ಪರಿಸರ ಪ್ರೇಮಿಗಳಿಗೆ ಮಾದರಿ…ವೃಕ್ಷದಲ್ಲೊಂದು ಮನೆಯ ಮಾಡಿ…

ಮಳೆಗಾಲದಲ್ಲಿ ಮಿಂಚಿನಿಂದ ಮರವನ್ನು ಈ ಕಂಬಗಳು ಸಂರಕ್ಷಿಸುತ್ತದೆ.

Team Udayavani, Sep 28, 2021, 4:32 PM IST

ಪರಿಸರ ಪ್ರೇಮಿಗಳಿಗೆ ಮಾದರಿ…ವೃಕ್ಷದಲ್ಲೊಂದು ಮನೆಯ ಮಾಡಿ…

ಕೆಲವೊಮ್ಮೆ ಮನೆ ಕಟ್ಟುವಾಗ ಉದ್ದೇಶಿಸಿರುವ ಜಾಗದಲ್ಲಿ ಮರ ಇದ್ದರೆ ಅದನ್ನು ಕಡಿಯಬೇಕಾಗುತ್ತದೆ. ಆದರೆ ಇಲ್ಲೊಬ್ಬರು ಇದಕ್ಕಿಂತ ಭಿನ್ನ. ಮರವನ್ನು ಹಾಗೇ ಉಳಿಸಿ ಅದಕ್ಕೆ ಹೊಂದಿಕೊಂಡು ಮನೆ ನಿರ್ಮಿಸಿ ಪರಿಸರ ಪ್ರೇಮಕ್ಕೊಂದು ಮಾದರಿಯಾಗಿದ್ದಾರೆ. ಉದಯಪುರದ ಕುಲ್‌ ಪ್ರದೀಪ್‌ ಸಿಂಗ್‌ ಎನ್ನುವ ಎಂಜಿನಿಯರ್‌ ನಿರ್ಮಿಸಿದ ಈ ರೀತಿಯ ಮನೆ ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದೆ. ಅವರು ಮನೆ ಕಟ್ಟಲು ಯೋಚಿಸಿದ್ದ ಜಾಗದಲ್ಲಿ ದೊಡ್ಡ ಮಾವಿನ ಮರವಿತ್ತು.

ಅದನ್ನು ಕಡಿದು ಅವರಿಗೆ ಅಲ್ಲಿ ಮನೆ ನಿರ್ಮಿಸಬಹುದಿತ್ತು. ಆದರೆ ಅವರು ಎಲ್ಲರಂತೆ ಯೋಚಿಸಲಿಲ್ಲ. ಬದಲಾಗಿ ಪ್ರಕೃತಿಯ ಜತೆ ಜತೆಗೇ ಸಾಗುವ ನಿರ್ಧಾರ ಮಾಡಿದರು. ಮರವನ್ನು ಒಳಗೊಂಡೇ ಮನೆ ನಿರ್ಮಿಸಿ ಇತರರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು. ಕೆ.ಪಿ.ಸಿಂಗ್‌ ಅವರ ಮನೆಯ ಬೆಡ್‌ ರೂಂ, ಗೆಸ್ಟ್‌ ರೂಂ, ಅಡುಗೆ ಕೋಣೆ ಮಾವಿನ ಮರದ ರೆಂಬೆಯ ಅಡಿಯಲ್ಲಿದೆ. ಒಟ್ಟಿನಲ್ಲಿ ಇದು ಈಗ “ವೃಕ್ಷ ಮನೆ’ಯಾಗಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದು ಆಗಿ ಬದಲಾಗಿದೆ.

