ತ್ಯಾಜ್ಯ ಪರ್ವತಕ್ಕೆ ಮುಕ್ತಿ; ಸ್ವತ್ಛ ಭಾರತ್, ಅಮೃತ್ ಯೋಜನೆ 2ನೇ ಆವೃತ್ತಿಗೆ ಚಾಲನೆ
ಇಂದು ಜಲಜೀವನ ಮಿಷನ್ ಆ್ಯಪ್ ಲೋಕಾರ್ಪಣೆ
Team Udayavani, Oct 2, 2021, 5:50 AM IST
ಹೊಸದಿಲ್ಲಿ: “ತ್ಯಾಜ್ಯ ಪರ್ವತಗಳ ತೆರವು’, “ತ್ಯಾಜ್ಯ ಮುಕ್ತ ನಗರಗಳ ನಿರ್ಮಾಣ’ದ ಧ್ಯೇಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸ್ವಚ್ಛ ಭಾರತ ಯೋಜನೆ (ನಗರ) ಮತ್ತು ಅಮೃತ್ ಯೋಜನೆಗಳ ಎರಡನೇ ಆವೃತ್ತಿಗೆ ಚಾಲನೆ ನೀಡಿದ್ದಾರೆ.
ದಿಲ್ಲಿಯ ಅಂಬೇಡ್ಕರ್ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ 2ನೇ ಹಂತದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ, “ನಗರಗಳನ್ನು ತ್ಯಾಜ್ಯ ಮುಕ್ತಗೊಳಿಸುವುದೇ ಸ್ವಚ್ಛ ಭಾರತ್ ಮಿಷನ್ 2.0ರ ಉದ್ದೇಶವಾಗಿದೆ. ಅದರಂತೆ ನಗರಗಳಲ್ಲಿ ರುವ ತ್ಯಾಜ್ಯ ಪರ್ವತಗಳನ್ನು ಸಂಸ್ಕರಿಸಿ ತೆರವು ಮಾಡಲಾಗುವುದು. ನಗರ ಪ್ರದೇಶಗಳಲ್ಲಿ ಸಮರ್ಪಕ ನೀರಿನ ಪೂರೈಕೆ, ಕೊಳಚೆ ನೀರು ನದಿಗಳಿಗೆ ಹರಿಯದಂತೆ ತಡೆಯುವುದು ಕೂಡ ಈ ಯೋಜನೆಯ ಭಾಗವಾಗಿದೆ’ ಎಂದಿದ್ದಾರೆ.
ಜತೆಗೆ ಈ ಯೋಜನೆಗಳ 2ನೇ ಹಂತಗಳು ಡಾ| ಅಂಬೇಡ್ಕರ್ ಅವರ ಕನಸುಗಳನ್ನು ನನಸಾಗಿಸುವಲ್ಲಿ ಪ್ರಮುಖ ಹೆಜ್ಜೆ ಯಾಗಿವೆ. ಏಕೆಂದರೆ ನಗರ ಅಭಿವೃದ್ಧಿ ಕೂಡ ಅಸಮಾನತೆಯನ್ನು ತೊಡೆದುಹಾಕುವ ಕ್ರಮವಾಗಿದೆ ಎಂದು ಅಂಬೇಡ್ಕರ್ ನಂಬಿ ದ್ದರು. ಅನೇಕರು ಉತ್ತಮ ಬದುಕಿನ ಕನಸಿನೊಂದಿಗೆ ಗ್ರಾಮಗಳಿಂದ ನಗರಗಳಿಗೆ ಬರುತ್ತಾರೆ. ನಗರಗಳಲ್ಲಿ ಉದ್ಯೋಗ ಪಡೆಯುತ್ತಾರಾದರೂ ಅವರ ಜೀವನ ಮಟ್ಟವು ಗ್ರಾಮ ಗಳಿಗಿಂತಲೂ ಕೆಟ್ಟ ಸ್ಥಿತಿಯಲ್ಲಿರುತ್ತದೆ. ಇಂಥ ಪರಿಸ್ಥಿತಿ ಬದಲಾಗಬೇಕು ಎನ್ನುವುದು ಅಂಬೇಡ್ಕರ್ ಕನಸಾಗಿತ್ತು ಎಂದಿದ್ದಾರೆ ಮೋದಿ.
