ಶೇ.75 ಇಂಧನ ಉಳಿತಾಯ; ಹೊಗೆ ಕಡಿಮೆ, ಆರೋಗ್ಯಕ್ಕೆ ಉತ್ತಮ

ಮಿತ ಇಂಧನ ಬಳಕೆಗೆ ಸಹಕಾರಿ ಒಲೆ

Team Udayavani, Sep 30, 2021, 6:45 AM IST

ಶೇ.75 ಇಂಧನ ಉಳಿತಾಯ; ಹೊಗೆ ಕಡಿಮೆ, ಆರೋಗ್ಯಕ್ಕೆ ಉತ್ತಮ

ಕುಂದಾಪುರ: ಕೋಟೇಶ್ವರದ ಕೃಷ್ಣಯ್ಯ ಆಚಾರ್ಯ ಕೂರಾಡಿ ಅವರು ಕಲಿತದ್ದು ಎಸೆಸೆಲ್ಸಿ. ಮುಂದಿನ ಕಲಿಕೆಗೆ ಕೈಯಲ್ಲಿ ಹಣ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಶೈಕ್ಷಣಿಕ ಜೀವನ ಮೊಟಕುಗೊಳಿಸಿದ ಕೃಷ್ಣಯ್ಯ ಆಚಾರ್ಯ ಅವರು ಇಂದು ಎಂಜಿನಿಯರಿಂಗ್‌ ಕಲಿತವರು ಕೂಡ ಶಹಬಾಸ್‌ ಎನ್ನುವಂಥ ಸಂಶೋಧನೆ ಮಾಡಿದ್ದಾರೆ. ಈಚಿನ ಇವರ ಸಂಶೋಧನೆ ಎಂದರೆ ಮಿತ ಇಂಧನ ಬಳಕೆಯ ಒಲೆ.

ಏನಿದು ಒಲೆ?
ದರಳೆ (ಒಣ ಎಲೆ), ಕಸ, ಕಡ್ಡಿ, ಮರದ ತುಂಡು, ಗೆರಟೆ, ತೆಂಗಿನಕಾಯಿ ಸಿಪ್ಪೆ, ಅಡಿಕೆ ಸಿಪ್ಪೆ, ಪೇಪರ್‌ ಹೀಗೆ ಏನೇ ಕಸ ಹಾಕಿದರೂ ಸಾಕು ಎಂಬಷ್ಟು ಮಿತವಾಗಿ ಇಂಧನ ಬಳಕೆಯಾಗುವ ಒಲೆ ಇದು. ಇದರಲ್ಲಿ ಅನ್ನ, ಸಾರು ಬೇಯುವಾಗ ಜತೆಯಾಗಿ ಬಿಸಿನೀರು ಕಾಯಿಸುವ ವ್ಯವಸ್ಥೆಯಿದೆ. ಹೊಗೆ ಕಡಿಮೆ. ಇದ ರಿಂದಾಗಿ ಆರೋಗ್ಯಕ್ಕೂ ಕ್ಷೇಮ, ಜೇಬಿಗೂ ಹಿತಕರ. ಹಾಕಿದ ಇಂಧನ ಒಲೆಯ ಬುಡಕ್ಕೆ ಮುಂದೂಡಲು ಸೂð ಮಾದರಿಯನ್ನು ಬಳಸಿದ್ದಾರೆ. ಅಂತೆಯೇ ಬಿಸಿನೀರಿಗಾಗಿ ನೀರು ಹೊರಹೋಗುವ, ಒಳ ಬರುವ ಎರಡು ಪ್ರತ್ಯೇಕ ಪ್ರವೇಶಿಕೆಗಳನ್ನು ನೀಡಿದ್ದಾರೆ. ತಣ್ಣೀರು ಬರಲು ಟ್ಯಾಂಕ್‌ನಿಂದ ನೇರ ಸಂಪರ್ಕ ನೀಡಿ ಬಿಸಿ ನೀರು ಇನ್ನೊಂದು ಕೊಳವೆ ಮೂಲಕ ಹೋಗುವ ವ್ಯವಸ್ಥೆಯಿದೆ. ಟ್ಯಾಂಕ್‌ ಇಲ್ಲದಿದ್ದ ಮನೆ ಗಳಿಗೆ ನೀರು ತುಂಬಿಸುವ ಪ್ರತ್ಯೇಕ ವ್ಯವಸ್ಥೆಯೂ ಇದೆ.

ಆವಿಷ್ಕಾರ
ಕೋಟೇಶ್ವರದ ಸರ್ವಿಸ್‌ ರಸ್ತೆ ಬದಿ ಸಣ್ಣ ವೆಲ್ಡಿಂಗ್‌ ಶಾಪ್‌ ಹೊಂದಿರುವ ಆಚಾರ್ಯರು ತಮ್ಮ ವೆಲ್ಡಿಂಗ್‌ ವೃತ್ತಿಗಿಂತ ಹೆಚ್ಚು ಸಮಯ ಇಂತಹ ಸಂಶೋಧನೆಗೆ ಮೀಸಲಿಡುತ್ತಾರೆ.

