![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 28, 2021, 5:40 PM IST
ಹುಬ್ಬಳ್ಳಿ: ಆಟೋರಿಕ್ಷಾ ಬಾಡಿಗೆ ಸರಿಯಾಗಿ ನೀಡುತ್ತಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ರವಿವಾರ ತಡರಾತ್ರಿ ನಡೆದಿದೆ.
ಹಳೇಹುಬ್ಬಳ್ಳಿ ನೇಕಾರನಗರ ಚವ್ಹಾಣ ಪ್ಲಾಟ್‌ನ ಲೋಕೇಶ ಮಹದೇವಪ್ಪ ಕಲಾಲ (24) ಕೊಲೆಯಾಗಿದ್ದಾನೆ. ಈತ ಮಾರುತಿ ಎಂಬುವರ ಆಟೋರಿಕ್ಷಾವನ್ನು ದಿನಕ್ಕೆ 200ರೂ.ದಂತೆ ಬಾಡಿಗೆ ಪಡೆದುಕೊಂಡು ಇನ್ನೊಬ್ಬರಿಗೆ ಕೊಟ್ಟಿದ್ದನಂತೆ. ಜೊತೆಗೆ ಎರಡು ದಿನಗಳಿಂದ ಆಟೋ ರಿಕ್ಷಾ ಬಾಡಿಗೆಯನ್ನು ಸರಿಯಾಗಿ ಕೊಟ್ಟಿರಲಿಲ್ಲವಂತೆ. ಇದೇ ಕಾರಣಕ್ಕೆ ಸಿಟ್ಟಾದ ಮಾರುತಿ ತನ್ನ ಸ್ನೇಹಿತರಾದ ಪ್ರಶಾಂತ, ರಾಜುನೊಂದಿಗೆ ಲೋಕೇಶ ಮನೆಗೆ ನುಗ್ಗಿ ಜಗಳ ತೆಗೆದಿದ್ದಾನೆ. ಅದು ವಿಕೋಪಕ್ಕೆ ಹೋದಾಗ ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಲೋಕೇಶ ರಾತ್ರಿ ಮನೆಯಲ್ಲಿ ಹಾಗೇ ಮಲಗಿದ್ದಾನೆ. ಆದರೆ ಬೆಳಗ್ಗೆ ನೋಡಿದರೆ ಹಾಸಿಗೆಯಲ್ಲೇ ಅಸುನೀಗಿದ್ದಾನೆ. ಮರಣೋತ್ತರ ಪರೀಕ್ಷೆ ನಂತರವೇ ನಿಖರ ಮಾಹಿತಿ ಗೊತ್ತಾಗಲಿದೆ ಎಂದು ಮೂಲಗಳು ತಿಳಿಸಿವೆ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

You seem to have an Ad Blocker on.
To continue reading, please turn it off or whitelist Udayavani.