ಯೋಜನೆ ಹೊಳೆದ ಬಗೆ
ಮರ ಬೆಲೆ ಬಾಳುವ ಸಂಪತ್ತು ಎನ್ನುವುದನ್ನು ಪ್ರಶಾಂತ್‌ ಯಾವತ್ತೂ ಪ್ರತಿಪಾದಿಸುತ್ತಿರುತ್ತಾರೆ. ಆದ್ದರಿಂದಲೇ ಅವರು ತನ್ನ ಮನೆ ನಿರ್ಮಿಸುವಾಗ ಅಲ್ಲಿದ್ದ ಸುಮಾರು 80 ವರ್ಷ ಹಳೆಯ ಮಾವಿನ ಮರವನ್ನು ಕಡಿಯಲು ಮುಂದಾಗಲಿಲ್ಲ. ಅದನ್ನು ಒಳಗೊಂಡೇ 2000ನೇ ಇಸವಿಯಲ್ಲಿ ಅವರು 4 ಅಂತಸ್ತಿನ ಮನೆ ನಿರ್ಮಿಸಿದರು. ಮರದ ರೆಂಬೆಗೆ ಅನುಸರಿಸಿ ಕೆ.ಪಿ.ಸಿಂಗ್‌ ಮನೆಯ ವಿನ್ಯಾಸ ರಚಿಸಿದ್ದರು. ಕೆಲವು ಕೊಂಬೆಗಳನ್ನು ಸೋಫಾದಂತೆಯೂ, ಟಿ.ವಿ. ಸ್ಟಾಂಡ್‌ ಆಗಿಯೂ ಅವರು ಉಪಯೋಗಿಸುತ್ತಿದ್ದಾರೆ. ಮೊದಲೇ ಹೇಳಿದಂತೆ ಅಡುಗೆ ಕೋಣೆ ಮತ್ತು ಬೆಡ್‌ ರೂಂನಿಂದ ರೆಂಬೆಗಳು ಬೆಳೆಯುತ್ತಿವೆ!

ಅಜ್ಮೀರ್‌ನಲ್ಲಿ ಹುಟ್ಟಿದ್ದ ಕೆ.ಪಿ.ಸಿಂಗ್‌ ಆಮೇಲೆ ಉದಯಪುರ್‌ನಲ್ಲಿ ಸ್ಥಳ ಕೊಂಡುಕೊಂಡರು. ಅವರು ಖರೀದಿಸಿದ ಜಾಗದಲ್ಲಿ ಹಿಂದೆ ಸಮೃದ್ಧವಾಗಿ ಮರಗಳಿದ್ದವು. ಅಲ್ಲಿದ್ದವರು ಮರದಲ್ಲಿನ ಹಣ್ಣುಗಳನ್ನು ಮಾರಿ ಆದಾಯ ಗಳಿಸುತ್ತಿದ್ದರು. ಕ್ರಮೇಣ ನಗರ ಬೆಳೆಯುತ್ತ ಹೋದಂತೆ ಮರಗಳನ್ನು ಕಡಿಯಲಾಯಿತು. ಆ ಜಾಗದಲ್ಲಿದ್ದ ಸುಮಾರು 4 ಸಾವಿರದಷ್ಟು ಮರಗಳನ್ನು ನೆಲಕ್ಕುರುಳಿಸಲಾಗಿತ್ತು ಎನ್ನುತ್ತದೆ ಲೆಕ್ಕಾಚಾರ. ಇದನ್ನೆಲ್ಲ ತಿಳಿದುಕೊಂಡಿದ್ದ ಕೆ.ಪಿ.ಸಿಂಗ್‌ ಆ ಸ್ಥಳದಲ್ಲಿದ್ದ ಮರ ಕಡಿಯದಿರಲು ದೃಢ ನಿರ್ಧಾರ ಕೈಗೊಂಡರು. ಮರವನ್ನು ಬೇರು ಸಮೇತ ಕಿತ್ತು ಬೇರೆಡೆ ನಡೆವ ಯೋಜನೆ ಇತ್ತಾದರೂ ಅದು ದುಬಾರಿಯಾಗಿತ್ತು. ಹೀಗಾಗಿ ಐಐಟಿಯಲ್ಲಿ ಎಂಜಿನಿಯರಿಂಗ್‌ ಓದಿದ್ದ ಅವರು ಮರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಮನೆಯ ನಕ್ಷೆ ತಯಾರಿಸಿದರು. ಮನೆ ನಿರ್ಮಿಸುವ ಮುನ್ನ ಅವರು ಮರದ ಸುತ್ತ ನಾಲ್ಕು ಕಂಬಗಳನ್ನು ನೆಟ್ಟರು. ಅದು ಎಲೆಕ್ಟ್ರಿಕಲ್‌ ಕಂಡಕ್ಟರ್‌ ಆಗಿ ಕಾರ್ಯ ನಿರ್ವಹಿಸುತ್ತದೆ.

