತ್ ರಾಷ್ಟ್ರ ಮಟ್ಟದಲ್ಲಿಯೂ ಪ್ರಶಸ್ತಿಯನ್ನು ಗೆಲ್ಲುವಂತೆ ಎಲ್ಲರೂ ಪ್ರಯತ್ನ ಮಾಡಬೇಕು ಎಂದು ಮಂಗಳೂರು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಎಂ.ಜಿ. ನಾಗರಾಜ್ ಹೇಳಿದರು.
ಸೋಮವಾರ ಪೆರ್ಮುದೆ ಗ್ರಾ.ಪಂ. ಸಭಾಭವನದಲ್ಲಿ ನಡೆದ ಪೆರ್ಮುದೆ ಗ್ರಾ.ಪಂ. ನ ಪೆರ್ಮುದೆ ಹಾಗೂ ಕುತ್ತೆತ್ತೂರು ಗ್ರಾಮಗಳ 2021-22ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಂಪೆನಿಗಳ ರಾಸಾಯನಿಕ ತ್ಯಾಜ್ಯವನ್ನು ಮಳೆ ನೀರು ಹರಿಯುವ ತೋಡಿಗೆ ಬಿಡುವ ಕಾರಣ ಮೀನುಗಳು ಸತ್ತಿದ್ದು,ನೀರು ವಾಸನೆ ಯುಕ್ತವಾಗಿದೆ. ಇದರಿಂದ ಪರಿಸರ ಮಾಲಿನ್ಯವಾಗಿದೆ, ಅಂತಹ ಕಂಪೆನಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕಂಪೆನಿಗಳಿಂದ ತೆರಿಗೆ ವಸೂಲು ಮಾಡಬೇಕು. ಸಾಮಾನ್ಯ ಸಭೆಯಲ್ಲಿ ಗ್ರಾಮಸಭೆಗೆ ಕಂಪೆನಿಗಳ ಅಧಿಕಾರಿಗಳನ್ನು ಬರುವಂತೆ ನಿರ್ಣಯ ಮಾಡಿ ಅವರಿಗೆ ಕಳಿಸಲಾಗಿತ್ತು. ಅವರು ಬರಲಿಲ್ಲವೆಂದು ಆಕ್ರೋಶಗೊಂಡ ಗ್ರಾಮಸ್ಥರು, ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ ಯವರು ನೇತೃತ್ವ ದಲ್ಲಿ ಗ್ರಾ.ಪಂ. ನಲ್ಲಿ ವಿಶೇಷ ಸಭೆಯನ್ನು ಕರೆದು ಅದರಲ್ಲಿ ಎಂಆರ್‌ಪಿಎಲ್, ಎಂಎಸ್‌ಇಝಡ್, ಕೆಎಐಡಿಬಿ ಅಧಿಕಾರಿಗಳು ಬರಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ಮನವಿ ಮಾಡಿದರು.
ಇದನ್ನೂ ಓದಿ:ಎರಡು ಗುಂಪುಗಳ ಗಲಾಟೆಯಲ್ಲಿ ʼಬಸವʼ ಬಡವಾಯ್ತು
ಈ ಬಗ್ಗೆ ಉತ್ತರಿಸಿದ ಗ್ರಾ.ಪಂ. ಅಧ್ಯಕ್ಷ ಪ್ರಸಾದ್ ಅಂಚನ್ ಅ. 4ರಂದು ವಿಶೇಷ ಸಭೆಯನ್ನು ಕರೆಯಲಾಗುವುದು ಎಂದು ಹೇಳಿದರು.ಬಿಪಿಎಲ್ ಇದ್ದವರಿಗೆ ರಿಯಾಯತಿ ನೀಡಿ ಎಂದು ಗ್ರಾಮಸಭೆಯಲ್ಲಿ ಜನರಿಂದ ಬೇಡಿಕೆ ಬಂತು. ಸರಪಾಡಿಯಿಂದ ಬರುವ ನೀರನ್ನು ಮನಪಾಗೆ ನೀಡಲಾಗುತ್ತದೆ. ಸಮೀಪದಲ್ಲಿರುವ ನಮಗೂ ನೀರು ಕೊಡುವಂತೆ ನಾವು ಒತ್ತಾಯ ಮಾಡಬೇಕು ಎಂದು ಸಭೆಯಲ್ಲಿ ಗ್ರಾಮಸ್ಥರು ಅಗ್ರಹಿಸಿದರು.
