‘ಕಾಗೆ ಮೊಟ್ಟೆ’ ಚಿತ್ರವಿಮರ್ಶೆ: ಕಾಗೆ ಗೂಡಲ್ಲೊಂದು ಕೃಷ್ಣನ್ ಲವ್‌ಸ್ಟೋರಿ
Team Udayavani, Oct 2, 2021, 12:37 PM IST
ಚಿತ್ರಮಂದಿರಗಳಲ್ಲಿ ಪೂರ್ಣ ಪ್ರವೇಶಾತಿ ಸಿಕ್ಕ ಮೊದಲ ದಿನ ಬಿಡುಗಡೆಯಾಗಿರುವ ಚಿತ್ರ “ಕಾಗೆ ಮೊಟ್ಟೆ’. ತುಂಬಾ ದಿನಗಳಿಂದ ಚಿತ್ರಮಂದಿರಗಳಿಂದ ದೂರ ಉಳಿದಿರುವ ಪ್ರೇಕ್ಷಕರನ್ನು ಮತ್ತೆ ಕರೆತರಬೇಕಾದರೆ ಸಿನಿಮಾಗಳಲ್ಲಿ ಒಂದಾ ಮಾಸ್ ಅಂಶ ಇರಬೇಕು ಅಥವಾ ಔಟ್ ಅಂಡ್ ಔಟ್‌ಲವ್‌ಸ್ಟೋರಿ ಇರಬೇಕು.
ಹಾಗೆ ನೋಡಿದರೆ “ಕಾಗೆಮೊಟ್ಟೆ’ ಅವೆರಡನ್ನೂ ಜೊತೆ ಜೊತೆಯಾಗಿ ನೀಡುವ ಚಿತ್ರ ಎಂದರೆ ತಪ್ಪಾಗಲಾರದು. ಅದರಲ್ಲೂ ಮಾಸ್ ಎಲಿಮೆಂಟ್ಸ್ ಸ್ವಲ್ಪ ಹೆಚ್ಚೇ ಇರುವ ಈ ಚಿತ್ರ ಮೊದಲ ದಿನವೇ ಸಿನಿಮಾ ಪ್ರೇಮಿಗಳನ್ನು ಚಿತ್ರಮಂದಿರದೊಳಗೆ ಎರಡು ಸ್ಟೆಪ್ ಹಾಕುವಂತೆ ಮಾಡಿದೆ.
“ಕಾಗೆ ಮೊಟ್ಟೆ’ ಒಂದು ರೌಡಿಸಂ ಹಿನ್ನೆಲೆಯ ಸಿನಿಮಾ. ಬೆಂಗಳೂರಿನ ಅಂಡರ್‌ವರ್ಲ್ಡ್ಗೆ ತಾವೇ ಅಧಿಪತಿಯಾಗಬೇಕೆಂಬ ಆಸೆಯಿಂದ ಹಳ್ಳಿಯಿಂದ ಬೆಂಗಳೂರಿಗೆ ಬರುವ ಯುವಕರ ಕಥೆಯನ್ನು “ಕಾಗೆಮೊಟ್ಟೆ’ ಒಳಗೊಂಡಿದೆ. ಬಿಸಿ ರಕ್ತದ ಯುವಕರ ಹುಮ್ಮಸ್ಸು, ಕರಾಬ್ ದುನಿಯಾದಲ್ಲಿ ಮೆರೆದಾಡಬೇಕೆಂಬ ಕನಸು, ಜೊತೆಗೊಂದು ಲವ್‌ಸ್ಟೋರಿ… ಈ ಅಂಶಗಳೊಂದಿಗೆ ಸಾಗುವ ಸಿನಿಮಾ, ಮನರಂಜನೆಗೆ ಮೋಸ ಮಾಡುವುದಿಲ್ಲ.
ಒಂದು ಅಂಡರ್‌ವರ್ಲ್ಡ್ ಹಿನ್ನೆಲೆಯ ಸಿನಿಮಾವನ್ನು ಹೇಗೆ ಕಟ್ಟಿಕೊಡಬೇಕೆಂಬ ಕಲ್ಪನೆ ನಿರ್ದೇಶಕ ಚಂದ್ರಹಾಸ್ ಅವರಿಗೆ ಚೆನ್ನಾಗಿಯೇ ಇದೆ ಎಂಬುದು ಚಿತ್ರ ನೋಡಿದಾಗ ಗೊತ್ತಾಗುತ್ತದೆ. ಮುಖ್ಯವಾಗಿ ಇಂತಹ ಕಥೆಗೆ ಲೊಕೇಶನ್ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಆ ನಿಟ್ಟಿನಲ್ಲಿ ನಿರ್ದೇಶಕರು ಚಿತ್ರಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುವ ಪರಿಸರದೊಂದಿಗೆ ಕಟ್ಟಿಕೊಟ್ಟಿದ್ದಾರೆ.
ಇದನ್ನೂ ಓದಿ:ಜಗದೀಶ್ ಮಾತನಾಡಿದ್ದು ತಪ್ಪಾಯ್ತು…ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ: ನಟಿ ವಿಜಯಲಕ್ಷ್ಮೀ
ರೌಡಿಸಂ ಸಿನಿಮಾ ಎಂದಮೇಲೆ ಸಹಜವಾಗಿ ಸ್ನೇಹ, ಜಿದ್ದು, ಸ್ಕೆಚ್, ಹೊಡೆದಾಟ, ಬಡಿದಾಟ ಸಹಜ. ಆದರೆ, ಈ ಅಂಶಗಳನ್ನೇ “ಕಾಗೆ ಮೊಟ್ಟೆ’ಯಲ್ಲಿ ಭಿನ್ನ ರೀತಿಯಲ್ಲಿ ಹೇಳಲು ಪ್ರಯತ್ನಿಸಲಾಗಿದೆ. ಚಿತ್ರದಲ್ಲಿ ತಣ್ಣನೆ ಕಾಡುವ ಪ್ರೀತಿಯ ಜೊತೆಗೆ ರೌಡಿಸಂ ಕ್ರೇಜ್‌ನ ಯುವಕರಿಗೆ ಒಂದು ಸಂದೇಶ ಕೂಡಾ ಇದೆ. ವಿ.ನಾಗೇಂದ್ರ ಪ್ರಸಾದ್ ಸಂಭಾಷಣೆ ಕಥೆಗೆ ಪೂರಕವಾಗಿದೆ.
ನಟ ಗುರುರಾಜ್ ಪಕ್ಕಾ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಸತ್ಯಜಿತ್ ಹಾಗೂ ಇತರರು ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಚಿತ್ರದ ಹಾಡೊಂದು ಗುನುಗುವಂತಿದೆ. ಪಿ.ಎಲ್.ರವಿ ಛಾಯಾಗ್ರಹಣದಲ್ಲಿ “ಕಾಗೆ ಮೊಟ್ಟೆ’ ಸುಂದರ. ಅವರ ಛಾಯಾಗ್ರಹಣದ ಶ್ರಮ ಅಲ್ಲಲ್ಲಿ ಎದ್ದು ಕಾಣುತ್ತದೆ.
ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.