ಐರೋಪ್ಯ ವಿಜ್ಞಾನಿಗಳ ಪ್ರಯೋಗ ಡ್ರೈ ಇಮ್ಮರ್ಷನ್ ಸ್ಟಡಿ
ಚಂದ್ರನ ಪರಿಸರ ಮಹಿಳೆಯರ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ
Team Udayavani, Oct 1, 2021, 3:50 PM IST
ಐರೋಪ್ಯ ಒಕ್ಕೂಟದ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ), “ಡ್ರೈ ಇಮ್ಮರ್ಷನ್ ಸ್ಟಡಿ’ ಎಂಬ ಹೊಸ ಅಧ್ಯಯನ ಆರಂಭಿಸಿದೆ. ಫ್ರಾನ್ಸ್ ನಲ್ಲಿನ ಟೌಲೌಸ್ ಎಂಬಲ್ಲಿರುವ ಎಂಇಡಿಇಎಸ್ ಸ್ಪೇಸ್ ಕ್ಲಿನಿಕ್‌ನಲ್ಲಿ ಈ ಪ್ರಯೋಗವನ್ನು ಸೆ. 21ರಿಂದಲೇ ಆರಂಭಿಸಲಾಗಿದೆ. ಈ ಪ್ರಯೋಗಕ್ಕೆ ಒಳಗಾದ ಆಯ್ದ 20 ಮಹಿಳಾ ಯುವ ವಿಜ್ಞಾನಿಗಳು “ಐದು ದಿನಗಳವರೆಗೆ ನೀರಿನಲ್ಲಿ ಅರ್ಧ ಮುಳುಗಿ ನಿಂತಿರಬೇಕಾದ ಪ್ರಯೋಗವಿದು. ಯಾಕೆ ಈ ಪ್ರಯೋಗ, ಇದರ ಲಾಭವೇನು
ಎಂಬುದರ ಮಾಹಿತಿ ಇಲ್ಲಿದೆ.
ಹೇಗಿರುತ್ತೆ ಈ ಪ್ರಯೋಗ?
ಒಬ್ಬ ಮನುಷ್ಯ ಹಿಡಿಸುವಷ್ಟು ಕಂಟೈನರ್‌ನಲ್ಲಿ ನೀರು ತುಂಬಿ ಅದರಲ್ಲಿ ಪ್ರಯೋಗಕ್ಕೆ ಗುರಿಯಾಗಲು ಒಪ್ಪಿಕೊಂಡಿರುವ ಮಹಿಳೆಯರನ್ನು ಇಳಿಸಲಾಗುತ್ತದೆ. ಸೊಂಟದವರೆಗೆ ಮಾತ್ರ ತಮ್ಮ ದೇಹವನ್ನು ಅವರು ಮುಳುಗಿಸಬೇಕಿದ್ದು, ಉಳಿದರ್ಧ ದೇಹವನ್ನು ಕಂಟೈನರ್‌ನಿಂದ ಹೊರಗೆ ಇರುವಂತೆ ಆ ನೀರಿನ ಒತ್ತಡದಲ್ಲಿ ತಮ್ಮ ಕಾಲುಗಳು ತೇಲಾಡುತ್ತಿರುವಂತೆ ನೋಡಿಕೊಳ್ಳಬೇಕು. ಅವರ ಕಾಲುಗಳಿಗೆ ವಾಟರ್ ಪ್ರೂಫ್ ಉಡುಗೆ ಹಾಕಿರುವುದರಿಂದ ಚರ್ಮಕ್ಕೇನೂ ತೊಂದರೆ ಇರುವುದಿಲ್ಲ.
ಏಕೆ ಈ ಪ್ರಯೋಗ?
ಭೂಮಿಯ ಉಪಗ್ರಹವಾದ ಚಂದ್ರ ಮತ್ತು ಅದನ್ನು ದಾಟಿರುವ ಅಂತರಿಕ್ಷವನ್ನು ಅಧ್ಯಯನ ಮಾಡುವ ಉದ್ದೇಶದಿಂದ ಪುರುಷರು ಮತ್ತು ಮಹಿಳೆಯರುಳ್ಳ ತಂಡವೊಂದನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಿರ್ಧರಿಸಿದೆ. ಈ ಯೋಜನೆಯ ಹೆಸರು ಆರ್ಟೆಮಿಸ್. ಈಗಾಗಲೇ ಅನೇಕ ಪುರುಷ ಖಗೋಳ ವಿಜ್ಞಾನಿಗಳು ಚಂದ್ರನ ಮೇಲೆ ಇಳಿದು ಬಂದಿದ್ದಾರೆ.
ಆದರೆ, ಮಹಿಳಾ ವಿಜ್ಞಾನಿಗಳು ಅಲ್ಲಿಗೆ ಹೋಗಿಲ್ಲ. ಹಾಗಾಗಿ, ಚಂದ್ರನ ಪರಿಸರ ಮಹಿಳೆಯರ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯಲು ಈ ಅಧ್ಯಯನ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.