ಮಹಿಳಾ ಸಶಕ್ತೀಕರಣಕ್ಕೆ ದುಡಿದ ಹಾಗೂ ಸಾಧನೆ ಮಾಡಿದ ಮಹಿಳೆಯರನ್ನು ಸಮ್ಮಾನಿಸಿ ಗೌರವಿಸಬೇಕು. ಇದು ಇತರರಿಗೆ ಮಾದರಿಯಾಗಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದನ್ನು ಮಾಡುತ್ತಿಲ್ಲ ಎಂದು ಸಭೆಯಲ್ಲಿ ಗ್ರಾಮಸ್ಥರ ಇಲಾಖೆಯನ್ನು ತರಾಟೆ ತೆಗೆದುಕೊಂಡರು.
ನೋಂದಣಿ ಅಗತ್ಯ
ಶಿಕ್ಷಣ ಇಲಾಖೆ ಅಧಿಕಾರಿ ಲಕ್ಷ್ಮೀ ಅವರು ಇಲಾಖಾ ಮಾಹಿತಿ ನೀಡಿ, ಸರಕಾರಿ ಸೌಲಭ್ಯಗಳನ್ನು ಪಡೆಯಲು ಹೆಸರು, ಜನನಪ್ರಮಾಣ ಪತ್ರ, ಆಧಾರ್ ಕಾರ್ಡ್,ಬ್ಯಾಂಕ್ ಖಾತೆ ನಂಬ್ರನ್ನು ಒಂದೇ ತರನಾದ ಹೆಸರಿನಲ್ಲಿರುವಂತೆ ನೋಂದಣಿ ಮಾಡಿ. ಇಲ್ಲದಿದ್ದಲ್ಲಿ ಸೌಲಭ್ಯ ಪಡೆಯಲು ಕಷ್ಟವಾಗುತ್ತದೆ ಹೇಳಿದರು.
ಪೆರ್ಮುದೆಯಲ್ಲಿ 392 ವಸತಿ ರಹಿತರಿದ್ದಾರೆ. ಸರಕಾರಿ ಜಾಗ ಭೂಸ್ವಾಧೀನದಲ್ಲಿ ಹೋಗಿದೆ. ಮನೆ ನಿವೇಶನ ನೀಡಲು ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರಿಂದ ಮನವಿ ಬಂತು.
ಇದಕ್ಕೆ ಉತ್ತರಿಸಿದ ಪಿಡಿಒ ಶೈಲಜಾ ಈಗಾಗಲೇ ಸರ್ವೆ ನಂಬ್ರ 127/1ರಲ್ಲಿ ಜಾಗ ಇದ್ದು ಅದು ಜಿಲ್ಲಾಧಿಕಾರಿಯವರು ನ್ಯಾಯಾಲಯದಲ್ಲಿದೆ. ಸದ್ಯದಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ, ಮನವಿ ಮಾಡಲಾಗುವುದು. ಅಮೃತ ಗ್ರಾಮೀಣ ವಸತಿ ಯೋಜನೆಯಲ್ಲಿ ವಸತಿ ನಿವೇಶನಗಳನ್ನು ನೀಡಲಾಗುವುದು ಎಂದರು.
ಮೆಸ್ಕಾಂ ಇಲಾಖೆ ಸಹಾಯಕ ಎಂಜಿನಿಯರ್ ಅರುಣ್ ಕುಮಾರ್ ಸಭೆಯಲ್ಲಿ ಮಾಹಿತಿ ನೀಡಿ, ಪೆರ್ಮುದೆ ಪದವು, ಕೆನರಾ ಬ್ಯಾಂಕ್ , ಕ್ರಾಸ್ ಪದವುನಲ್ಲಿ ಟಿಸಿ ಅಳವಡಿಸಲಾಗಿದೆ. 6 ಲಕ್ಷ ರೂ. ವೆಚ್ಚದಲ್ಲಿ ಹಳೆ ತಂತಿಯ ಬದಲು ಹೊಸ ತಂತಿಯನ್ನು ಅಳವಡಿಸಲಾಗಿದೆ. 3ಅಪಾಯಕಾರಿ ವಿದ್ಯುತ್ ಕಂಬಗಳನ್ನು ಬದಲಾಯಿಸಲಾಗಿದೆ ಎಂದರು.
