ಶತಮಾನೋತ್ತರ ಶಾಲೆಗೆ ಬೇಕಿದೆ ಕೊಠಡಿಗಳು
14 ಮಕ್ಕಳಿದ್ದ ಕಂಡ್ಲೂರು ಸರಕಾರಿ ಹಿ.ಪ್ರಾ. ಶಾಲೆಯಲ್ಲೀಗ 122 ಮಕ್ಕಳು
Team Udayavani, Sep 29, 2021, 6:11 AM IST
ಬಸ್ರೂರು : ಮುಚ್ಚುವ ಹಂತಕ್ಕೆ ಬಂದಿದ್ದ ಶತಮಾನೋತ್ತರ ಇತಿಹಾಸವಿರುವ ಶಾಲೆಯೊಂದು ಊರವರು, ಶಿಕ್ಷಣ ಪ್ರೇಮಿಗಳ ಪ್ರಯತ್ನದಿಂದ ಪುನರ್ ಜನ್ಮ ಪಡೆದು, ಮತ್ತೆ ಹಳೆಯ ಛಾಪನ್ನು ಮೂಡಿಸುವತ್ತ ಹೆಜ್ಜೆಯಿಟ್ಟಿದೆ. ಆದರೆ ಕೊಠಡಿ ಸಹಿತ ಕೆಲವೊಂದು ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಟ್ಟರೆ ಇನ್ನಷ್ಟು ಸಹಕಾರಿಯಾಗಲಿದೆ.
ಮುಚ್ಚಲು ಹೊರಟಿದ್ದರು…
ಕಂಡ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಕನ್ನಡ) ಯಲ್ಲಿ ಕೆಲವೇ ಮಕ್ಕಳು ಉಳಿದ ಕಾರಣ 2019ರಲ್ಲಿ ಈ ಶಾಲೆಯನ್ನು ಇಲಾಖೆ ಮುಚ್ಚಲು ಹೊರಟಿತ್ತು. ಆದರೆ 137 ವರ್ಷಗಳ ಇತಿಹಾಸವಿರುವ ಈ ಕಂಡ್ಲೂರು ಕನ್ನಡ ಶಾಲೆಯನ್ನು ಏನಾದರೂ ಮಾಡಿ ಉಳಿಸಬೇಕೆಂದು ಊರ ಹಿರಿಯರು, ಶಿಕ್ಷಣಾಭಿಮಾನಿಗಳು ಪಣ ತೊಟ್ಟಿದ್ದರು. ಇದರ ಪರಿಣಾಮ ಶಾಲಾ ಅಭ್ಯುದಯ ಸಮಿತಿ ರಚನೆಗೊಂಡು ಕಂಡ್ಲೂರು ಮತ್ತು ಸುತ್ತಮತ್ತಲ ಊರಿನ ಮನೆಮನೆಗೆ ತೆರಳಿ ಶಾಲೆಗೆ ಮಕ್ಕಳನ್ನು ಸೇರಿಸುವ ಪ್ರಯತ್ನದಲ್ಲಿ ಸಮಿತಿಯವರು, ಊರವರು ಯಶಸ್ತಿಯಾದರು.
122 ಮಕ್ಕಳು
3 ವರ್ಷ ಗಳ ಹಿಂದೆ ಕೇವಲ ಹದಿನಾಲ್ಕು ಮಕ್ಕಳಿದ್ದ ಈ ಶಾಲೆಯಲ್ಲಿ ಪ್ರಸ್ತುತ 122 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಗೆ 26 ಮಕ್ಕಳು ದಾಖಲಾಗಿದ್ದು, ಒಟ್ಟು ಈ ಬಾರಿ 52 ಮಕ್ಕಳು ಶಾಲೆಗೆ ಸೇರ್ಪಡೆಗೊಂಡಿದ್ದಾರೆ.
ಎಲ್.ಕೆ.ಜಿ., ಯು.ಕೆ.ಜಿ.
ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳೂ ನಡೆಯುತ್ತಿದ್ದು, 50 ಮಕ್ಕಳಿಗೆ ಓರ್ವ ಗೌರವ ಶಿಕ್ಷಕಿ ಪಾಠ ಹೇಳುತ್ತಿದ್ದಾರೆ.
ಕೊಠಡಿ ಅಗತ್ಯವಿದೆ
ಮೇಲಧಿಕಾರಿಗಳಿಗೆ ಶಾಲೆಗೆ ಕೊಠಡಿಯ ಆವಶ್ಯಕತೆಯಿದೆ ಎನ್ನುವ ಮನವಿಯನ್ನು ಈಗಾಗಲೇ ಸಂಸ್ಥೆಯವರು ಮಾಡಿದ್ದರೂ ಹೊಸ ಕೊಠಡಿ ನಿರ್ಮಾಣವಾಗಿಲ್ಲ.
