![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 2, 2021, 6:55 AM IST
ಕಟಪಾಡಿ: ಜಿಐ ಮಾನ್ಯತೆ ಯೊಂದಿಗೆ ಪೇಟೆಂಟ್ ಪಡೆದಿರುವ ಮಟ್ಟುಗುಳ್ಳವು ಪ್ರಸ್ತುತ ಋತುವಿನಲ್ಲಿ ಈಗಾಗಲೇ ಮಾರುಕಟ್ಟೆಗೆ ಅಲ್ಪ ಪ್ರಮಾಣ ದಲ್ಲಿ ಬರಲಾರಂಭಿಸಿದ್ದು, ನವರಾತ್ರಿಯ ಸಂದರ್ಭ ಭರಪೂರ ಮಟ್ಟುಗುಳ್ಳ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
ಕಳೆದ ಸಾಲಿನಲ್ಲಿ ಪ್ರಕೃತಿಯ ವಿಕೋಪ ದಿಂದ ಬೆಳೆ ನಾಶ ಕ್ಕೊಳಪಟ್ಟು ನವರಾತ್ರಿಯ ಸಂದರ್ಭ ಮಾರುಕಟ್ಟೆಗೆ ಮಟ್ಟುಗುಳ್ಳ ಪೂರೈಕೆ ಸಾಧ್ಯ ವಾಗಿರಲಿಲ್ಲ.ಈ ಬಾರಿ ಯುವ ಬೆಳೆಗಾರರು ಮಟ್ಟುಗುಳ್ಳವನ್ನು ಬೆಳೆಯಲು ಉತ್ಸುಕ ರಾಗಿದ್ದರು. ಆ ನಿಟ್ಟಿನಲ್ಲಿ ಮಲಿcಂಗ್ ಶೀಟ್, ಸೀಡಿಂಗ್ ಟ್ರೇ, ಕೋಕೋಫಿಟ್‌ಗಳನ್ನು ಮಟ್ಟುಗುಳ್ಳ ಬೆಳೆಗಾರರ ಸಂಘದಲ್ಲಿಯೇ ಖರೀದಿಗೆ ವ್ಯವಸ್ಥೆಗೊಳಿಸಿದೆ. ಸುಮಾರು 210 ಸದಸ್ಯ ಬೆಳೆಗಾರರು ಸುಮಾರು 250 ಎಕರೆ ಪ್ರದೇಶದಲ್ಲಿ ಮಟ್ಟುಗುಳ್ಳ ಬೆಳೆಯುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಸುನಿಲ್ ಡಿ. ಬಂಗೇರ ತಿಳಿಸಿದ್ದರೆ. ನವರಾತ್ರಿಯ ಸಂದರ್ಭ ದಿನವೊಂದಕ್ಕೆ ಸುಮಾರು 500 ಕಿಲೋಗೂ ಮಿಕ್ಕಿ ಮಟ್ಟುಗುಳ್ಳ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದಿದ್ದಾರೆ.
ಪ್ರಮುಖವಾಗಿ ಕಟಪಾಡಿ, ಉಡುಪಿ, ಮಂಗಳೂರು ಮಾರುಕಟ್ಟೆಗಳಿಗೆ ಲಗ್ಗೆ ಇರಿಸುವ ಮಟ್ಟುಗುಳ್ಳಕ್ಕೆ ವಿಶೇಷ ಬೇಡಿಕೆ ಇದೆ.
ಮರೀಚಿಕೆಯಾಗುಳಿದ ಪರಿಹಾರ
ಕಳೆದ ಬಾರಿ ಕೊçಲಿಗೆ ಬಂದಿದ್ದ ಮಟ್ಟು ಗುಳ್ಳಬೆಳೆಯು ಅಪಾರ ಪ್ರಮಾಣದಲ್ಲಿ ಬೆಳೆಗಾರರಿಗೆ ನಷ್ಟ ಉಂಟು ಮಾಡಿತ್ತು.
ಈ ಬಗ್ಗೆ ಶಾಸಕರು, ಜಿಲ್ಲಾಧಿಕಾರಿ, ವಿವಿಧ ಇಲಾಖಾಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದರು. ಪರಿಹಾರವಾಗಿ ಮಟ್ಟುಗುಳ್ಳಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಗೆ ಸೀಮಿತವಾಗುಳಿದಿದ್ದು, ಪರಿಹಾರ ಧನ ಮಾತ್ರ ಮರೀಚಿಕೆಯಾಗಿದೆ ಎಂದು ಬೆಳೆಗಾರರು ಸಂಕಷ್ಟವನ್ನು ತೋಡಿ ಕೊಂಡಿದ್ದರು.
