ಪಬ್ಲಿಸಿಟಿ ಹುಚ್ಚು| ಕುಕ್ಕರ್ ಜೊತೆ ಮದುವೆಯಾದ ಭೂಪ
Team Udayavani, Oct 1, 2021, 4:01 PM IST
ಪ್ರಚಾರ ಪಡೆಯಲೆಂದು ಜನರು ನಾನಾ ಬಗೆಯ ಸರ್ಕಸ್ ಮಾಡುವುದುಂಟು. ಅದರಲ್ಲೂ ಸೋಷಿಯಲ್ ಮೀಡಿಯಾಗಳು ಸಕ್ರಿಯವಾದಾಗಿನಿಂದಲೂ ಕೆಲವೊಂದಿಷ್ಟು ಜನರಿಗೆ ಪಬ್ಲಿಸಿಟಿ ಹುಚ್ಚು ಹೆಚ್ಚಾಗಿದೆ ಎಂದರೆ ತಪ್ಪಲ್ಲ. ಈ ಮಾತು ಯಾಕೆ ಹೇಳುತ್ತಿದ್ದೇವೆ ಎಂದರೆ, ಇಲ್ಲೊಬ್ಬ ಭೂಪ ರೈಸ್ ಕುಕ್ಕರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ.
ಹೌದು, ಇಂಡೋನೇಷಿಯಾದ ಖೋರಿಲ್ ಅಮನ್ ಎಂಬಾತ ರೈಸ್ ಕುಕ್ಕರ್ ಜೊತೆ ಮದುವೆಯಾಗಿದ್ದಾನೆ. ಪಿಲಿಪ್ಸ್ ಕಂಪನಿಗೆ ಸೇರಿದ ಕುಕ್ಕರ್ ಗೆ ತಾಳಿ ಕಟ್ಟಿದ್ದಾನೆ. ಮದುಮಗನಂತೆ ಡ್ರೆಸ್ ಮಾಡಿಕೊಂಡಿರುವ ಆತ, ಕುಕ್ಕರನ್ನು ಮದುಮಗಳಂತೆ ಶೃಂಗರಿಸಿದ್ದಾನೆ. ಕಾನೂನು ಬದ್ಧವಾಗಿ ಮದುವೆಯಾಗುತ್ತಿದ್ದೇನೆ ಎಂಬುದನ್ನು ಬಿಂಬಿಸಲು ಕೆಲವೊಂದು ಹಾಳೆಗಳ ಮೇಲೆ ಸಹಿ ಹಾಕಿದ್ದಾನೆ. ಮದುವೆ ಬಳಿಕ ಕುಕ್ಕರ್ ಗೆ ಮುತ್ತು ಕೊಟ್ಟಿದ್ದಾನೆ.
Putih, pendiam, pintar memasak, idaman sekali ? pic.twitter.com/vih2KGkAuz
— RJ (@lagidirumah) September 23, 2021
ತನ್ನ ಮದುವೆ ಬಗ್ಗೆ ಹೇಳಿಕೊಂಡಿರುವ ಆತ ಇದು ಬೆಳ್ಳಗಿದೆ, ಚನ್ನಾಗಿ ರೈಸ್ ಮಾಡುತ್ತೆ. ಎಲ್ಲದಕ್ಕಿಂತಲೂ ಮುಖ್ಯವಾದ ವಿಷಯ ಏನೆಂದರೆ ಅದು ಮಾತಾಡುವುದಿಲ್ಲ ಎಂದಿದ್ದಾನೆ. ನಾಲ್ಕು ದಿನಗಳ ಬಳಿಕ ನನ್ನ ಹೆಂಡತಿಗೆ ನಾನು ಡಿವೋರ್ಸ್ ನೀಡಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೊ ಹಾಕಿದ್ದಾನೆ. ಅವಳಿಗೆ ರೈಸ್ ಮಾಡೋದನ್ನು ಬಿಟ್ಟು ಏನೂ ಗೊತ್ತಿಲ್ಲ ಎಂದು ಕಾರಣ ಹೇಳಿದ್ದಾನೆ.
ಈತನ ಹುಚ್ಚಾಟದ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈತನ ಪಬ್ಲಿಸಿಟಿ ಗೀಳಿನ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
ಈ ರೀತಿಯ ಘಟನೆ ನಡೆದಿದ್ದು ಇದೆ ಮೊದಲಲ್ಲ. ಈ ಮೊದಲು ರಷ್ಯಾ ಮೂಲದ 24 ವರ್ಷದ ಯುವತಿಯೋರ್ವಳು ಬ್ರೀಫ್ಕೇಸ್ ಜೊತೆ ಮದುವೆಯಾಗಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.