ಯುವ ತಲೆಮಾರು ಎಚ್ಚೆತ್ತಿದೆ
ಸ್ವಚ್ಛತಾ ಅಭಿಯಾನವನ್ನು ಬಲಿಷ್ಠಗೊಳಿಸುವ ಕೆಲಸವನ್ನು ಯುವ ತಲೆಮಾರು ಆರಂಭಿಸಿದೆ. ಚಾಕ್ಲೆಟ್ ಕವರ್‌ಗಳನ್ನು ಈಗ ಯಾರೂ ಎಲ್ಲೆಂದರಲ್ಲಿ ಎಸೆಯುತ್ತಿಲ್ಲ; ಜೇಬಿಗೆ ಹಾಕಿಕೊಂಡು ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡುತ್ತಿ ದ್ದಾರೆ. ಪುಟ್ಟ ಮಕ್ಕಳು ಕೂಡ ದೊಡ್ಡವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳ ದಂತೆ ಸಲಹೆ ನೀಡುತ್ತಾರೆ. ಸ್ವತ್ಛತೆ ಕಾಪಾಡಿ ಕೊಳ್ಳುವುದು ಕೇವಲ ಒಂದು ದಿನ, ಒಂದು ವಾರ, ಒಂದು ವರ್ಷದ ಮಟ್ಟಿಗಲ್ಲ ಅಥವಾ ಕೆಲವೇ ಜನರಿಗೆ ಸೀಮಿತವೂ ಅಲ್ಲ. ಎಲ್ಲರಿಗೂ ಅನ್ವಯಿಸು ವಂಥದ್ದು, ತಲೆಮಾರಿ ನಿಂದ ಇನ್ನೊಂದು ತಲೆಮಾರಿಗೆ ಮುಂದು ವರಿಯುತ್ತಾ ಸಾಗ ಬೇಕಾದ್ದು ಎಂದೂ ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ:ವಾಣಿಜ್ಯ ಬಳಕೆ ಸಿಲಿಂಡರ್ ದರ 43 ರೂ. ಹೆಚ್ಚಳ
ಸ್ವಚ್ಛತೆಯ ಜನಾಂದೋಲನ
ಸ್ವಚ್ಛತೆ ಎನ್ನುವುದು ಈಗ ಜನಾಂ ದೋಲನವಾಗಿ ರೂಪುಗೊಂಡಿದೆ. ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಕೂಡ ತಮ್ಮನ್ನು ಬಯಲುಶೌಚ ಮುಕ್ತ ಎಂದು ಘೋಷಿಸಿಕೊಂಡಿವೆ. ಶೇ. 70ರಷ್ಟು ಘನತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತಿದೆ ಎಂದೂ ಮೋದಿ ಹೇಳಿ ದ್ದಾರೆ. ಕೇಂದ್ರ ಸರಕಾರವು ಅಮೃತ್ 2.0 (ಅಟಲ್ ಮಿಷನ್ ಫಾರ್ ರಿಜುವನೇಷನ್ ಆ್ಯಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಶನ್) ಯೋಜನೆಗೆ 2.87 ಲಕ್ಷ ಕೋಟಿ ರೂ. ಮತ್ತು ಎಸ್‌ಬಿಎಂ-ಯು 2.0 ಯೋಜನೆಗೆ 1.41 ಲಕ್ಷ ಕೋಟಿ ರೂ. ವೆಚ್ಚ ಮಾಡುತ್ತಿದೆ.
ಇಂದು ಗ್ರಾ.ಪಂ., ಪಾನಿ ಸಮಿತಿ ಜತೆ ಸಂವಾದ ಪ್ರಧಾನಿ
ಮೋದಿ ಅವರು ಶನಿವಾರ ದೇಶದ ಗ್ರಾ.ಪಂ.ಗಳು ಹಾಗೂ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಗಳೊಂದಿಗೆ ಜಲ ಜೀವನ ಮಿಷನ್ ಕುರಿತು ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಲಿದ್ದಾರೆ. ಇದೇ ವೇಳೆ ಜಲಜೀವನ ಮಿಷನ್ ಆ್ಯಪ್ ಲೋಕಾರ್ಪಣೆಗೊಳಿಸಿ, ರಾಷ್ಟ್ರೀಯ ಜಲಜೀವನ ಕೋಶ್‌ಗೂ ಚಾಲನೆ ನೀಡಲಿದ್ದಾರೆ.