ಇದನ್ನೂ ಓದಿ:ವೈದ್ಯರ ನೇಮಕಾತಿಗೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಕ್ರಮ
ಪೀಠೊಪಕರಣ ಹೆಚ್ಚಿಸಿ
ಮಕ್ಕಳ ಸಂಖ್ಯೆಗನುಗುಣವಾಗಿ ಶೌಚಾಲಯದ ವ್ಯವಸ್ಥೆ ಯನ್ನು ಕಲ್ಪಿಸಲಾಗಿದೆ.ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾ ತಿಯಲ್ಲಿ ಹೆಚ್ಚಳವಾಗಿದ್ದು ಹೆಚ್ಚುವರಿ ಪೀಠೊಪಕರಣಗಳನ್ನೂ ಕಲ್ಪಿಸಬೇಕಿದೆ. ಅಲ್ಲದೆ ಮಕ್ಕಳಿಗೆ ವಾಚನಾಲಯ, ಪ್ರಯೋಗಾಲಯವೂ ಅಗತ್ಯವಿದೆ. ಇದಲ್ಲದೆ ಕೆಲವೊಂದು ಮೂಲ ಸೌಕರ್ಯಗಳನ್ನು ಒದಗಿಸಿದರೆ ಶಾಲೆಯಲ್ಲಿ ಮಕ್ಕಳ ದಾಖಲಾತಿ ಇನ್ನಷ್ಟು ಹೆಚ್ಚಳವಾಗಬಹುದು.
ಕೊಠಡಿ ಬೇಕಿದೆ
ಶಿಕ್ಷಣ ಇಲಾಖೆ 2019ರಲ್ಲಿ ಶಾಲೆಯಲ್ಲಿ ಮಕ್ಕಳ ಕೊರತೆಯನ್ನು ಕಂಡು ಮುಚ್ಚಲು ಹೊರಟಿತ್ತು. ಆಗ ವಿವಿಧ ಸಮಿತಿ ಮಾಡಿಕೊಂಡು ಮನೆಮನೆ ತಿರುಗಿ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ. ಈಗ ಇರುವ ಕೊಠಡಿಗಳು ತರಗತಿ ನಡೆಸಲು ಸಾಕಾಗುತ್ತಿಲ್ಲ.
– ಗೌರಿ ಆರ್. ಶ್ರೀಯಾನ್, ಶಾಲಾ ಅಭ್ಯುದಯ ಸಮಿತಿ ಅಧ್ಯಕ್ಷೆ
ಶಾಲೆಗೀಗ ಪುನರ್ಜನ್ಮ
ಶಾಲೆಯನ್ನೇ ಮುಚ್ಚಿ ಬಿಡುತ್ತಿದ್ದ ಸಂದರ್ಭದಲ್ಲಿ ವಿವಿಧ ಸಮಿತಿಗಳು ಹಾಗೂ ಊರ ಪ್ರಮುಖರು ಮತ್ತು ದಾನಿಗಳ ನೆರವಿನಿಂದ ಶಾಲೆಗೀಗ ಪುನರ್ಜನ್ಮ ಬಂದಿದೆ. ಮಕ್ಕಳ ದಾಖಲಾತಿ ಹೆಚ್ಚಿದ್ದು ಹೆಚ್ಚುವರಿ ಕೊಠಡಿಗಳು ಈಗ ಬೇಕಾಗಿದೆ.
– ಕಿರಣ್ ಪೂಜಾರಿ, ಎಸ್ ಡಿ ಎಂಸಿ ಅಧ್ಯಕ್ಷರು
ಮನವಿ ಸಲ್ಲಿಕೆ
ಊರವರ ಸಹಕಾರದಿಂದ ಶಾಲೆಯಲ್ಲೀಗ 122 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ತರಗತಿ ನಡೆಸಲು ಹೆಚ್ಚುವರಿ ಕೊಠಡಿಗಳ ಆವಶ್ಯಕತೆ ಇದೆ. ಈ ಬಗ್ಗೆ ಈಗಾಗಲೇ ಮೇಲಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದೇವೆ.
– ರತ್ನಾ ಶೆಟ್ಟಿ, ಮುಖ್ಯೋಪಾಧ್ಯಾಯಿನಿ
– ದಯಾನಂದ ಬಳ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.