ಕಲ್ಪತರು ನಾಡಲ್ಲಿ ವಿನಾಶದತ್ತ ತೆಂಗಿನ ಮರಗಳು


Team Udayavani, Sep 29, 2021, 3:53 PM IST

ಕಲ್ಪತರು ನಾಡಲ್ಲಿ ವಿನಾಶದತ್ತ ತೆಂಗಿನ ಮರಗಳು

ತಿಪಟೂರು: ಕಳೆದ 6-7 ವರ್ಷಗಳಿಂದ ಕಲ್ಪತರುನಾಡು ತಿಪಟೂರು ತಾಲೂಕಿಗೆ ಕಾಲಕಾಲಕ್ಕೆ ಮಳೆ ಇಲ್ಲದೆ, ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು ಸೇರಿದಂತೆ ಪ್ರಮುಖ ಆಹಾರ ಬೆಳೆಗಳೂಕೈಕೊಟ್ಟಿದೆ. ಅಲ್ಲದೆ, ಅಂತರ್ಜಲ ಪಾತಾಳ ಹೊಕ್ಕಿದ್ದು,ಹನಿಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಹಲವು ವರ್ಷದಿಂದ ಮಳೆ ಇಲ್ಲದೆ ತಾಲೂಕು ಭೀಕರ ಬರದ ಸುಳಿಗೆ ಸಿಲುಕಿರುವುದರಿಂದ ಇಲ್ಲಿನಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು ವಿನಾಶ ದಂಚಿಗೆ ತಲುಪಿದೆ. ಅಂತರ್ಜಲ ಸಾವಿರ ಅಡಿಗೂ ಮೀರಿ ಹೋಗಿರುವುದರಿಂದ ತೆಂಗು ಉಳಿಸಿಕೊಳ್ಳಲಾಗದೆ, ಬೆಳೆಗಾರರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ.

ಕಾಡುತ್ತಿದೆ ವಿವಿಧ ರೋಗಗಳು: ಇತ್ತೀಚೆಗೆ ತೆಂಗಿಗೆ ನುಸಿಪೀಡೆ, ಗರಿರೋಗ, ರಸ ಸೋರುವ ರೋಗ ಸೇರಿದಂತೆ ವಿವಿಧ ರೋಗಗಳು ಕಾಡುತ್ತಿದೆ. ಇದರಿಂದಬೆಳೆಗಾರರು ಆತಂಕದಲ್ಲಿದ್ದಾರೆ. ಹತ್ತಾರು ವರ್ಷಗಳಕಾಲ ಕಷ್ಟಪಟ್ಟು ಬೆಳೆದ ತೆಂಗಿನ ಮರಗಳು ನೀರಿಲ್ಲದೆ ಹಾಗೂ ರೋಗಗಳಿಗೆ ತುತ್ತಾಗಿ ಒಣಗಿ ಹೋಗುತ್ತಿರುವುದರಿಂದ ತೆಂಗು ಬೆಳೆಗಾರರ ಬದುಕು ಅತಂತ್ರವಾಗಿದ್ದು, ತೆಂಗು ಉಳಿಸಿಕೊಳ್ಳಲು ರೈತರು ಹರ ಸಾಹಸಕ್ಕಿಳಿಯುವಂತಾಗಿದೆ. ಈ ಮಳೆಗಾಲದಲ್ಲೂ ತೆಂಗು, ಅಡಿಕೆ

ಮರಗಳನ್ನು ಜೀವಂತ ಉಳಿಸಿಕೊಳ್ಳಲು ಬೆಳೆಗಾರರು ದುಬಾರಿ ಹಣ ತೆತ್ತು ಟ್ಯಾಂಕರ್‌ ಮೂಲಕ ನೀರನ್ನು ಮರಗಳಿಗೆ ಹಾಯಿಸುತ್ತಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿದೆ. ಸಾವಿರಾರು ಅಡಿ ಆಳದ ಕೊಳವೆಬಾವಿತೆಗೆಸಿ, ತೆಂಗು ಉಳಿಸಿಕೊಳ್ಳಲು ಲಕ್ಷಾಂತರ ರೂ. ಸಾಲಮಾಡಿ, ಪಂಪು-ಮೋಟಾರ್‌ ಅಳವಡಿಸಿದ್ದು, ಅದರಬಡ್ಡಿ ಕಟ್ಟಲೂ ಸಾಧ್ಯವಾಗದೆ ಬೆಳೆಗಾರರು ಆತ್ಮಹತ್ಯೆಯತ್ತ ಮುಖ ಮಾಡುವಂತಾಗಿದ್ದರೂ ಸರ್ಕಾರತೆಂಗು ಉಳಿಸಿಕೊಳ್ಳಲು ಯಾವುದೇ ನೆರವಿಗೂ ಬಾರದಿರುವುದು ಇಲ್ಲಿನ ತೆಂಗು ಬೆಳೆಗಾರರ ದುರಂತಕ್ಕೆ ಸಾಕ್ಷಿಯಾಗಿದೆ.

