![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Sep 30, 2021, 4:59 AM IST
ಬೆಳ್ತಂಗಡಿ: ಕೃಷಿ ಚಟುವಟಿಕೆಗೆ ಕಾಡಾನೆಗಳು ಬಹುದೊಡ್ಡ ತಲೆನೋವಾಗಿ ಪರಿಣಮಿಸಿವೆ. ಇದೇವೇಳೆ ಅರಣ್ಯ ಇಲಾಖೆಗೂ ತನ್ನ ನರ್ಸರಿಯನ್ನು ಕಾಡಾನೆಗಳಿಂದ ಸಂರಕ್ಷಿಸಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ!
ಮುಂಡಾಜೆ, ಚಿಬಿದ್ರೆ, ಚಾರ್ಮಾಡಿ, ತೋಟತ್ತಾಡಿ, ನೆರಿಯ, ಚಾರ್ಮಾಡಿ ಪರಿಸರದಲ್ಲಿ ನಿರಂತರವಾಗಿ ಕಾಣಿಸಿ ಕೊಳ್ಳುತ್ತಿರುವ ಆನೆಗಳು ಅಡಿಕೆ, ತೆಂಗು, ಬಾಳೆ ಕೃಷಿ ನೆಲಸಮ ಮಾಡುತ್ತಿವೆ. ಮಂಗಳವಾರ ತಡರಾತ್ರಿ ಮುಂಡಾಜೆ ಪರಿಸರದಲ್ಲಿ ದಾಳಿ ಮುಂದುವರಿಸಿದ ಆನೆಗಳು ಅಪಾರ ಪ್ರಮಾಣದ ಕೃಷಿ ಹಾನಿ ಉಂಟು ಮಾಡಿವೆ.
ದುಂಬೆಟ್ಟು ಪರಿಸರದ ಸುಬ್ರಾಯ ಫಡ್ಕೆ, ಸುನಂದಾ ಪಟವರ್ಧನ್, ಸಚಿನ್ ಭಿಡೆ, ಉಲ್ಲಾಸ್ ಭಿಡೆ, ಲತಾ ಭಿಡೆ ಮೊದಲಾದವರ ತೋಟಗಳಲ್ಲಿ ಅಪಾರ ಪ್ರಮಾಣದಲ್ಲಿ ಬಾಳೆ, ಅಡಿಕೆ ಗಿಡ ಹಾಗೂ ತೆಂಗಿನ ಮರಗಳನ್ನ ನೆಲಸಮ ಮಾಡಿದೆ. ಸೋಮವಾರ ರಾತ್ರಿ ಸಮೀಪದ ಚಿಬಿದ್ರೆ ಗ್ರಾಮದಲ್ಲಿ ಕೃಷಿ ಹಾನಿ ಉಂಟುಮಾಡಿದ್ದವು.
ಇದನ್ನೂ ಓದಿ:ಹತ್ತು ಸಾವಿರ ಮೆಗಾವ್ಯಾಟ್ ಉತ್ಪಾದನ ಗುರಿಯ ನೂತನ ಇಂಧನ ನೀತಿ: ಸುನಿಲ್
ಕಳೆದ ಒಂದು ವಾರದಿಂದ ದುಂಬೆಟ್ಟು, ಕಜೆ, ನಳೀಲು ಮೊದಲಾದ ಕಡೆ ಕಾಡಾನೆಗಳು ನಿರಂತರ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಕೃಷಿ ಚಟುವಟಿಕೆ ಹಾಳು ಮಾಡಿವೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಮುಂಜಾಗ್ರತೆ ಕ್ರಮ ಕೈಗೊಳ್ಳ ಬೇಕೆಂದು ಕೃಷಿಕರು ಆಗ್ರಹಿಸಿದ್ದಾರೆ.
ಮುಂಡಾಜೆಯಲ್ಲಿ ನರ್ಸರಿ ಧ್ವಂಸ
ರಾಷ್ಟ್ರೀಯ ಹೆದ್ದಾರಿ 73ಕ್ಕೆ ತಾಗಿಕೊಂಡಿರುವ ಅರಣ್ಯ ಇಲಾಖೆಗೆ ಸಂಬಂಧಿಸಿದ ಮುಂಡಾಜೆ ಕಾಪು ನರ್ಸರಿಯಲ್ಲಿ ಮುಂದಿನ ವರ್ಷಕ್ಕೆ ವಿತರಣೆಗೆ ಸಿದ್ಧಗೊಳಿಸಿದ್ದ ಗಿಡಗಳನ್ನು ಕಾಡಾನೆಗಳು ಹಾನಿಗೊಳಿಸಿವೆ.
ಗಿಡಗಳ ರಕ್ಷಣೆಗೆ ಹಾಕಲಾಗಿದ್ದ ಶೆಡ್ ಅನ್ನು ಮುರಿದು ಲಕೋಟೆಗಳಲ್ಲಿ ತುಂಬಲಾಗಿದ್ದ ಮಣ್ಣು ಹಾಗೂ ನಾಟಿ ಮಾಡಿದ ಗಿಡಗಳನ್ನು ಧ್ವಂಸಗೊಳಿಸಿವೆ.ಉಪ ವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ಸಿಬಂದಿ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.