ಖಾದಿ ಮಳಿಗೆಯಲ್ಲಿ ಪತ್ನಿಗಾಗಿ ಸೀರೆ ಖರೀದಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
Team Udayavani, Oct 2, 2021, 12:06 PM IST
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಖಾದಿ ಎಂಪೋರಿಯಂನಲ್ಲಿ ಖಾದಿ ಬಟ್ಟೆಗಳನ್ನು ಖರೀದಿಸಿದರು. ಈ ವೇಳೆ ತಮ್ಮೊಂದಿಗಿದ್ದ ಇತರ ಸಚಿವರಿಗೂ ಬಟ್ಟೆ ಖರೀದಿಸುವಂತೆ ಸೂಚಿಸಿದರು.
ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಸಿಎಂ ಬೊಮ್ಮಾಯಿ ಗಾಂಧಿ ಭವನದ ಪಕ್ಕದಲ್ಲಿರುವ ಖಾದಿ ಎಂಪೋರಿಯಂನಲ್ಲಿ ಬಟ್ಟೆ ಖರೀದಿ ಮಾಡಿದರು. ಹತ್ತು ಜುಬ್ಬಾ ಪೀಸ್ ಗಳು ಮತ್ತು ಪತ್ನಿಗಾಗಿ ಸೀರೆ ಖರೀದಿ ಮಾಡಿದರು. ಮೂರು ಸೀರೆ ನೋಡಿ, ಕೊನೆಗೆ ಒಂದು ಸೀರೆಯನ್ನು ಸಿಎಂ ಖರೀದಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಒಟ್ಟು 16031 ಬೆಲೆಯ ಬಟ್ಟೆ ಖರೀದಿಸಿದರು.
ಇದನ್ನೂ ಓದಿ:ಜಗದೀಶ್ ಮಾತನಾಡಿದ್ದು ತಪ್ಪಾಯ್ತು…ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ: ನಟಿ ವಿಜಯಲಕ್ಷ್ಮೀ
ಸಿಎಂ ಸೀರೆ ಖರೀದಿ ವೇಳೆ ಬಿ.ವೈ. ವಿಜಯೇಂದ್ರ ಆಗಮಿಸಿದರು. ಆಗ ಅವರಿಗೂ ಸೀರೆ ಖರೀದಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದರು. “ಬಾರಪ್ಪಾ, ಮನೆಯವರಿಗೆ ಸೀರೆ ಖರೀದಿ ಮಾಡು ಎಂದು ಸಿಎಂ ಹೇಳಿದಾಗ, “ ನಮಗೊಂದು ಸೀರೆ ಕೊಡಿ ಎಂದ ಬಿ.ವೈ.ವಿಜಯೇಂದ್ರ 4300 ರೂ ಬೆಲೆಯ ಸೀರೆ ಖರೀದಿ ಮಾಡಿದರು.
ಸಚಿವ ಗೋವಿಂದ ಕಾರಜೋಳರಿಗೆ ಸೀರೆ ತೆಗೆದುಕೊಳ್ಳಿ ಎಂದ ಸಿಎಂ ಹೇಳಿದಾಗ, “ಸಾರ್, ನನಗೆ ಅದೆಲ್ಲಾ ಗೊತ್ತಾಗಲ್ಲ” ಎಂದು ಸಚಿವ ಕಾರಜೋಳ ಹೇಳಿದರು. ಅದಕ್ಕೆ “ಈಗಲಾದ್ರೂ ಕಲಿತುಕೊಳ್ಳಿ’’ ಎಂದು ಸಿಎಂ ಹೇಳಿದರು. ಸಿಎಂ ಮಾತಿಗೆ ಕಟ್ಟು ಬಿದ್ದ ಗೋವಿಂದ ಕಾರಜೋಳ “ ಇರಲೀ, ನನಗೊಂದು ಸೀರೆ ಕೊಡಿ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.