ಪಶು ಸಂಗೋಪನೆಗೂ ಕಂಟಕ: ತೆಂಗನ್ನೇ ನಂಬಿಕೊಂಡಿದ್ದ ಬೆಳೆಗಾರರು ಇತ್ತೀಚೆಗೆ ತಮ್ಮ ದಿನನಿತ್ಯದ ಬದುಕು ಸಾಗಿಸಲು ಪಶು ಸಂಗೋಪನೆಯನ್ನೇ ಪೂರ್ಣ ಪ್ರಮಾಣದಲ್ಲಿ ಅವಲಂಬಿಸಿದ್ದಾರೆ. ಆದರೆ, ಮಳೆರಾಯ ಸಂಪೂರ್ಣ ಮುನಿಸಿಕೊಂಡಿರುವುದರಿಂದ ರಾಗಿ ಬೆಳೆಯೂ ಕೈಕೊಟ್ಟಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಕಾಡಲಿದ್ದು, ಆತಂಕದಲ್ಲೇ ಈಗಿನಿಂದಲೇ ರೈತರು ಮೇವು ಖರೀದಿಸಲು ಮುಂದಾಗಿರುವುದು ಬರಗಾಲದ ತೀವ್ರತೆ ತೋರಿಸುತ್ತಿದೆ.

ಕೆರೆಕಟ್ಟೆಗಳಲ್ಲಿ ಹನಿ ನೀರಿಲ್ಲ: ತಾಲೂಕಿನ ಯಾವ ಪಂಚಾಯಿತಿಗಳ ವ್ಯಾಪ್ತಿಯ ಕೆರೆ-ಕಟ್ಟೆಗಳಲ್ಲೂಪಶು-ಪಕ್ಷಿಗಳಿಗೆ ಕುಡಿಯಲು ಹನಿ ನೀರಿಲ್ಲ. ಆಡು, ಕುರಿ, ದನಕರುಗಳಿಗೆ ರೈತರು ಗ್ರಾಮಗಳಲ್ಲಿನ ಕಿರು ನೀರು ಸರಬರಾಜು ಟ್ಯಾಂಕ್‌ಗಳನ್ನೇ ಅವಲಂಬಿಸ ಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ತಾಲೂಕಿನ ಒಳಗಡೆಯೇ ಹೇಮಾವತಿ ನಾಲೆಯಲ್ಲಿ ಸಾಕಷ್ಟು ಕಾಲ ನೀರು ಹರಿದರೂ ತಾಲೂಕು ಆಡಳಿತಮಾತ್ರ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಪ್ರಯತ್ನಮಾಡದೆ, ಕೇವಲ ಸಬೂಬು ಹೇಳಿಕೊಂಡು ರೈತರಿಗೆಅನ್ಯಾಯ ಮಾಡುತ್ತಿದೆ. ಇದಕ್ಕೆ ತಾಲೂಕು ಆಡಳಿತದ ಉದಾಸೀನವೆ ಕಾರಣವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಜನಪ್ರತಿನಿಧಿಗಳು, ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ತೆಂಗು ಬೆಳೆಗಾರರ ಬದುಕು ಬೆಂಕಿಯಿಂದ ಬಾಣಲೆಗೆ ಎಸೆದಂತಾಗಿದೆ. ನಿರಂತರ ಬರದ ನಡುವೆ ಬದುಕು ಸವೆಸುತ್ತಿರುವ ಬೆಳೆಗಾರರ ಸಂಕಷ್ಟಗಳು, ತೆಂಗು ವಿನಾಶದ ಬಗ್ಗೆ ಸರ್ಕಾರಕ್ಕೆ ಸಮರ್ಪಕ ಮಾಹಿತಿ

ನೀಡಲು ಜನಪ್ರತಿನಿಧಿಗಳು ನಿರ್ಲಕ್ಷ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸರ್ಕಾರ ಕಲ್ಪತರು ನಾಡಿನ ತೆಂಗು ಬೆಳೆಗಾರರ ನೆರವಿಗೆ ಬಂದು, ಶೀಘ್ರ ವಿಶೇಷ ಪ್ಯಾಕೇಜ್‌ ಮೂಲಕ ಪರಿಹಾರ ನೀಡಿ, ವಿನಾಶ  ದತ್ತ ಸಾಗಿರುವ ತೆಂಗು ಬೆಳೆ ಹಾಗೂ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡುವುದೊ ಕಾಯ್ದು ನೋಡಬೇಕಿದೆ.