ಮಳೆಗಾಲದಲ್ಲಿ ಮಿಂಚಿನಿಂದ ಮರವನ್ನು ಈ ಕಂಬಗಳು ಸಂರಕ್ಷಿಸುತ್ತದೆ. ಮರಕ್ಕೆ ಘಾಸಿಯಾಗಬಾರದು ಎಂಬ ಕಾರಣಕ್ಕೆ ಮನೆ ನಿರ್ಮಾಣಕ್ಕೆ ಸಿಮೆಂಟ್‌ ಬಳಸಿಲ್ಲ. ಸ್ಟೀಲ್‌ನಿಂದಲೇ ಇಡೀ ಮನೆಯನ್ನು ರಚಿಸಲಾಗಿದೆ. ನೆಲ ಮತ್ತು ಗೋಡೆಗಳನ್ನು ಫೈಬರ್‌ ಮತ್ತು ಸೆಲ್ಯೂಲಾಸ್‌ ಬಳಸಿ ನಿರ್ಮಿಸಲಾಗಿದೆ ಎನ್ನುತ್ತಾರೆ ಕೆ.ಪಿ.ಸಿಂಗ್‌.

ಕೆ.ಪಿ.ಸಿಂಗ್‌ ಅವರ ಮನೆ ಫ್ಯಾನ್‌ ಬಳಸದೆಯೂ ಯಾವಾಗಲೂ ತಂಪಾಗಿರುತ್ತದೆ. ಅವರ ತಾಯಿಯ ಅನಾರೋಗ್ಯದ ಕಾರಣ ಈ ಮನೆಯ ಪಕ್ಕವೇ ಇನ್ನೊಂದು ಮನೆಯನ್ನು ನಿರ್ಮಿಸಿದ್ದು ಅವರು ಅಲ್ಲಿ ವಾಸಿಸುತ್ತಾರೆ. ಆದರೆ ಕೆ.ಪಿ.ಸಿಂಗ್‌ ಈ ವೃಕ್ಷ ಮನೆಯಲ್ಲಿಯೇ ಆರಾಮವಾಗಿ ವಾಸಿಸುತ್ತಿದ್ದಾರೆ.

ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ಗೆ ಸೇರ್ಪಡೆ
ಈ ವೃಕ್ಷ ಮನೆ ಈಗಾಗಲೇ ಲಿಮ್ಕಾ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಮಾತ್ರವಲ್ಲ ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವೂ ಆಗಿದೆ. ಪ್ರಕೃತಿಯ ಪ್ರಾಧಾನ್ಯತೆ ಮತ್ತು ವಾಸ್ತುಶಾಸ್ತ್ರ ಎಂಜಿನಿಯರಿಂಗ್‌ ಕುರಿತು ಅಧ್ಯಯನ ಮಾಡಲೂ ಸಾಕಷ್ಟು ಮಂದಿ ಈ ಮನೆಗೆ ಭೇಟಿ ನೀಡುತ್ತಾರೆ.

-ರಮೇಶ್‌ ಬಿ.

ಟಾಪ್ ನ್ಯೂಸ್

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.