ನಿಮ್ಮ ಚಪ್ಪಾಳೆ ಸದ್ಧಿಗೆ ಕಾಯುತ್ತಿದೆ ಕಲಾರಂಗ|ಕನ್ನಡ ಸಿನಿಮಾ ಅಭಿಮಾನಿಗಳಿಗೆ ಜಗ್ಗೇಶ್ ಮನವಿ
Team Udayavani, Sep 28, 2021, 1:58 PM IST
ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತ ಹಾಗೂ ಈ ತಿಂಗಳಿನಿಂದ ಬಿಡುಗಡೆಯಾಗುತ್ತಿರುವ ಕನ್ನಡದ ಎಲ್ಲ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ಕನ್ನಡದ ಸ್ಯಾಂಡಲ್ವುಡ್ನ ಹಿರಿಯ ನಟ ಜಗ್ಗೇಶ್ ಅವರು ಮನವಿ ಮಾಡಿದ್ದಾರೆ.
ಚಿತ್ರಮಂದಿರಗಳ ಹೌಸ್ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಿದ್ದರಿಂದ ದಸರಾ ಹಬ್ಬಕ್ಕೆ ಕನ್ನಡ ಚಿತ್ರರಂಗಕ್ಕೆ ಸುಗ್ಗಿಯ ಕಾಲವಾದಂತಾಗಿದೆ. ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ‘ಸಲಗ’ ಹಾಗೂ ಕಿಚ್ಚ ಸುದೀಪ್ ಅವರ ‘ಕೋಟಿಗೊಬ್ಬ-3’ ಸಿನಿಮಾಗಳು ಒಂದೇ ದಿನ ತೆರೆ ಕಾಣುತ್ತಿರುವುದು ಒಂದೆಡೆಯಾದರೆ, ಹಲವು ಹೊಸಬರ ಸಿನಿಮಾಗಳು ಕೂಡ ಈ ತಿಂಗಳಿನಲ್ಲಿಯೇ ಚಿತ್ರಮಂದಿರಗಳಿಗೆ ಲಗ್ಗೆ ಇಡಲು ಸಾಲುಗಟ್ಟಿ ನಿಂತಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ಆತ್ಮೀಯ ಕನ್ನಡದ ಬಂಧುಗಳೆ ಕೋವಿಡ್ ಸರ್ವ ದೇಶದ ಜನರನ್ನು ಸಂಕಷ್ಟಕ್ಕೆ ದೂಡಿತು. ಇಂಥ ಸಂಕಷ್ಟ ಸಮಯದಲ್ಲಿ ಅಲ್ಪಸ್ವಲ್ಪ ಜನರಿಗೆ ಸಂತೋಷ ನೀಡಿದ್ದು ಕಲೆ, ಅದು ಯಾವುದೆ ಭಾಷೆಯದ್ದಾಗಲಿ. ಚಿತ್ರಮಂದಿರ ಬಂದ್ ಆದರು ಸಣ್ಣ ಪರದೆಯಲ್ಲಿ ನಿಮ್ಮ ನ್ನು ರಂಜಿಸಿತು. ಅಂಥ ಕಲಾರಂಗ ಮತ್ತೆ ಚಿಗುರಿ ನಿಮ್ಮ ಮುಂದೆ ನಿಲ್ಲಬೇಕು ಎಂದರೆ ನೀವು ಹರಸಬೇಕು ಎಂದಿದ್ದಾರೆ.
ಇಂದು 100% ಚಿತ್ರಮಂದಿರ ತೆರೆದಿದೆ, ನಿಮ್ಮ ನೆಚ್ಚಿನ ನಟ-ನಟಿಯರ ಚಿತ್ರಗಳು ಇದೆ ಅಕ್ಟೋಬರನಿಂದ ತೆರೆಗೆ ಬರುತ್ತಿವೆ. ಕುಟುಂಬ ಸಮೇತ ನಿಮ್ಮ ನೆಚ್ಚಿನ ಚಿತ್ರಗಳನ್ನ ಚಿತ್ರಮಂದಿರದಲ್ಲೆ ನೋಡಿ ಆನಂದಿಸಿ. ಈ ಅಕ್ಟೋಬರ್ ಇಂದ ನನ್ನ ಆತ್ಮೀಯ ಕನ್ನಡದ ಕಲಾಬಂಧುಗಳ ಚಿತ್ರ ಬಿಡುಗಡೆಯಾಗುತ್ತಿವೆ. ನಿಮ್ಮ ಸಂತೋಷ ಚಪ್ಪಾಳೆ ಸದ್ಧಿಗೆ ಕಾಯುತ್ತಿದೆ ಕಲಾರಂಗ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.