ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು
Team Udayavani, Sep 27, 2021, 11:24 PM IST
ದುಬಾೖ: ಇನ್ನೇನು ಕೂಟದಿಂದ ನಿರ್ಗಮಿಸಲಿದೆ ಎನ್ನುವ ಹಂತದಲ್ಲೇ ಸನ್‌ರೈಸರ್ ಹೈದರಾಬಾದ್ ದ್ವಿತೀಯ ಗೆಲುವು ಸಾಧಿಸಿದೆ. ಸೋಮವಾರದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ 5 ವಿಕೆಟಿಗೆ 164 ರನ್ ಗಳಿಸಿದರೆ, ಹೈದರಾಬಾದ್ 18.3 ಓವರ್‌ಗಳಲ್ಲಿ 3 ವಿಕೆಟಿಗೆ 167 ರನ್ ಬಾರಿಸಿತು. ಸತತ 5 ಸೋಲುಗಳ ಬಳಿಕ ಸನ್‌ರೈಸರ್ಗೆ ಒಲಿದ ಗೆಲುವು ಇದಾಗಿತ್ತು.
ಈ ಕೂಟದಲ್ಲಿ ಮೊದಲ ಪಂದ್ಯವಾಡಿದ ಜಾಸನ್ ರಾಯ್ (42 ಎಸೆತಗಳಿಂದ 60 ರನ್) ಮತ್ತು ನಾಯಕ ಕೇನ್ ವಿಲಿಯಮ್ಸನ್ (41 ಎಸೆತಗಳಿಂದ ಅಜೇಯ 51) ಅರ್ಧ ಶತಕ ಬಾರಿಸಿ ತಂಡಕ್ಕೆ ಸುಲಭ ಜಯ ತಂದಿತ್ತರು. ಡೇವಿಡ್ ವಾರ್ನರ್ ಅವರನ್ನು ಹೊರಗಿಟ್ಟು ಜಾಸನ್ ರಾಯ್‌ಗೆ ಅವಕಾಶ ನೀಡಲಾಗಿತ್ತು.
ಸಂಜು ಆರೇಂಜ್ ಕ್ಯಾಪ್
ರಾಜಸ್ಥಾನ್ ಮೊತ್ತದಲ್ಲಿ ನಾಯಕ ಸಂಜು ಸ್ಯಾಮ್ಸನ್ ಸರಿ ಅರ್ಧದಷ್ಟು ಮೊತ್ತ ಪೇರಿಸಿದರು. ಈ ಸೊಗಸಾದ ಇನ್ನಿಂಗ್ಸ್ ವೇಳೆ ಸ್ಯಾಮ್ಸನ್ ತಮ್ಮ ಒಟ್ಟು ಮೊತ್ತವನ್ನು 433ಕ್ಕೆ ಏರಿಸಿಕೊಂಡು ಈ ಐಪಿಎಲ್‌ನ ಟಾಪ್ ಸ್ಕೋರರ್ ಆಗಿ ಮೂಡಿಬಂದು ಆರೇಂಜ್ ಕ್ಯಾಪ್ ಏರಿಸಿಕೊಂಡರು.
ಈ ಋತುವಿನ ದ್ವಿತೀಯ ಪಂದ್ಯ ಆಡಲಿಳಿದ ವಿಂಡೀಸಿನ ಬಿಗ್ ಹಿಟ್ಟಿಂಗ್ ಓಪನರ್ ಎವಿನ್ ಲೆವಿಸ್ ಕೇವಲ 6 ರನ್ ಮಾಡಿ ನಿರ್ಗಮಿಸಿದರು. ಭುವನೇಶ್ವರ್ ಕುಮಾರ್ ತಮ್ಮ ಮೊದಲ ಎಸೆತದಲ್ಲೇ ಈ ದೊಡ್ಡ ಬೇಟೆಯಾಡಿದರು. ಈ ಓವರ್ “ವಿಕೆಟ್ ಮೇಡನ್’ ಆಗಿತ್ತು. ರಾಜಸ್ಥಾನ್ ಆಗ ಕೇವಲ 11 ರನ್ ಮಾಡಿತ್ತು.