ಮಳೆ ಬರುವ ವಾತಾವರಣ: ಈ ವರ್ಷ ಮಳೆಗಾಲ ಆರಂಭವಾದಾಗಿನಿಂದಲೂ ಈವರೆಗೆ ವಾತಾವರಣ ದಲ್ಲಿ ನಿತ್ಯವೂ ಮಳೆ ಬರುವಂತಹ ಮೋಡಗಳು ಕಾಣುತ್ತಿರುವುದು ಬಿಟ್ಟರೆ, ಹಳ್ಳಕೊಳ್ಳಗಳಲ್ಲಾದರೂ ನೀರು ಹರಿಯುವಂತಹ ಮಳೆಯೇ ಬಂದಿಲ್ಲ. ಈಗಲೂ ಮಳೆ ಬರುವ ಮೋಡ ಮುಸುಕಿದ ವಾತಾವರಣವನ್ನು ನಿತ್ಯವೂ ರೈತರು ನೋಡುತ್ತಾ ಇವತ್ತುಮಳೆ ಬರಬಹುದು, ನಾಳೆ ಬರಬಹುದು ಎಂಬ ಹತಾಶಾಭಾವದಿಂದ ಆಕಾಶ ದಿಟ್ಟಿಸಿ ನೋಡುತ್ತಾ ಮಳೆರಾಯನ ಕೃಪೆಗಾಗಿ ಕಾಲ ಕಳೆಯುವಂತಾಗಿದೆ.

ರೈತರ ಬದುಕಿನ ಜೀವಾಳ ತೆಂಗು ಬೆಳೆಯಾಗಿದ್ದು, ಲಕ್ಷಾಂತರ ತೆಂಗಿನಮರಗಳು ಬರಗಾಲ, ಅಂತರ್ಜಲ ಕೊರತೆಯಿಂದ ಒಣಗಿ ಹೋಗಿವೆ. ಕೂಡಲೇಸರ್ಕಾರ ತಾಲೂಕನ್ನುಬರ ಪೀಡಿತ ಎಂದು ಘೋಷಿಸಿ, ತೆಂಗು, ಅಡಕೆ ಬೆಳೆಗಾರರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು.ಮುಂದಿನ ದಿನಗಳಲ್ಲಿ ಹೇಮಾವತಿ,ಎತ್ತಿನಹೊಳೆಯಿಂದ ಕೆರೆಕಟ್ಟೆಗಳಿಗೆ ನೀರು ತುಂಬಿಸಿದರೆ ತೆಂಗಿಗೆ ಅನುಕೂಲ.-ಕೆ.ಆರ್‌. ಅರುಣ್‌ಕುಮಾರ್‌, ಬೆಳೆಗಾರರು, ಕೊಬ್ಬರಿ ವರ್ತಕರು, ತಿಪಟೂರು

ಸತತ ಬರಗಾಲ, ರೋಗದ ಕಾಟದಿಂದ ಸಾಕಷ್ಟು ತೆಂಗಿನಮರಗಳು ಈಗಾಗಲೇ ಒಣಗುತ್ತಿರುವುದು ಕಂಡು ಬಂದಿದೆ. ಈಗಲೂ ಮಳೆ ಬಂದರೆ ಸಹಾಯವಾಗಲಿದೆ. ಸರ್ಕಾರದಿಂದಯಾವುದೇ ಪರಿಹಾರ ಘೋಷಣೆಯಾಗಿಲ್ಲ. ಇಲಾಖೆಯಿಂದ ಯಾವುದಾದರೂಪರಿಹಾರ ಬಂದಲ್ಲಿ ಬೆಳೆಗಾರರಿಗೆ ತಿಳಿಸಲಾಗುವುದು.-ಜಿ.ವಿಜಯ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ತಿಪಟೂರು

-ಬಿ.ರಂಗಸ್ವಾಮಿ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.