ಗ್ರಾಮೀಣ ಪ್ರದೇಶಗಳ ಪ್ರತೀ ಮನೆ, ಶಾಲೆ, ಅಂಗನವಾಡಿ ಕೇಂದ್ರ, ಆಶ್ರಮಶಾಲೆ ಹಾಗೂ ಇತರ ಸರಕಾರಿ ಸಂಸ್ಥೆಗಳಿಗೆ ನೀರಿನ ಸಂಪರ್ಕ ಒದಗಿಸಲು ಈ ಕೋಶದ ಮೂಲಕ ಭಾರತದಲ್ಲಿರುವ ಅಥವಾ ವಿದೇಶ ಗಳಲ್ಲಿರುವ ವ್ಯಕ್ತಿಗಳು, ಸಂಸ್ಥೆಗಳು, ಕಾರ್ಪೊರೆಟ್ ಸೇರಿದಂತೆ ಯಾರು ಬೇಕಿ ದ್ದರೂ ದೇಣಿಗೆ ನೀಡಬಹುದು ಎಂದು ಪ್ರಧಾನಮಂತ್ರಿ ಕಾರ್ಯಾ ಲಯ ತಿಳಿಸಿದೆ.
ಅಮೃತ್ 2.0 ಉದ್ದೇಶವೇನು?
-2.68 ಕೋಟಿ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಮೂಲಕ 4,700 ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಮನೆ ಗಳಿಗೂ ಶೇ. 100ರಷ್ಟು ನೀರು ಪೂರೈಕೆ
-500 ಅಮೃತ ನಗರಗಳಲ್ಲಿ ಶೇ. 100ರಷ್ಟು ಚರಂಡಿ ವ್ಯವಸ್ಥೆ. ಈ ಮೂಲಕ ನಗರ ಪ್ರದೇಶಗಳ 10.5 ಕೋಟಿ ಜನರಿಗೆ ಅನುಕೂಲ
-ಜಲಮೂಲಗಳು ಹಾಗೂ ಅಂತರ್ಜಲ ಮೂಲಗಳ ಸಂರಕ್ಷಣೆ ಮತ್ತು ಪುನರುಜ್ಜೀವನ
ಎಸ್‌ಬಿಎಂ-ಯು 2.0 ಉದ್ದೇಶವೇನು?
01. ಮೂಲದಲ್ಲೇ ಘನ ತ್ಯಾಜ್ಯ ವಿಂಗಡನೆ. ರೆಡ್ನೂಸ್, ರೀಯೂಸ್, ರಿಸೈಕಲ್ ಎಂಬ “3 ಆರ್’ ಸೂತ್ರ ಅನುಷ್ಠಾನ
02.ನಗರಗಳಲ್ಲಿನ ತ್ಯಾಜ್ಯ ಪರ್ವತವನ್ನು ಸಂಸ್ಕರಿಸಿ, ಆ ಪ್ರದೇಶ ವನ್ನು ಸಂಪೂರ್ಣ ಸ್ವಚ್ಛ ಗೊಳಿಸುವುದು
03.ದೇಶದ ಎಲ್ಲ ನಗರಗಳನ್ನೂ ತ್ಯಾಜ್ಯಮುಕ್ತ ಗೊಳಿಸುವುದು.
04.ನಗರಪ್ರದೇಶಗಳಲ್ಲಿ ಬೂದು ಮತ್ತು ಕಪ್ಪು ನೀರಿನ ನಿರ್ವಹಣೆ
05.ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯಿರುವ ಊರುಗಳನ್ನು ಬಯಲು ಶೌಚ ಮುಕ್ತ ಗೊಳಿಸುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.