ಬೆಳೆಯಲು ಹಾಕಲಾಗಿದ್ದ ಗೊಬ್ಬರ,ಮಲ್ಚಿಂಗ್ ಶೀಟ್ ಸಹಿತವಾಗಿ ಮಟ್ಟುಗುಳ್ಳದ ಫಸಲು, ಗಿಡ ಸಹಿತವಾಗಿ ಎಲ್ಲವೂ ನಷ್ಟವನ್ನು ಅನುಭವಿಸುವಂತಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ:ವಿಜಯಲಕ್ಷ್ಮಿ ಕಷ್ಟಕ್ಕೆ ಸ್ಪಂದಿಸಿದ ಕನ್ನಡಿಗರು|’ನಾಗಮಂಡಲ’ ನಟಿಗೆ ಹರಿದು ಬಂತು ಸಹಾಯ ಧನ
ಜಿಐ ಮಾನ್ಯತೆ
ಇಲ್ಲಿನ ಕೃಷಿಕರು ಭತ್ತದ ಬೆಳೆಯನ್ನು ಬೆಳೆಯುವ ಗದ್ದೆಯಲ್ಲಿ ಪ್ರತೀ ವರ್ಷ ಗುಳ್ಳ ಕೃಷಿ ಮಾಡುತ್ತಾರೆ. ಅನೇಕರು ಜೂನ್, ಜುಲೈನಲ್ಲಿ ಬೆಳೆಯಲಾಗುವ ಕಾರ್ತಿ ಭತ್ತದ ಬೆಳೆಯನ್ನು ಮೊಟಕುಗೊಳಿಸಿ ಗದ್ದೆ ಹಡಿಲುಬಿಟ್ಟು ಗುಳ್ಳದ ಬಿತ್ತನೆ ನಡೆಸುತ್ತಾರೆ. ಮೂರು ತಿಂಗಳ ಕಾಲಾವಕಾಶದಲ್ಲಿ ಸಸಿ ಬಲಿತು ಸಮೃದ್ಧ ಗುಳ್ಳದ ಬೆಳೆಯಾಗುತ್ತದೆ. ಇದೀಗ ಜಿಐ ಮಾನ್ಯತೆ ಯೊಂದಿಗೆ ಪೇಟೆಂಟ್ ಪಡೆದು ಸ್ಟಿಕ್ಕರ್‌ನೊಂದಿಗೆ ಮುಂಬಯಿ, ಬೆಂಗಳೂರು ಸೇರಿದಂತೆ ದೇಶ-ವಿದೇಶಗಳಿಗೂ ಮಟ್ಟುಗುಳ್ಳ ತಲುಪಲಿದೆ.
ಸುಲಭ ಸಾಲ
ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಮಟ್ಟುಗುಳ್ಳವನ್ನು ಬೆಳೆಯುವ ಬೆಳೆಗಾರರನ್ನು ಆರ್ಥಿಕವಾಗಿ ಸದೃಢಗೊಳಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಲಭ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ಆ ಮೂಲಕ ಉತ್ತಮ ಆರ್ಥಿಕ ವ್ಯವಹಾರವನ್ನು ಹೊಂದಿರುವ ಮಟ್ಟುಗುಳ್ಳ ಬೆಳೆಗಾರರ ಸಂಘಕ್ಕೆ ಮತ್ತಷ್ಟು ಯುವ ಮಟ್ಟುಗುಳ್ಳ ಬೆಳೆಗಾರರು ಹೆಚ್ಚು ಆಸಕ್ತರಾಗಿ ಅವರು ಮಟ್ಟುಗುಳ್ಳ ಕೃಷಿ ಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡುವ ದೃಷ್ಟಿಕೋನವನ್ನು ಇರಿಸಿ ಆರ್ಥಿಕ ಸಹಕಾರವನ್ನು ನೀಡಲಾಗುತ್ತಿದೆ.
– ಜಗದೀಶ ವಿ. ತಿಂಗಳಾಯ, ಸಿ.ಇ.ಒ, ಕೈಪುಂಜಾಲು ಮೀನುಗಾರರ ಪ್ರಾಥಮಿಕ ವಿವಿಧೋದ್ದೇಶ
ಸಹಕಾರಿ ಸಂಘ
ಉತ್ತಮ ಇಳುವರಿ
ಈ ಬಾರಿ ಮಟ್ಟುಗುಳ್ಳ ಬೆಳೆಯು ಮಾರುಕಟ್ಟೆಗೆ ಬರಲಾರಂಭಿಸಿದೆ. ನವರಾತ್ರಿಯ ಸಂದರ್ಭ ಹೆಚ್ಚಿನ ಪ್ರಮಾಣದಲ್ಲಿ ಮಟ್ಟುಗುಳ್ಳ ಮಾರುಕಟ್ಟೆ ಪ್ರವೇಶಿಸಲಿದೆ. ಅನುಕೂಲಕರ ವಾತಾವರಣದ ನಿರೀಕ್ಷೆಯಲ್ಲಿ ಇದ್ದು, ಬೆಳೆಗಾರರಿಗೆ ಉತ್ತಮ ಇಳುವರಿಯ ಸಾಧ್ಯತೆ ಇದೆ. ಜಡಿಮಳೆ ಬಂದಲ್ಲಿ ಬೆಳೆಹಾನಿಯಾಗುವ ಆತಂಕ ಇದೆ. ನಿರಂತರ ವ್ಯವಹಾರ ನಡೆಸಿದ ಮಟ್ಟುಗುಳ್ಳ ಬೆಳೆಗಾರರಿಗೆ ಕೈಪುಂಜಾಲು ಮೀನುಗಾರರ ಪ್ರಾಥಮಿಕ ವಿವಿಧೋದ್ದೇಶ ಸಹಕಾರಿ ಸಂಘದ ಮೂಲಕ ಒಂದು ವರ್ಷದ ಅವಧಿಗೆ ಇಪ್ಪತ್ತು ಸಾವಿರ ರೂ. ಸುಲಭ ಸಾಲವನ್ನು ಒದಗಿಸಿ ಸಹಕರಿಸಲಾಗುತ್ತದೆ.
– ಸುನಿಲ್ ಡಿ. ಬಂಗೇರ, ಅಧ್ಯಕ್ಷರು, ಮಟ್ಟುಗುಳ್ಳ ಬೆಳೆಗಾರರ ಸಂಘ
– ವಿಜಯ ಆಚಾರ್ಯ ಉಚ್ಚಿಲ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.