ಪ್ರವಾಸಿಗರಿಗೆ ಮೈಸೂರು ಪಾಕ್, ಗುಲಾಬಿ ಹೂ ಸ್ವಾಗತ
Team Udayavani, Sep 28, 2021, 4:45 PM IST
ಮೈಸೂರು: ಪ್ರವಾಸಿ ತಾಣಗಳಿಗೆ ಹೋಗುವ ಪ್ರವಾಸಿಗರು ಪರಿಸರ ಸಂರಕ್ಷಣೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್. ಆರ್. ಮಹದೇವಸ್ವಾಮಿ ಹೇಳಿದರು.
ವಿಶ್ವ ಪ್ರವಾಸಿಗರ ದಿನಾಚರಣೆ ಅಂಗವಾಗಿ ಕರ್ನಾಟಕ ಮೃಗಾಲಯಪ್ರಾಧಿಕಾರ ಮತ್ತು ಅಪೂರ್ವ ಸ್ನೇಹಬಳಗದ ವತಿಯಿಂದ ಮೃಗಾಲಯಆವರಣದಲ್ಲಿ ಪ್ರವಾಸಿಗರಿಗೆ ಮೈಸೂರುಪಾಕ್ ಹಾಗೂ ಗುಲಾಬಿ ಹೂ ನೀಡಿ ಶುಭ ಕೋರಿ ಮಾತನಾಡಿದರು.
ಮೈಸೂರಿನಲ್ಲಿ ಪ್ರವಾಸೋದ್ಯಮಕ್ಕೆ ಅದ್ಭುತ ಅವಕಾಶಗಳಿದ್ದು, ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ಕೇಂದ್ರವಾಗಿ ರೂಪುಗೊಂಡಿದೆ. ಇಂದು ಪ್ರವಾಸಿ ತಾಣಗಳಿಗೆ ಹೋಗುವ ಪ್ರವಾಸಿಗರುಪರಿಸರ ಸಂರಕ್ಷಣೆ ಮನೋಭಾವರೂಢಿಸಿಕೊಳ್ಳಬೇಕಿದೆ. ಕಸ, ಪ್ಲಾಸಿಕನ್ನುಎಲ್ಲೆಂದರಲ್ಲಿ ಎಸೆಯದೇ ನಿಗದಿತಜಾಗದಲ್ಲೇ ಹಾಕಬೇಕು ಎಂದು ಮನವಿ ಮಾಡಿದರು.
ಮೈಸೂರು ಪ್ರವಾಸಿ ತಾಣಗಳ ಅಭಿವೃದ್ಧಿ ಪರಿಸರಕ್ಕೆ ಪೂರಕವಾಗಿದೆ. ಕೆಲವು ಖಾಸಗಿ ವಲಯಗಳಲ್ಲಿ ಹಲವುಕಡೆ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನುಒದಗಿಸಿಕೊಡುವ ಹಿನ್ನೆಲೆಯಲ್ಲಿ ಮಾನವ ನಿರ್ಮಿತ ಕಟ್ಟಡಗಳು ಹೆಚ್ಚಾಗುತ್ತಿವೆ.ಇದರಿಂದಾಗಿ ಪ್ರಾಕೃತಿಕ ಸೌಂದರ್ಯ ಹಾಳಾಗಬಾರದು ಎಂದರು.
ಈ ಸಂದರ್ಭದಲ್ಲಿ ಮೃಗಾಲಯ ಪ್ರಾಧಿಕಾರದ ಸದಸ್ಯೆ ಜ್ಯೋತಿ ರೇಚಣ್ಣ, ಮುಡಾ ಲಕ್ಷ್ಮೀದೇವಿ, ಮಹಿಳಾ ಮತ್ತುಮಕ್ಕಳ ಕಲ್ಯಾಣ ರಾಜ್ಯ ಅಭಿವೃದ್ಧಿ ನಿಗಮನಿರ್ದೇಶಕ ರೇಣುಕರಾಜ, ಅಪೂರ್ವಸ್ನೇಹ ಬಳಗದ ಅಧ್ಯಕ್ಷ ಅಪೂರ್ವಸುರೇಶ್, ರವಿಶಂಕರ್, ಅಜಯ್ ಶಾಸ್ತ್ರಿ, ರಾಕೇಶ್ ಕುಂಚಿಟಿಗ ಮತ್ತಿತರರು ಉಪಸ್ಥಿತರಿದ್ದರು.
ಮೈಸೂರು ಪಾಕ್‌ನಿಂದ ಆರೋಗ್ಯ ವೃದ್ಧಿ:
ಮೈಸೂರು ಪಾಕ್ ಮೈಸೂರು ಅವರದ್ದೇ ಎಂದು ಪ್ರವಾಸಿಗರಿಗೆ ತಿಳಿಸಿ ಅರಿವು ಮೂಡಿಸಲಾಗುತ್ತಿದೆ. ಸಂತಸದ ಸಂಕೇತ ಸಿಹಿಯಾಗಿದ್ದು, ಇದು ಕೆಲವರು ಆರೋಗ್ಯಕ್ಕೆ ಹಾನಿಕರ ಎಂದು ಭಾವಿಸಲಾಗುತ್ತಿದೆ. ಮೈಸೂರು ಪಾಕ್ ತಿಂದರೆ ಆರೋಗ್ಯ ವೃದ್ಧಿಸುತ್ತದೆ. ಕಡಲೇ ಹಿಟ್ಟು ಚರ್ಮದ ಕಾಯಿಲೆ ಗುಣಪಡಿಸುತ್ತದೆ.ಸಕ್ಕರೆಯಲ್ಲಿ ಆಮ್ಲಜನಕ ಹೆಚ್ಚಾಗಿದ್ದು. ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ತುಪ್ಪವು ಮೂಳೆ ಸವೆತವನ್ನು ನಿವಾರಿಸುತ್ತದೆ ಎಂದು ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಎಸ್.ಇ ಗಿರೀಶ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.