![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Oct 2, 2021, 11:57 AM IST
ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಮಾಡಿದ್ದ ನಟಿ ವಿಜಯಲಕ್ಷ್ಮೀ “ಭಿಕ್ಷೆ ಅಂತ ಆದ್ರೂ ತಿಳಿದುಕೊಂಡು ನನಗೆ ಸಹಾಯ ಮಾಡಿ’ ಎಂದು ಜನರಲ್ಲಿ ಮನವಿ ಮಾಡಿದ್ದರು. ಈ ವೈರಲ್ ಆಗಿದ್ದು, ವಿಜಯಲಕ್ಷ್ಮೀ ಅವರ ಮನವಿಗೆ ಸ್ಪಂದಿಸಿದ ಜನ 1 ರೂಪಾಯಿಯಿಂದ ಸಾವಿರದವರೆಗೆ ಹಣ ವರ್ಗಾವಣೆ ಮಾಡಿದ್ದಾರೆ.
ಇದನ್ನೂ ಓದಿ:ರೋಹಿತ್ ಹುಡುಗರ ಪ್ಲೇ ಆಫ್ ಕನಸಿಗೆ ಅಡ್ಡಿಯಾಗುವುದೇ ಡೆಲ್ಲಿ ಕ್ಯಾಪಿಟಲ್ಸ್
ಇಲ್ಲಿಯವರೆಗೆ ಸುಮಾರು ಒಟ್ಟು 6,92, 350 ರೂ. ಹಣ ಸಂದಾಯವಾಗಿದೆ. ಶುಕ್ರವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯಲಕ್ಷ್ಮೀ, ತಮಗೆ ಆರ್ಥಿಕ ಸಹಾಯ ಮಾಡಿದವರಿಗೆ ಧನ್ಯವಾದ ತಿಳಿಸಿದರು. “ಅಮ್ಮ ತೀರಿಹೋದ ತಕ್ಷಣ ಏನು ತೋಚಲಿಲ್ಲ, ನನಗೆ ಅಳ್ಳೋದು ಬಿಟ್ಟು ಬೇರೇನೂ ಗೊತ್ತಾಗಲಿಲ್ಲ. ಈ ವೇಳೆ ಅನೇಕರು ನನ್ನ ಸಹಾಯಕ್ಕೆ ಬಂದರು.
ಕಲಾವಿದರು ಎಲ್ಲ ಒಂದೇ ಕುಟುಂಬ. ಶಿವಣ್ಣ, ಯಶ್ ಹತ್ರನೂ ಮಾತನಾಡಿದ್ದೀನಿ. ವಕೀಲ ಜಗದೀಶ್ ಮಾತನಾಡಿದ್ದು ಸ್ವಲ್ಪ ತಪ್ಪಾಯ್ತು. ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ, ಎಲ್ಲದಕ್ಕೂ ನಾವು ಭಿಕ್ಷೆ ಬೇಡುತ್ತೇವೆ’ ಎಂದರು.
ವಿಜಯಲಕ್ಷ್ಮೀ ನೆರವಿಗೆ ಕನ್ನಡ ಚಿತ್ರರಂಗ ಬಂದಿಲ್ಲ ಎಂಬ ವಕೀಲ ಜಗದೀಶ್ ಹೇಳಿಕೆಗೆ ವಾಣಿಜ್ಯ ಮಂಡಳಿ ಗರಂ ಆಗಿದೆ. ಇದೇ ವೇಳೆ ಈ ಬಗ್ಗೆ ಮಾತನಾಡಿದ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಎನ್. ಎಂ ಸುರೇಶ್, “ಚಿತ್ರರಂಗದ ಬಗ್ಗೆ ಮಾತಾಡೋಕೆ ಈ ಜಗದೀಶ್ ಯಾರು? ನಿಮ್ಮ ಕೇಸ್ ಮಾಡ್ಕೊಂಡು ಸುಮ್ಮನೆ ಇರಿ. ಸಿನಿಮಾ ಇಂಡಸ್ಟ್ರಿಯ ಬಗ್ಗೆ ಮಾತಾಡೋ ಹಕ್ಕು ನಿಮಗಿಲ್ಲ. ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಹುಷಾರ್. ಚಿತ್ರರಂಗ ಹೇಗೆ ಬೆಳೆದು ಬಂದಿದೆ ಅಂತ ನಮಗೆ ಗೊತ್ತಿದೆ’ ಎಂದು ಹೇಳಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.