ಇದನ್ನೂ ಓದಿ:ಹ್ಯಾಟ್ರಿಕ್ ಹೀರೋ ಹರ್ಷಲ್ ಪಟೇಲ್
ದ್ವಿತೀಯ ವಿಕೆಟಿಗೆ ಜತೆಗೂಡಿದ ಯಶಸ್ವಿ ಜೈಸ್ವಾಲ್-ಸಂಜು ಸ್ಯಾಮ್ಸನ್ ಉತ್ತಮ ಆಟವಾಡಿದರು. ಪವರ್ ಪ್ಲೇ ಮುಕ್ತಾಯಕ್ಕೆ ತಂಡದ ಮೊತ್ತವನ್ನು 49ಕ್ಕೆ ಕೊಂಡೊಯ್ದರು. ಇವರಿಂದ 56 ರನ್ ಒಟ್ಟುಗೂಡಿತು. ಆಗ 23 ಎಸೆತಗಳಿಂದ 36 ರನ್ ಬಾರಿಸಿದ ಜೈಸ್ವಾಲ್ (5 ಬೌಂಡರಿ, 1 ಸಿಕ್ಸರ್) ಸಂದೀಪ್ ಶರ್ಮ ಎಸೆತದಲ್ಲಿ ಬೌಲ್ಡ್ ಆದರು. 10 ಓವರ್ ಮುಕ್ತಾಯಕ್ಕೆ ಸ್ಕೋರ್ 77ಕ್ಕೆ ಏರಿತು.ಅರ್ಧ ಹಾದಿ ಕ್ರಮಿಸಿದ ಬಳಿಕ ಮೊದಲ ಎಸೆತದಲ್ಲೇ ರಶೀದ್ ಖಾನ್ ಬಿಗ್ ವಿಕೆಟ್ ಉರುಳಿಸಿದರು. ಲಿಯಮ್ ಲಿವಿಂಗ್‌ಸ್ಟೋನ್ ಕೇವಲ 4 ರನ್ ಮಾಡಿ ಸಮದ್‌ಗೆ ಕ್ಯಾಚ್ ನೀಡಿ ವಾಪಸಾದರು.
ಈ ನಡುವೆ ಸಂಜು ಸ್ಯಾಮ್ಸನ್ ಅವರ ಭರ್ಜರಿ ಬ್ಯಾಟಿಂಗ್ ಮುಂದುವರಿಯಿತು. ಅರ್ಧ ಶತಕದೊಂದಿಗೆ 2021ರ ಐಪಿಎಲ್‌ನಲ್ಲಿ 400 ರನ್ ಕೂಡ ಪೂರ್ತಿಗೊಂಡಿತು. ಆದರೂ ಅರ್ಧ ಶತಕಕ್ಕೆ 41 ಎಸೆತ ಬಳಸಿಕೊಂಡರು. ಇದು ಅವರ ನಿಧಾನ ಗತಿಯ ಅರ್ಧ ಶತಕದ ಜಂಟಿ ದಾಖಲೆ. 2017ರ ಪುಣೆ ಎದುರಿನ ಪಂದ್ಯದಲ್ಲೂ 50 ರನ್ನಿಗೆ ಇಷ್ಟೇ ಎಸೆತ ತೆಗೆದುಕೊಂಡಿದ್ದರು.
ಸಿದ್ಧಾರ್ಥ್ ಕೌಲ್ ಅವರ ಒಂದೇ ಓವರ್‌ನಲ್ಲಿ 20 ರನ್ ಬಾರಿಸುವ ಮೂಲಕ ಸ್ಯಾಮ್ಸನ್ ಡೆತ್ ಓವರ್‌ಗೆ ಅಮೋಘ ಚಾಲನೆ ನೀಡಿದರು. ಅವರಿಗೆ ಮಹಿಪಾಲ್ ಲೊನ್ರೋರ್ ಉತ್ತಮ ಸಾಥ್ ಕೊಟ್ಟರು. 4ನೇ ವಿಕೆಟಿಗೆ 54 ಎಸೆತಗಳಿಂದ 84 ರನ್ ಒಟ್ಟುಗೂಡಿಸಿದರು.