ಶೇ. 100 ಲಸಿಕೆ ಗುರಿ
ಕಾಟಿಪಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶರತ್ ಕುಮಾರ್ ಮಾತನಾಡಿ, ಈಗಾಗಲೇ ಕುತ್ತೆತ್ತೂರು ಗ್ರಾಮದಲ್ಲಿ ಶೇ. 96 ಲಸಿಕೆಯನ್ನು ನೀಡಲಾಗಿದೆ. ಮನೆಮನೆಗೆ ಹೋಗಿ ಲಸಿಕೆ ನೀಡಲಾಗಿತ್ತು. ಶೇ. 100ರ ಗುರಿ ನಮ್ಮದು .ವಯಸ್ಕರು ಲಸಿಕೆ ತೆಗೆದುಕೊಳ್ಳಲು ಹಿಂಜರಿಕೆ ಮಾಡುತ್ತಿದ್ದಾರೆ ಎಂದರು.
ಕೃಷಿ ಇಲಾಖಾಧಿಕಾರಿ ಬಶೀರ್ ಮಾತನಾಡಿ, ನರೇಗಾ ಯೋಜನೆ ಯಡಿಯಲ್ಲಿ ಪೆರ್ಮುದೆ ಗ್ರಾ.ಪಂ. ವ್ಯಾಪ್ತಿ ಯಲ್ಲಿ 30 ಎರೆಹುಳ ತೊಟ್ಟಿಯನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದ ಲಾಗಿದೆ. ಅಲ್ಪ ಅಳದ ಬಾವಿಗೆ ನರೇಗಾ ಯೋಜನೆಯಡಿಯಲ್ಲಿ ಅವಕಾಶ ಇದೆ. ತುಂತುರು ನೀರಾವರಿ ಯೋಜನೆಯಡಿ 49 ಅರ್ಜಿಗಳು ಬಂದಿದೆ ಎಂದು ಹೇಳಿದರು.
ಗ್ರಾ.ಪಂ. ಉಪಾಧ್ಯಕ್ಷ ಲೀನಾ ಡಿ’ಸೋಜಾ ಹಾಗೂ ಸದಸ್ಯರು, ಕಾರ್ಯ ದರ್ಶಿ ನಾಗೇಶ್ ಸುವರ್ಣ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.ಸಭೆಯನ್ನು ಪಿಡಿಒ ಶೈಲಜಾ ಅವರು ನಿರ್ವಹಿಸಿದರು.
ಶೇ.60 ಕಾಮಗಾರಿ ಪೂರ್ಣ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯವಾಹಕ ಎಂಜಿನಿಯರ್ ನರೇಂದ್ರ ಸಭೆಯಲ್ಲಿ ಮಾಹಿತಿ ನೀಡಡಿ, ಮನೆಮನೆಗೆ ನಳ್ಳಿ ನೀರು ಸಂಪರ್ಕವನ್ನು ನೀಡುವ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಈಗಾಗಲೇ ಟ್ಯಾಂಕ್‌ಗಳು ನಿರ್ಮಾಣ ವಾಗುತ್ತಿವೆ. ಪೆರ್ಮುದೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಪೆರ್ಮುದೆ ಹಾಗೂ ಕುತ್ತೆತ್ತೂರು ಗ್ರಾಮದಲ್ಲಿ 660 ಮತ್ತು 312 ಮನೆಗಳ ನಳ್ಳಿನೀರಿನ ಸಂಪರ್ಕ ಬಾಕಿ ಇವೆ. ಪ್ರತೀ ಸಂಪರ್ಕಕ್ಕೆ ಮೀಟರ್‌ನ್ನು ಅಳವಡಿಸಲಾಗುವುದು. ಈಗಾಗಲೇ ಶೇ.60 ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಸಹಕಾರ ಅಗತ್ಯ
ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ಅಂಚನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಸ್ಥರ, ಗ್ರಾ.ಪಂ. ಸದಸ್ಯರ ಸಹಕಾರ ಹಾಗೂ ಪಿಡಿಒ ಹಾಗೂ ಸಿಬಂದಿ ಸೇವಾ ಕಾರ್ಯ ದಿಂದ ಪೆರ್ಮುದೆ ಗ್ರಾ.ಪಂ. ಅಭಿ ವೃದ್ಧಿಗೆ ಕಾರಣವಾಗಿದೆ. ಮುಂದೆಯೂ ಸಹಕಾರ ನೀಡಿ ಸಹಕರಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.