ಕಬ್ಬಿನ ಬಾಕಿ ಹಣ ಪಾವತಿಗೆ ಎರಡು ದಿನ ಗಡುವು ನೀಡಿದ ಸಚಿವ ಮುನೇನಕೊಪ್ಪ
Team Udayavani, Oct 1, 2021, 6:54 PM IST
ಬೆಂಗಳೂರು: ಸಕ್ಕರೆ ಉದ್ಯಮವನ್ನು ಸಂರಕ್ಷಿಸಲು ಸರ್ಕಾರ ಬದ್ಧವಾಗಿದೆ. ಆದರೆ, ರೈತ ಹಿತರಕ್ಷಣೆ ಸರ್ಕಾರದ ಮೊದಲ ಅದ್ಯತೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಬ.ಪಾಟೀಲ ಮುನೇನಕೊಪ್ಪ ಹೇಳಿದರು.
ಸಚಿವರು ಇಂದು ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು/ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಜೊತೆ ಸಭೆ ನಡೆಸಿದರು. ಸರ್ಕಾರದ ನೀತಿ ನಿಯಮಗಳನ್ನು ಪಾಲನೆ ಮಾಡಿ ಉದ್ಯಮ ನಡೆಸುವಂತೆ ಕಾರ್ಖಾನೆಗಳಿಗೆ ತಾಕೀತು ಮಾಡಿದರು.
ಪ್ರಸ್ತಕ ಸಾಲಿನಲ್ಲಿ ರೈತರ ಕಬ್ಬಿನ ಹಣ ಪಾವತಿ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು ಇನ್ನೆರಡು ದಿನಗಳಲ್ಲಿ( ಆಕ್ಟೋಬರ್ 03 ) ಹಣ ಪಾವತಿ ಮಾಡಬೇಕು. ತಪ್ಪಿದಲ್ಲಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಶಿಸ್ತು ಕ್ರಮ ಕೈಗೊಳ್ಳಲಿದೆ. ಈಗಾಗಲೇ ಬಸವೇಶ್ವರ ಶುಗರ್, ಕಾರಚೋಳ, ವಿಜಯಪುರ ಜಿಲ್ಲೆ ಹಾಗೂ ಕೋರ್ ಗ್ರೀನ್ ಶುಗರ್, ಶಹಾಪುರ ತಾಲ್ಲೂಕು, ಯಾದಗಿರಿ ಜಿಲ್ಲೆ. ಇವರೆಡು ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ವಸೂಲಾತಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಉಳಿದ ಕಾರ್ಖಾನೆಗಳು ಇನ್ನೆರಡು ದಿನಗಳಲ್ಲಿ( ಆಕ್ಟೋಬರ್ 03) ರೈತರಿಗೆ ಹಣ ಪಾವತಿಸಿದ್ದರೆ ಜಿಲ್ಲಾಧಿಕಾರಿಗಳ ಮೂಲಕ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಾಕೀತು ಮಾಡಿದರು.
ಸಭೆಯಲ್ಲಿ 2020-21 ನೇ ಹಂಗಾಮಿನ ಮತ್ತು ಹಿಂದಿನ ಸಾಲುಗಳ ಕಬ್ಬು ಬಿಲ್ಲು ಬಾಕಿ ಪಾವತಿ, ಕಬ್ಬು ಅರೆಯುವ ಹಂಗಾಮವನ್ನು ಪ್ರಾರಂಭಿಸಲು ಪೂರ್ವಸಿದ್ದತಾ ಯೋಜನೆಗಳು, ಕಾರ್ಖಾನೆಗಳ ಕಾರ್ಯ ವ್ಯಾಪ್ತಿಯಲ್ಲಿ ದೊರೆಯಬಹುದಾದ ಕಬ್ಬಿನ ಲಭ್ಯತೆಯ, ಕಬ್ಬು ಸರಬರಾಜು ಸಂಬಂಧ ರೈತರೊಂದಿಗೆ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದ, ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ, ನ್ಯಾಯಯುತ ಮತ್ತು ಲಾಭದಾಯಕ ಬೆಲೆಯ (ಎಫ್.ಆರ್.ಪಿ) ಬಗ್ಗೆ, ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಎಥನಾಲ್ ಹಾಗೂ ಕಬ್ಬಿನ ಉಪ-ಉತ್ಪಾದಕಗಳ ಉತ್ಪಾದನಾ ಯೋಜನೆಯ ಪ್ರಗತಿ ಕುರಿತು ಪರಿಶೀಲಿಸಲಾಯಿತು.
ಸಭೆಯಲ್ಲಿ ಈ ಕೆಳಕಂಡ ಕಾರ್ಖಾನೆಗಳು 2020-21ನೇ ಸಾಲಿನಲ್ಲಿ ರೈತರ ಕಬ್ಬಿನ ಬಿಲ್ಲು ಬಾಕಿ ಉಳಿಸಿಕೊಂಡಿರುವುದು ಕಂಡು ಬಂದಿತ್ತು.
ಕ್ರ.ಸಂ. ಕಾರ್ಖಾನೆಗಳ ಹೆಸರು ಬಾಕಿ ಹಣ (ರೂ. ಲಕ್ಷಗಳಲ್ಲಿ)
೧ ಸೋಮೇಶ್ವರ ಎಸ್‌ಎಸ್.ಕೆ. ಲಿಮಿಟೆಡ್, ಬೈಲಹೊಂಗಲ, ಬೆಳಗಾವಿ (69.00 ಲಕ್ಷ ರೂ.)
೨. ಜಮಖಂಡಿ ಶುರ‍್ಸ್ ಲಿ, ಹಿರೆಪಾದಸಲಗಿ, ಜಮಖಂಡಿ, ಬಾಗಲಕೋಟೆ. (105.00 ಲಕ್ಷ ರೂ)
೩. ನಿರಾಣಿ ಶುಗರ್ಸ್ ಲಿ.,ಮುಧೋಳ ತಾ:,ಬಾಗಲಕೋಟೆ. (567.00 ಲಕ್ಷ ರೂ)
೪. ಶ್ರೀ ಸಾಯಿಪ್ರಿಯಾ ಶುರ‍್ಸ್ ಲಿ., ಹಿಪ್ಪರಗಿ, ಬಾಗಲಕೋಟೆ. (415.00 ಲಕ್ಷ ರೂ)
೫. ಬೀದರ ಕಿಸಾನ್ ಸಕ್ಕರೆ ಕಾರ್ಖಾನೆ ಲಿ., ಬೀದರ್. (209.00 ಲಕ್ಷ ರೂ)
೬. ಶ್ರೀ ಬಸವೇಶ್ವರ ಶುರ‍್ಸ್ ಲಿ., ಕಾರಜೋಳ, ವಿಜಯಪುರ. (2211.00 ಲಕ್ಷ ರೂ)
೭. ಕೋರ್ ಗ್ಲೀನ್ ಶುರ‍್ಸ್ ಅಂಡ್ ಫ್ಯೂಎಲ್ಸ್ ಪ್ರೆöÊ. ಲಿ., ಶಹಾಪುರ, ಯಾದಗಿರಿ. (641.00 ಲಕ್ಷ ರೂ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.