ಸ್ಯಾಮ್ಸನ್ ತಮ್ಮ ಗಳಿಕೆಯನ್ನು 82ಕ್ಕೆ ಏರಿಸಿಕೊಂಡಾಗ “ಆರೇಂಜ್ ಕ್ಯಾಪ್’ ಏರಿಸಿಕೊಂಡರು. ಅಂತಿಮ ಓವರ್‌ನಲ್ಲಿ ಇದೇ ಮೊತ್ತಕ್ಕೆ ಅವರ ವಿಕೆಟ್ ಉರುಳಿತು.
ಸ್ಕೋರ್ ಪಟ್ಟಿ
ರಾಜಸ್ಥಾನ್ ರಾಯಲ್ಸ್
ಎವಿನ್ ಲೆವಿಸ್ ಸಮದ್ ಬಿ ಭುವನೇಶ್ವರ್ 6
ಯಶಸ್ವಿ ಜೈಸ್ವಾಲ್ ಬಿ ಸಂದೀಪ್ 36
ಸಂಜು ಸ್ಯಾಮ್ಸನ್ ಸಿ ಹೋಲ್ಡರ್ ಬಿ ಕೌಲ್ 82
ಲಿವಿಂಗ್‌ಸ್ಟೋನ್ ಸಿ ಸಮದ್ ಬಿ ರಶೀದ್ 4
ಮಹಿಪಾಲ್ ಲೊನ್ರೋರ್ ಔಟಾಗದೆ 29
ರಿಯಾನ್ ಪರಾಗ್ ಸಿ ರಾಯ್ ಬಿ ಕೌರ್ 0
ರಾಹುಲ್ ತೇವಟಿಯಾ ಔಟಾಗದೆ 0
ಇತರ 7
ಒಟ್ಟು(5 ವಿಕೆಟಿಗೆ) 164
ವಿಕೆಟ್ ಪತನ:1-11, 2-67, 3-77, 4-161, 5-162.
ಬೌಲಿಂಗ್; ಸಂದೀಪ್ ಶರ್ಮ 3-0-30-1
ಭುವನೇಶ್ವರ್ ಕುಮಾರ್ 4-1-28-1
ಜಾಸನ್ ಹೋಲ್ಡರ್ 4-0-27-0
ಸಿದ್ಧಾರ್ಥ್ ಕೌಲ್ 4-0-36-2
ರಶೀದ್ ಖಾನ್ 4-0-31-1
ಅಭಿಷೇಕ್ ಶರ್ಮ 1-0-8-0
ಸನ್‌ರೈಸರ್ ಹೈದರಾಬಾದ್
ಜಾಸನ್ ರಾಯ್ ಸಿ ಸಂಜು ಬಿ ಸಕಾರಿಯ 60
ವೃದ್ಧಿಮಾನ್ ಸ್ಟಂಪ್ಡ್ ಸಂಜು ಬಿ ಮಹಿಪಾಲ್ 18
ಕೇನ್ ವಿಲಿಯಮ್ಸನ್ ಔಟಾಗದೆ 51
ಪ್ರಿಯಾಂ ಗರ್ಗ್ ಸಿ ಮತ್ತು ಬಿ ಮುಸ್ತಫಿಜರ್ 0
ಅಭಿಷೇಕ್ ಶರ್ಮ ಔಟಾಗದೆ 21
ಇತರ 17
ಒಟ್ಟು(18.3 ಓವರ್‌ಗಳಲ್ಲಿ 3 ವಿಕೆಟಿಗೆ) 167
ವಿಕೆಟ್ ಪತನ:1-57, 2-114, 3-119.
ಬೌಲಿಂಗ್; ಜೈದೇವ್ ಉನಾದ್ಕತ್ 2-0-20-0
ಕ್ರಿಸ್ ಮಾರಿಸ್ 3-0-27-0
ಮುಸ್ತಫಿಜರ್ ರೆಹಮಾನ್ 3.3-0-26-1
ಮಹಿಪಾಲ್ ಲೊನ್ರೋರ್ 3-0-22-1
ರಾಹುಲ್ ತೇವಟಿಯಾ 3-0-32-0
ಚೇತನ್ ಸಕಾರಿಯ 4-0-32-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.