ಪಕ್ಷದಿಂದ ಪಕ್ಷಕ್ಕೆ ಹಾರುವ ಗೋವಾದ ರಾಜಕಾರಣಿಗಳಿಗೆ ರೋಗ ಬಂದಿದೆ: ಸಂಜಯ್ ರಾವುತ್
Team Udayavani, Oct 1, 2021, 5:59 PM IST
ಪಣಜಿ: ಒಂದು ಪಕ್ಷದಿಂದ ಚುನಾವಣೆಯಲ್ಲಿ ಸ್ಫರ್ಧಿಸಿ ಜಯಗಳಿಸಿ ನಂತರ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡುವ ಗೋವಾದ ರಾಜಕಾರಣಿಗಳಿಗೆ ರೋಗ ಬಂದಿದೆ. ನಾಚಿಕೆಯಿಲ್ಲದೆಯೇ ಅಧಿಕಾರಕ್ಕಾಗಿ ಮತ್ತು ಮಂತ್ರಿ ಸ್ಥಾನಕ್ಕಾಗಿ ಪಕ್ಷಾಂತರ ಮಾಡುವ ಪದ್ಧತಿಯನ್ನು ಜನತೆಯೇ ಈ ಬಾರಿ ನಿಲ್ಲಿಸಬೇಕು. ಈ ಪದ್ಧತಿಯನ್ನು ನಿಲ್ಲಿಸುವ ಯೋಜನೆ ಶಿವಸೇನೆಯ ಬಳಿಯಿದೆ. ಪ್ರಸಕ್ತ ಬಾರಿ ಶಿವಸೇನೆಯು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆಯೇ ಸ್ವಂತ ಬಲದ ಮೇಲೆ ಚುನಾವಣೆಯಲ್ಲಿ ಸ್ಫರ್ಧಿಸಲಿದೆ ಎಂದು ಶಿವಸೇನೆಯ ಪ್ರಮುಖ ಹಾಗೂ ಗೋವಾ ಪ್ರಭಾರಿ ಸಂಜಯ್ ರಾವುತ್ ನುಡಿದರು.
ಪಣಜಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು- ರಾಜ್ಯದಲ್ಲಿ ಪ್ರಸಕ್ತ ಬಾರಿ ಮೊದಲಿಗಿಂದ ಹೆಚ್ಚಿನ ದಾಳಗಳು ಉರುಳಲಿದೆ. ಪ್ರಸಕ್ತ ಬಾರಿ ಗೋವಾದಲ್ಲಿ ತೃಣಮೂಲದ ಉದಯವಾಗಿದೆ. ಗೋವಾಕ್ಕೆ ಹೊಸ ಬೆಳಕು ಬಂದಿದೆ ಎಂದೇ ಹೇಳಲಾಗುತ್ತಿದೆ. ಇದಕ್ಕೂ ಮುನ್ನ ಯಾವತ್ತೂ ಗೋವಾ ರಾಜ್ಯ ಬೆಳಕನ್ನು ಕಂಡಿರಲಿಲ್ಲವೇ…? ಎಂದು ಸಂಜಯ ರಾವುತ್ ಟೀಕಾಪ್ರಹಾರ ನಡೆಸಿದರು.
ಇದನ್ನೂ ಓದಿ:ಮಾಸ್ಟರ್ ಪ್ಲಾನ್ ಗೂ ಮೊದಲು ಜನ ಸ್ಪಂದನೆಗೆ ಆದ್ಯತೆ: ಸಿಎಂ ಬಸವರಾಜ್ ಬೊಮ್ಮಾಯಿ
ಗೋವಾ ವಿಧಾನಸಭಾ ಚುನಾವಣೆಯಲ್ಲಿ 22 ರಿಂದ 25 ಕ್ಷೇತ್ರಗಳಲ್ಲಿ ಸ್ಫರ್ಧಿಸಲು ಶಿವಸೇನೆ ನಿರ್ಣಯ ತೆಗೆದುಕೊಂಡಿದೆ. ಗೋವಾದ ಅಸ್ಥಿತ್ವ ಹಾಗೂ ಜನತೆಯ ಧ್ವನಿಯಾಗಿರಲು ಜನತೆ ಶಿವಸೇನೆಯನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಬೇಕು. ಮಹಾರಾಷ್ಟ್ರದಲ್ಲಿ ಶಿವಸೇನೆಯ ಸರ್ಕಾರವಿದೆ, ಉತ್ತಮ ಆಡಳಿತ ನೀಡುತ್ತಿದೆ, ಇದನ್ನು ಗೋವಾದ ಜನತೆ ಕೂಡ ಕಂಡಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ,ಕಾಂಗ್ರೇಸ್,ರಾಷ್ಟ್ರವಾಧಿ ಕಾಂಗ್ರೇಸ್ ಪಕ್ಷಗಳ ಮೈತ್ರಿ ಮಾಡಿಕೊಂಡಿದ್ದರೂ ಕೂಡ ಈ ಮೈತ್ರಿಗೂ ಗೋವಾ ವಿಧಾನಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಸಂಜಯ ರಾವುತ್ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.