ಕುಶಲಕರ್ಮಿಗಳು, ನೇಕಾರರ ಕರಕುಶಲ ವಸ್ತುಗಳ ಮಾರಾಟಕ್ಕೆ ಫ್ಲಿಪ್ ಕಾರ್ಟ್ “ಸಮರ್ಥ್’ ಯೋಜನೆ
Team Udayavani, Sep 30, 2021, 3:51 PM IST
ಬೆಂಗಳೂರು: ಭಾರತದ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆಯಲ್ಲೊಂದಾದ ಫ್ಲಿಪ್‌ಕಾರ್ಟ್ ತನ್ನ 8 ನೇ ಆವೃತ್ತಿಯ ಬಿಗ್ ಬಿಲಿಯನ್ ಡೇಸ್ ಗೆ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಫ್ಲಿಪ್‌ಕಾರ್ಟ್ ಸಮರ್ಥ್ ಯೋಜನೆಯಡಿ ಕುಶಲಕರ್ಮಿಗಳು, ನೇಕಾರರು ಮತ್ತು ಕರಕುಶಲ ತಯಾರಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರು ತಮ್ಮ ಜೀವನೋಪಾಯ ಮತ್ತು ವ್ಯವಹಾರವನ್ನು ಬೆಳವಣಿಗೆ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ.
ಕುಶಲಕರ್ಮಿಗಳು ಮತ್ತು ನೇಕಾರರು ಹಬ್ಬದ ಸೀಸನ್ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರ ನೆಲೆಯನ್ನು ತಲುಪುವ ನಿಟ್ಟಿನಲ್ಲಿ ‘ಆರ್ಟ್ ಫಾರ್ಮ್‌ಸ್ ಆಫ್ ಇಂಡಿಯಾ ಎಂಬ ವಿನೂತನವಾದ ಪರಿಕಲ್ಪನೆಯಡಿಯಲ್ಲಿ ವಿಶೇಷವಾದ ಉತ್ಪನ್ನಗಳನ್ನು ಸಂಗ್ರಹಿಸಲಾಗಿದೆ.
ಸೇವೆ ಲಭ್ಯವಿಲ್ಲದವರಿಗೆ ಸೇವೆಯನ್ನು ಕಲ್ಪಿಸುವ, ದೇಶೀಯ ಸಮುದಾಯಗಳಿಗೆ ಸುಸ್ಥಿರವಾದ ಮತ್ತು ಅಂತರ್ಗತವಾದ ವೇದಿಕೆಯನ್ನು ನಿರ್ಮಿಸುವ ಉದ್ದೇಶದಿಂದ ಈ ಫ್ಲಿಪ್‌ಕಾರ್ಟ್ ಸಮರ್ಥ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಸರ್ಕಾರಿ ಸಂಸ್ಥೆಗಳು ಹಾಗೂ ಜೀವನೋಪಾಯ ಕಲ್ಪಿಸುವ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಕಳೆದ ವರ್ಷದಿಂದ ಈ ಕಾರ್ಯಕ್ರಮದಡಿ ಮಾರಾಟದಲ್ಲಿ 7 ಪಟ್ಟು ಹೆಚ್ಚಾಗಿದೆ. 9.50 ಲಕ್ಷಕ್ಕೂ ಹೆಚ್ಚು ಜೀವನೋಪಾಯಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಕಳೆದ ವರ್ಷ ಫ್ಲಿಪ್‌ಕಾರ್ಟ್‌ನ ಹಬ್ಬದ ಸೀಸನ್‌ನ ಭಾಗವಾಗಿದ್ದ ಕುಶಲಕರ್ಮಿಗಳು ತಮ್ಮ ಆದಾಯದಲ್ಲಿ 2.5 ಪಟ್ಟು ಹೆಚ್ಚಳ ಮಾಡಿಕೊಂಡಿರುವುದು ಗಮನಾರ್ಹವಾದ ಬೆಳವಣಿಗೆಯಾಗಿದೆ.