ಇದನ್ನೂ ಓದಿ:ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಗರಂ ಆದ ಹಾಲಾಡಿ ಶ್ರೀನಿವಾಸ ಶೆಟ್ಟಿ

ರೈಲು ತ್ಯಾಜ್ಯ ವಿಲೇಗೆ ಆವಿಷ್ಕಾರ
ಬೆಂಗಳೂರಿಗ ಹೋಗಿದ್ದಾಗ ರೈಲಿನಲ್ಲಿ ಪ್ರಯಾಣಿಕರು ಮಾಡಿದ ತ್ಯಾಜ್ಯ ಹಳಿ ಮೇಲೆ ಬೀಳುವುದು ಕಂಡರು. ನಿಲ್ದಾಣಗಳಲ್ಲಿ ದುರ್ವಾಸನೆಗೆ ಕಾರಣವಾಗುವ, ಮೆಕಾನಿಕ್‌ಗಳ್ಳೋ ಯಾರಾದರೂ ರೈಲಿನ ಅಡಿಭಾಗಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಅಶುಚಿ ವಾತಾವರಣ ಇರುವುದನ್ನು ಮನಗಂಡರು. ಅದಕ್ಕಾಗಿ ಒಂದು ಉಪಕರಣ ಕಂಡುಹಿಡಿದರು. ಪ್ರತಿ 80 ಕಿ.ಮೀ.ಗೊಂದು ಶೌಚಗುಂಡಿ ಮಾದರಿಯಲ್ಲಿ ರೈಲು ಹಳಿ ಪಕ್ಕದಲ್ಲಿ ನಿರ್ಮಾಣ. ಅದಕ್ಕೆ ರಿಲೀಸರ್‌ ಮೂಲಕ ತ್ಯಾಜ್ಯ ಸುರಿಯುವ ಸ್ವಯಂಚಾಲಿತ ವ್ಯವಸ್ಥೆ ಮಾಡಿದ್ದರು. ಇದನ್ನು ರೈಲ್ವೆ ಇಲಾಖೆ ಮೆಚ್ಚುಗೆ ಸೂಚಿಸಿತ್ತು.

ಕಡಿಮೆ ಇಂಧನ
ಈಗಾಗಲೇ ಸತತ ತಯಾರಿ ಮೂಲಕ ಈಗ ಐದನೇ ಒಲೆ ತಯಾರಿಸಿದ್ದಾರೆ. ಪ್ರತಿ ಸಲ ಗ್ರಾಹಕರಿಂದ ಬಂದ ಮಾಹಿತಿ ಮೇರೆಗೆ ಬದಲಾವಣೆ ಮಾಡಿಕೊಂಡಿದ್ದಾರೆ. ಹೊಗೆ ಎತ್ತರಕ್ಕೆ ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗ್ರಾಹಕರು ಹೇಳುವಂತೆ ಶೇ.25ರಷ್ಟು ಇಂಧನ ಸಾಕಾಗುತ್ತದೆ. ಅಂದರೆ ಶೇ.75 ಇಂಧನ ಉಳಿತಾಯವಾಗುತ್ತದೆ. ಹೋಟೆಲ್‌, ಮನೆ, ಕಾರ್ಖಾನೆಗಳಲ್ಲಿ ಬಳಕೆಗೆ ಬೇಡಿಕೆಯಿದೆ.

ಹೊಸತರ ಕಡೆಗೆ ತುಡಿತ
4 ತಿಂಗಳ ಸತತ ಪರಿಶ್ರಮದಿಂದ ಮಿತ ಇಂಧನದ ಈ ಒಲೆ ಸಿದ್ಧವಾಗಿದೆ. ಪ್ರಾಯೋಗಿಕವಾಗಿ ಅನೇಕ ಒಲೆಗಳನ್ನು ಮಾಡಿದ್ದು ಬಳಿಕ ಮಾರ್ಪಾಡುಗಳನ್ನೂ ಮಾಡಿದ್ದೇನೆ. ಇಂಧನ ಬೆಲೆ ಏರಿದೆ ಎಂದು ಬೊಬ್ಬೆ ಹಾಕುವುದಕ್ಕಿಂತ ಅದಕ್ಕೆ ಪರಿಹಾರ ಹೇಗೆ ಎಂದು ಯೋಚಿಸುವುದು ಹೆಚ್ಚು ಪ್ರಸ್ತುತ ಎನಿಸಿತು.-ಕೃಷ್ಣಯ್ಯ ಆಚಾರ್ಯ ಕೂರಾಡಿ, ಕೋಟೇಶ್ವರ

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

5(1

Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.