ಗಿಡಗಂಟಿಗಳಿಂದ ಆವೃತವಾಗಿ ಪಾಳುಬಿದ್ದ ಕಟ್ಟಡ
ಮಣಿಗೇರಿ: ಸಂಪೂರ್ಣ ಶಿಥಿಲಗೊಂಡ ಅಕ್ಷರ ಕರಾವಳಿ ಸದನ -ನಿರಂತರ ಶಿಕ್ಷಣ ಕೇಂದ್ರದ ಕಟ್ಟಡ
Team Udayavani, Oct 2, 2021, 5:18 AM IST
ವಿಶೇಷ ವರದಿ– ತೆಕ್ಕಟ್ಟೆ : ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಣಿಗೇರಿ ಎಂಬಲ್ಲಿ ಅಕ್ಷರ ಕರಾವಳಿ ಸದನದ ನಿರಂತರ ಶಿಕ್ಷಣ
ಕೇಂದ್ರದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ನಿರ್ವಹಣೆ ಇಲ್ಲದೆ ಸೊರಗಿದೆ.
1994 ಎ.15ರಂದು ಅಂದಿನ ಕುಂದಾಪುರದ ಮಾಜಿ ಶಾಸಕ ಕೆ. ಪ್ರತಾಪ್‌ಚಂದ್ರ ಅವರು ಉದ್ಘಾಟಿಸಿ ಗ್ರಾಮೀಣ ಭಾಗದ ಜನತೆಗೆ ನಿರಂತರ ಸಾಕ್ಷರತ ಶಿಕ್ಷಣ ನೀಡುವ ನಿಟ್ಟಿನಿಂದ ಆರಂಭವಾದ ಈ ಕಟ್ಟಡದ ಮೇಲ್ಛಾವಣಿ ಧರಾಶಾಯಿಯಾಗಿ ಸಂಪೂರ್ಣ ಶಿಥಿಲಗೊಂಡು ಗಿಡಗಂಟಿಗಳಿಂದ ಆವೃತ ವಾಗಿದೆ. ಪ್ರಸ್ತುತ ಇದು ಮಣಿಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿದ್ದು ಅನ್ಯ ಚಟುವಟಿಕೆಗಳ ಆಶ್ರಯ ತಾಣವಾಗಿದೆ.
1992ರಲ್ಲಿ ತೆಂಗಿನ ಗರಿಯ ಚಪ್ಪರದಡಿಯಲ್ಲಿ ಆರಂಭವಾದ ಈ ಕೇಂದ್ರಕ್ಕೆ 1994ರಲ್ಲಿ ಕಟ್ಟಡ ನಿರ್ಮಾಣವಾಗಿ ಕೇಂದ್ರ ಸರಕಾರದ ಸಾಕ್ಷರತ ಆಂದೋಲನದಡಿ ಯಲ್ಲಿ ಪರಿಸರದ ವಯಸ್ಕರಿಗಾಗಿ ರಾತ್ರಿ ಶಾಲೆ (ವಯಸ್ಕರ ಶಿಕ್ಷಣ) ಆರಂಭ ವಾಗಿ ಅನಂತರ ಹಿಂದುಳಿದ ಅನಕ್ಷರಸ್ಥರ ಮಕ್ಕಳಿಗೂ ಕೂಡ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿತ್ತು. ಅನಂತರ ಸ್ಥಳೀಯಸಂಘ ಸಂಸ್ಥೆಗಳ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ಸೇರಿದಂತೆ ಪ್ರತೀ ಶುಕ್ರವಾರ ಭಜನ ಕಾರ್ಯಕ್ರಮ ನಡೆಯುತ್ತಿತ್ತು. ಅನಂತರ ಸಮೀಪದಲ್ಲಿ ಇರುವ ಕಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳು ಸೇರ್ಪಡೆಗೊಂಡಾಗ ಇಲ್ಲಿ ಚಟುವಟಿಕೆ ನಿಂತುಹೋಗಿದೆ.
ಇದನ್ನೂ ಓದಿ:ಸಿಂದಗಿ ಉಪ ಚುನಾವಣೆ : ನಾಜಿಯಾ ಶಕೀಲಾ ಅಂಗಡಿ ಜೆಡಿಎಸ್ ಅಭ್ಯರ್ಥಿ
ಫಲಕದ ಮೂಲ ಸ್ವರೂಪ ಮಾಯ
ಹಿಂದೆ ಬಿದ್ಕಲ್‌ಕಟ್ಟೆ ಮಂಡಲ ಪಂಚಾಯತ್ ಇರುವ ಸಂದರ್ಭ ದಲ್ಲಿ ಮಾಜಿ ಅಧ್ಯಕ್ಷ ಎಂ. ಆನಂದ ಶೆಟ್ಟಿ ಅವರ ಅವಧಿಯಲ್ಲಿ ಸ್ಥಾಪಿತಗೊಂಡ ಈ ಕೇಂದ್ರದಲ್ಲಿ ಕಲಿಕೆ ಚಟುವಟಿಕೆಗೆ ಪೂರಕವಾಗಿ ಗೋಡೆಗೆ ಅಳವಡಿಸಿದ ಕರಿಹಲಗೆ (ಬ್ಲಾಕ್ ಬೋರ್ಡ್) ಹಾಗೂ ವಿವಿಧ ಇಲಾಖೆಯಿಂದ ನಡೆದಿರುವ ಕಾಮಗಾರಿಯ ವಿವರ ಒಳಗೊಂಡಿರುವ ಫಲಕಗಳ ಮೂಲ ಸ್ವರೂಪ ಮಾಯವಾಗಿದೆ.
ಅನುದಾನದ ಕೊರತೆ
ಈ ಹಿಂದೆ ಈ ಶಿಕ್ಷಣ ಕೇಂದ್ರದಲ್ಲಿ ನಿರಂತರ ಕಲಿಕೆ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ ಬದಲಾದ ವ್ಯವಸ್ಥೆಯಲ್ಲಿ ಇದು ಕಡಿಮೆಯಾಗುತ್ತಾ ಬಂದಿದ್ದು, ಕಟ್ಟಡಗಳ ಮೇಲ್ಛಾವಣಿ ಶಿಥಿಲಗೊಂಡಿದೆ. ಇದರ ಬಗ್ಗೆ ಗ್ರಾ.ಪಂ.ನಲ್ಲಿ ಚರ್ಚಿಸಲಾಗಿದೆ. ಆದರೆ ಕಟ್ಟಡ ನಿರ್ವಹಣೆಗೆ ಬೇಕಾಗುವಷ್ಟು ಅನುದಾನದ ಕೊರತೆ ಇರುವುದರಿಂದ ಈ ಹಿಂದೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.
-ರೇಖಾ, ಪಿಡಿಒ,
ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ
Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.