ಈ ವರ್ಷ, ‘ಆರ್ಟ್ ಫಾರ್ಮ್‌ಸ್ ಆಫ್ ಇಂಡಿಯಾ ದೇಶಾದ್ಯಂತ ಗ್ರಾಹಕರಿಗೆ ಉತ್ಪನ್ನಗಳನ್ನು ಪೂರೈಕೆ ಮಾಡಲಿದೆ. ಇದರ ಮೂಲಕ ಅವರಿಗೆ ಶ್ರೀಮಂತವಾದ ಸಾಂಸ್ಕೃತಿಕ ಪರಂಪರೆ ಮತ್ತು ಅಧಿಕ ಪ್ರಾದೇಶಿಕ ಮಹತ್ವವನ್ನು ನೀಡಲಿದೆ.
ಇದನ್ನೂ ಓದಿ:ಹನಿವೆಲ್ ಬಿಡುಗಡೆ ಮಾಡಿದೆ ಎಸಿ ಕಂಟ್ರೋಲರ್, ವಿಡಿಯೋ ಕಣ್ಗಾವಲು ಹಾಗೂ ಹೊಗೆ ಪತ್ತೆ ಸಾಧನ
ಆರ್ಟ್ ಫಾರ್ಮ್ ಆಫ್ ಇಂಡಿಯಾ 28 ಉತ್ಪನ್ನಗಳನ್ನು ಹೊಂದಿದೆ. ದೇಶದ ಪಶ್ಚಿಮ ಭಾಗದ ಅತಿದೊಡ್ಡ ಎಂಪೋರಿಯಂಗಳಲ್ಲಿ ಒಂದಾಗಿರುವ ಗಾರ್ವಿ ಗರ್ಜರಿಯಂತಹ ಪಾಲುದಾರರಿಂದ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ರಾಜ್ಯಾದ್ಯಂತ 2,000 ಕ್ಕೂ ಹೆಚ್ಚು ಕುಶಲಕರ್ಮಿಗಳ ಮೇಲೆ ಪರಿಣಾಮ ಬೀರುತ್ತದೆ. ಬುಡಕಟ್ಟು ಕಲ್ಯಾಣ ಸಚಿವಾಲಯದಿಂದ ಬುಡಕಟ್ಟು ಸಮುದಾಯದ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಉತ್ತೇಜಿಸುವುದು ಮತ್ತು ಮಾರುಕಟ್ಟೆ ಒದಗಿಸುವ ಹೊಣೆಗಾರಿಕೆಯನ್ನು ಹೊಂದಿದೆ. ದೇಶಾದ್ಯಂತದ 3,50,000 ಆದಿವಾಸಿಗಳ ಮೇಲೆ ಇದು ಉತ್ತಮ ಪರಿಣಾಮ ಬೀರುತ್ತದೆ
ಇದರ ಜೊತೆಗೆ, ಫ್ಲಿಪ್‌ಕಾರ್ಟ್ ಕ್ಯಾಮೆರಾ ಮೂಲಕ ಫ್ಲಿಪ್‌ಕಾರ್ಟ್ 3ಡಿ ಮತ್ತು ಎಆರ್ ಸಾಮರ್ಥ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಇದರ ಮೂಲಕ ಗ್ರಾಹಕರು ‘ಆರ್ಟ್ ಫಾರ್ಮ್‌ಸ್ ಆಫ್ ಇಂಡಿಯಾದಿಂದ ಉತ್ಪನ್ನಗಳನ್ನು ಶಾಪಿಂಗ್ ಮಾಡಬಹುದು. ಇದರ ಮೂಲಕ ಗ್ರಾಹಕರು ಆಯ್ದ ಕರಕುಶಲ ವಸ್ತುಗಳೊಂದಿಗೆ ಹ್ಯಾಂಡ್‌ಬ್ಯಾಗ್ ಮತ್ತು ಗೃಹಾಲಂಕಾರ ಉತ್ಪನ್ನಗಳ ಬಗ್ಗೆ ಸಂವಹನ ನಡೆಸಬಹುದು ಅಥವಾ ಅವುಗಳನ್ನು ತಮ್ಮ ಜಾಗದಲ್ಲಿಯೇ ಕುಳಿತು ವೀಕ್ಷಿಸಿ ಅವುಗಳ ಖರೀದಿ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.